KPI training program for building and other construction workers in Dasanal village
ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ಇಂದು ಸಿಐಟಿಯು ನೇತೃತ್ವದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿAದ ಗ್ರಾಮದ ಕಟ್ಟಡ ಕಾರ್ಮಿಕರಿಗೂ ಮತ್ತು ಬೂದಗುಂಪ ಕಟ್ಟಡ ಕಾರ್ಮಿಕರಿಗೂ ಖPಐ ತರಬೇತಿಯನ್ನು ನೀಡಲಾಯಿತು ಎಂದು ಸಿಐಟಿಯುನ ಜಿಲ್ಲಾ ಅಧ್ಯಕ್ಷರಾದ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಈ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ತರಬೇತಿಯಲ್ಲಿ ಕಟ್ಟಡ ಕಾರ್ಮಿಕರ ಜಿಲ್ಲಾ ಅಧ್ಯಕ್ಷರಾದ ಕಾಸಿಂ ಸರ್ದಾರ್ ಹಾಗೂ ಕೃಷಿ ಕೂಲಿಕಾರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಹುಸೇನಪ್ಪ ಕೆ ಮಾತನಾಡಿದರು.
ಈ ತರಬೇತಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಶಿವಣ್ಣ ಬೆಣಕಲ್, ಕೂಲಿಕಾರರ ಸಂಘದ ತಾಲೂಕ ಅಧ್ಯಕ್ಷರಾದ ಮರಿನಾಗಪ್ಪ ಡಗ್ಗಿ, ಕೂಲಿಕಾರರ ಜಿಲ್ಲಾ ಮುಖಂಡರಾದ ಬಾಳಪ್ಪ ಹುಲಿಹೈದರ್, ರೈತ ಸಂಘದ ತಾಲೂಕು ಉಪಾಧ್ಯಕ್ಷರಾದ ಮುತ್ತಣ್ಣ ದಾಸನಾಳ, ರೈತ ಸಂಘದ ಮುಂಖಡರಾದ ದುರಗಪ್ಪ ನಿಂಗಪ್ಪ, ತಾಲೂಕು ಉಪಾಧ್ಯಕ್ಷರಾದ ರಮೇಶ್ ಬೂದುಗುಂಪ, ಸಿಐಟಿಯು ತಾಲೂಕ ಕಾರ್ಯದರ್ಶಿಯಾದ ಮಂಜುನಾಥ ಡಗ್ಗಿ ಮತ್ತು ಘಟಕದ ಮುಖಂಡರುಗಳು ಉಪಸ್ಥಿತರಿದ್ದರು.