Credit goes to Trimurti for bringing palace music to Gurumane : Kallaiah Ajjanavaru
ಗಂಗಾವತಿ : ಸಂಗೀತದ ಐತಿಹಾಸಿಕ ಇತಿಹಾಸವನ್ನು ತೆಗೆದು ನೋಡಿದಾಗ ಸಂಗೀತ ಎಂಬುದು ಕೇವಲ ರಾಜ ಮಹಾರಾಜ ಸ್ವತ್ತಾಗಿತ್ತು, ಅಂತಹ ಸಂಗೀತ ಕಲೆಯನ್ನು ಗುರುಮನೆಗೆ ತಂದ ಕೀರ್ತಿ ಹಾನಗಲ್ ಕುಮಾರೇಶ್ವರರಿಗೆ ಹಾಗೂ ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಜೊತೆಗೆ ಅವರ ಶಿಷ್ಯರಾದ ತ್ರಿಭಾಷಾ ಕವಿ ಡಾಕ್ಟರ್ ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ಶುಕ್ರವಾರದಂದು ವಿಪ್ರ ನಗರದಲ್ಲಿರುವ ಗಾನಯೋಗಿ ಶ್ರೀ ಪುಟ್ಟರಾಜ ಗವಾಯಿಗಳವರ ಪುಣ್ಯಾಶ್ರಮ ಹಾಗೂ ಭಾರತೀಯ ಸಂಗೀತ ಕಲಾ ವೇದಿಕೆಯ ಹಿರೇಜಂತಕಲ್ ವಿರುಪಾಪುರ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಕೊಂಡ ಪುಟ್ಟರಾಜ ಗವಾಯಿಗಳವರ ಹದಿನೈದನೇ ಪುಣ್ಯಸ್ಮರಣೆ ಹಾಗೂ ಗಂಗಾವತಿಯ ಹಿರಿಯ ತಬಲವಾದಕ ವೀರೇಶ ಕಲ್ಮಠ ಅವರ ಪ್ರಥಮ ಪುಣ್ಯ ಸ್ಮರಣೆಯ ಪ್ರಯುಕ್ತ ಆಯೋಜಿಸಿದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ನುಡಿದರು.
ಗುರು ಪುಟ್ಟರಾಜರು ನುಡಿದಂತೆ ಗದಗ ಬಳಿಕ ಗಂಗಾವತಿ ಎರಡನೆಯಕೈಲಾಸ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಶಿಷ್ಯ ಪರಂಪರೆ ಭಕ್ತರು ಈ ಪುಣ್ಯ ಭೂಮಿಯಲ್ಲಿ ವಾಸಿಸಿದ್ದಾರೆ.
ಹೀಗಾಗಿ ವಿಪ್ರ ನಗರದಲ್ಲಿರುವ ಎರಡು ಎಕರೆ 40 ಗುಂಟೆ ಜಾಗವನ್ನು ಆಶ್ರಮಕ್ಕಾಗಿ ದಾನ ನೀಡಿದ ಪಾಮಪ್ಪ ಕುಟುಂಬದ ಕಾರ್ಯ ಮೆಚ್ಚುವಂತಹದು.
ಈ ಆಶ್ರಮ ಸಮಾಜದಲ್ಲಿನ ಬಡವರಿಗೆ, ದೀನ, ದಲಿತರಿಗೆ ವಿಕಲಾಂಗರಿಗೆ ಉಚಿತ ಸಂಗೀತ ಶಿಕ್ಷಣವನ್ನು ಕಲ್ಪಿಸುವ ಕಾರ್ಯ ಶ್ಲಾಘನೀಯವಾಗಿದ್ದು ಜೊತೆಗೆ ಆಶ್ರಮಕ್ಕೆ ಅಗತ್ಯವಿರುವ ಸೌಲಭ್ಯಕ್ಕೆ ದಾನಿಗಳು ಮುಂದಾಗಬೇಕೆಂದು ತಿಳಿಸಿದರು.
ಈ ವೇಳೆ ಪುಟ್ಟರಾಜರ ಪರಮಶಿಷ್ಯರಾದ ಕಾಶಿಮ್ ಅಲಿ ಮುದ್ದಾಬಳ್ಳಿಯವರು 1 ಲಕ್ಷ ರೂ. ಆಶ್ರಮಕ್ಕೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶೆಟ್ಟಿ. ಹಿರಿಯ ಸಂಗೀತ ಕಲಾವಿದ. ಹೆಚ್ ಮಹಾಬಲೇಶ್ವರ ವಕೀಲರು. ವೆಂಕಟೇಶ್ ದಾಸನಾಳ. ಎಸ್ ರಾಘವೇಂದ್ರ ಶೆಟ್ಟಿ. ಶ್ರೀಮತಿ ಹೂಗಾರ್, ಶಾಂತಮ್ಮ, ನರಸಿಂಹ ದರೋಜಿ ಸೇರಿದಂತೆ ವೇದಿಕೆಯಲ್ಲಿನ ಗಣ್ಯರು ಜ್ಯೋತಿ ಬೆಳಗಿಸಿ ಪುಟ್ಟರಾಜರ ಹಾಗೂ ವೀರೇಶ ಕಲ್ಮಠ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ವೀರೇಶ ಧರ್ಮ ಪತ್ನಿಗೆ, ಹಾಗೂ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ವಿವಿಧ ಕಲಾವಿದರು ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.