Massive free health check-up, eye check-up, dental check-up, cancer check-up and free blood donation camp
ಗಂಗಾವತಿ: ಲಯನ್ಸ್ ಕ್ಲಬ್ ವಿಜಯನಗರ ಬೆಂಗಳೂರು, ವೈದೇಹಿ ಆಸ್ಪತ್ರೆ ಬೆಂಗಳೂರು, ಶ್ರೀಮತಿ ಎ. ಕನಕರತ್ನದೇವಿ ಚಾರಿಟೇಬಲ್ ಟ್ರಸ್ಟ್ (ರಿ) ಶ್ರೀರಾಮನಗರ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ಮಾರುತಿ ಕಣ್ಣಿನ ಆಸ್ಪತ್ರೆ ಗಂಗಾವತಿ, ಕೆ.ಎಸ್. ಆಸ್ಪತ್ರೆ ಕೊಪ್ಪಳ, ಮಹಾಲಕ್ಷಿö್ಮÃ ಡೆಂಟಲ್ ಕ್ಲೀನಿಕ್ ಗಂಗಾವತಿ ಹಾಗೂ ಅಂಜನಾದ್ರಿ ರಕ್ತ ಭಂಡಾರ ಗಂಗಾವತಿ ಇವರುಗಳ ಸಹಯೋಗದಲ್ಲಿ ಜೂನ್-೧೪ ಭಾನುವಾರ ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರೆಗೆ ಗಂಗಾವತಿ ತಾಲೂಕಿನ ಶ್ರೀರಾಮನಗರದ ಕೋಟಯ್ಯಕ್ಯಾಂಪ್ ರಸ್ತೆಯಲ್ಲಿರುವ ಎ.ಕೆ.ಆರ್.ಡಿ ಪಿ.ಯು ಕಾಲೇಜ್ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣಾ, ದಂತ ತಪಾಸಣೆ, ಕ್ಯಾನ್ಸರ್ ತಪಾಸಣೆ ಹಾಗೂ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಉಚಿತ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು ಹಾಗೂ ಗಂಭೀರ ಕಾಯಿಲೆಗಳಾದ ಹೃದಯರೋಗ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗ, ನರರೋಗ, ಕಣ್ಣಿನ ತಪಾಸಣೆ, ದಂತ ತಪಾಸಣೆ, ಮೂತ್ರಪಿಂಡದ ಕಲ್ಲು ಕಾಯಿಲೆಗಳಿಗೆ ಸಂಬAಧಿಸಿದAತೆ ಚಿಕಿತ್ಸೆ ನೀಡಲಾಗುವುದು.
ಈ ಶಿಬಿರದಲ್ಲಿ ಭಾಗವಹಿಸಿದ ಹೃದಯ ಸಂಬAಧಿ, ಕ್ಯಾನ್ಸರ್ ಕಾಯಿಲೆ ಇರುವ ಬಿಪಿಎಲ್, ಅಂತ್ಯೋದಯ ರೇಷನ್ ಕಾರ್ಡುದಾರರಿಗೆ, ಯಶಸ್ವಿನಿ ಕಾರ್ಡ್ ಹಾಗೂ ಶ್ರೀ ಧರ್ಮಸ್ಥಳ ಸಂಘದ ಆರೋಗ್ಯ ರಕ್ಷಾ ಕಾರ್ಡ್ದಾರರಿಗೆ ಉಚಿತವಾಗಿ ಚಿಕಿತ್ಸೆ ಅಥವಾ ಶಸ್ತçಚಿಕಿತ್ಸೆಯನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಯಲ್ಲಿ ಕೊಡಿಸಲಾಗುವುದು. ಅದೇ ರೀತಿ ಈ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಶಸ್ತçಚಿಕಿತ್ಸೆಗೆ ಆಯ್ಕೆಯಾಗಿ ಯಶಸ್ವಿನಿ ಕಾರ್ಡ್ ಅಥವಾ ಶ್ರೀ ಧರ್ಮಸ್ಥಳ ಸಂಘದ ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ಕಾರ್ಡ್ ಹೊಂದಿದ ನೇತ್ರ ರೋಗಿಗಳಿಗೆ ಗಂಗಾವತಿಯ ಮಾರುತಿ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತçಚಿಕಿತ್ಸೆ ಮಾಡಿಸಲಾಗುವುದು ಮತ್ತು ಅಗತ್ಯ ನೇತ್ರರೋಗಿಗಳಿಗೆ ಉಚಿತ ಕನ್ನಡಕ ಹಾಗೂ ಔಷಧಿಗಳನ್ನು ಬೆಂಗಳೂರಿನ ಲಯನ್ಸ್ ಕ್ಲಬ್ ವಿಜಯನಗರ ಬೆಂಗಳೂರು ಇವರು ಉಚಿತವಾಗಿ ನೀಡಲಾಗಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಮೊಬೈಲ್ ೯೪೪೮೨೨೮೭೩೮ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.