Digital literacy is a must for self help society members: Deepa Aralikatti
ರಾಯಚೂರು ಜ.08,(ಕರ್ನಾಟಕ ವಾರ್ತೆ): ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಸಾಕ್ಷರತೆ ಮುಂದೆವರೆದಿದ್ದು, ಗ್ರಾಮೀಣ ಜನತೆ ಡಿಜಿಟಲ್ ಸಾಕ್ಷರತೆಯ ಕೌಶಲಗಳನ್ನು ತಿಳಿದು ಅಳವಡಿಸಿಕೊಳ್ಳುವ ಅಗತ್ಯವಿದೆ. ಪ್ರಸ್ತುತ 21ನೇ ಶತಮಾನದಲ್ಲಿ ಮುಖ್ಯವಾಗಿ ಸಮುದಾಯದ ಜನರು ಅದರಲ್ಲೂ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರು ಡಿಜಿಟಲ್ ಸಾಕ್ಷರತೆ ಪಡೆದುಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಮಾನವಿ ತಾಲ್ಲೂಕು ಪಂಚಾಯತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕರಾದ ದೀಪಾ ಅರಳಿಕಟ್ಟಿ ಅವರು ಹೇಳಿದರು.
ಜ.08ರ ಬುಧವಾರ ಜಿಲ್ಲೆಯ ಮಾನವಿ ಪಟ್ಟಣದ ಸಾಮರ್ಥ್ಯಸೌಧದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ್ ರಾಯಚೂರು, ತಾಲ್ಲೂಕು ಪಂಚಾಯತಿ ಮಾನವಿ, ತಾಲ್ಲೂಕು ಎನ್.ಆರ್.ಎಲ್.ಎಮ್ ಘಟಕ ಮಾನವಿ, ಶಿಕ್ಷಣ ಫೌಂಡೇಶನ್ ವತಿಯಿಂದ ಮುಖ್ಯ ಪುಸ್ತಕಗಾರರಿಗೆ ಆಯೋಜಿಸಿದ್ದ ಡಿಜಿಟಲ್ ಸಾಕ್ಷರತೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಪ್ರತಿಯೊಂದು ದೈನಂದಿನ ಕಾರ್ಯ ಚಟುವಟಿಕೆಗಳು ಬಹುತೇಕ ಮೊಬೈಲ್ ಫೋನ್ ಮೂಲಕವೇ ನಡೆಯುತ್ತವೆ. ಎಲ್ಲಾ ಮಾಹಿತಿಯು ಅಂಗೈಯಲ್ಲಿ ಲಭ್ಯವಾಗಲು ಸಹಾಯಕವಾಗುವ ಮೊಬೈಲ್ ಪೋನಗಳನ್ನು ಸರಿಯಾಗಿ ಬಳಸಬೇಕು. ಫೋನ್‌ನಲ್ಲಿ ನಂಬರ್ ಸೇವ್ ಮಾಡುವುದು. ಸಂದೇಶಗಳನ್ನು ನೋಡುವುದು, ಮಕ್ಕಳಿಂದ ಫೋನ್ ದೂರ ಇರುವ ಫೋನ್ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕು ಎಂದು ತಿಳಿಸಿದರು.
ಡಿಜಿಟಲ್ ಸಾಕ್ಷರತೆ ತರಬೇತಿಯು ಸಮುದಾಯ ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ಸಂವಹನ ಮಾಡಲು, ಮಾಹಿತಿಯನ್ನು ಬಳಕೆ ಮಾಡಲು, ವ್ಯವಹಾರ ನಡೆಸಲು ಹಾಗೂ ಸರಳ ಡಿಜಿಟಲ್ ವಹಿವಾಟುಗಳಿಗಾಗಿ ಸ್ಪಾರ್ಟ್ ಫೋನಗಳಂತಹ ಡಿಜಿಟಲ್ ಸಾಧನಗಳನ್ನು ಆತ್ಮವಿಶ್ವಾಸದಿಂದ ಬಳಸಲು ಅಗತ್ಯವಿರುವ ಕೌಶಲ್ಯಗಳನ್ನು ವೃದ್ಧಿಸಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಣ ಫೌಂಡೇಷನ್ ಜಿಲ್ಲಾ ಸಂಯೋಜಕರಾದ ಭಾಸ್ಕರ್ ಅವರು ಪ್ರಾಸ್ತಾವಿಕ ಮಾತನಾಡಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಡಿಜಿಟಲ್ ಸಾಕ್ಷರತೆ ಸಹಕಾರಿಗುತ್ತದೆ. ಡಿಜಿಟಲ್ ಆರ್ಥಿಕತೆಯಲ್ಲಿ ಜನರನ್ನು ಸಶಕ್ತಗೊಳಿಸಲು ಹಾಗೂ ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಮೊಬೈಲ್ ಬ್ಯಾಂಕಿಂಗ್ ನಂತಹ ಡಿಜಿಟಲ್ ಪಾವತಿಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಎನ್.ಆರ್.ಎಲ್.ಎಮ್ ವಲಯ ಮೇಲ್ಚಿಚಾರಕಾರದ ಸೂರತ್ ಪ್ರಸಾದ ಗಟ್ಟು, ಶರಣು ಬಸವ, ಉಮೇಶ, ರಾಜೀವ್ ಗಾಂಧಿ ಫೆಲೋಶಿಫ್ ಅಜುರುದ್ಧಿನ್, ಡಿಇಓ ಬಸವರಾಜ, ತಾಲ್ಲೂಕು ಸಂಯೋಜಕ ಜ್ಯೋತಿ ಬಸ್ಸು, ಚಕ್ರಪಾಣಿ, ಅರಿವು ಕೇಂದ್ರದ ಜಿಲ್ಲಾಧ್ಯಕ್ಷ ವಿರುಪಾಕ್ಷ, ತಾಲ್ಲೂಕು ಪಂಚಾಯತಿ ಸಂಪನ್ಮೂಲ ವ್ಯಕ್ತಿ ರುದ್ರಮ್ಮ, ಚನ್ನಬಸ್ಸಮ್ಮ ಸೇರಿದಂತೆ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು ಹಾಜರಿದ್ದರು.