ಕೊಪ್ಪಳ : ಇಂದು ಮಸಬಹಂಚಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾವರಾಳ ಗ್ರಾಮದಲ್ಲಿ ನಡೆದ ಮಹಾತ್ಮಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ, ವಿಶ್ವ ಜನಸಂಖ್ಯಾ ದಿನಾಚರಣೆ, ಮಲೇರಿಯಾ ವಿರೋಧಿ ಮಾಸಾಚರಣೆ, ರೋಜಗಾರ ದಿನಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ ವೈಜನಾಥ ಸಾರಂಗಮಠ ಮಾತನಾಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪಾಲ್ಗೊಳ್ಳುವ ಎಲ್ಲ ಕೂಲಿಕಾರರು ಆರೋಗ್ಯ ವಂತರಾಗಿರಬೇಕು, ಮತ್ತು ಆರೋಗ್ಯ ತಪಾಸಣೆ ಈಗ ಕಾಮಗಾರಿ ಸ್ಥಳದಲ್ಲಿಯೇ ಮಾಡುವುದರಿಂದ ಕೂಲಿಕಾರರು, ಹಿರಿಯ ನಾಗರೀಕರು, ಮಹಿಳಾ ಕೂಲಿಕಾರರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಂತರ ವೈದ್ಯಾಧಿಕಾರಿ ಪ್ರಕಾಶ ಮಾತನಾಡಿ ಮಳೆಗಾಲ ಸಮಯದಲ್ಲಿ ಮಲೇರಿಯಾ, ಡೆಂಗ್ಯೂ , ಜ್ವರ, ನೆಗಡಿ ಇಂಥ ಕಾಯಿಲೆಗಳು ಬರುವುದು ಸಾಮಾನ್ಯವಾಗಿದೆ ಅದಕ್ಕಾಗಿ ದುಡಿಯುವ ಕೂಲಿಕಾರರು ಮುನ್ನೆಚ್ಚರಿಕೆ ವಹಿಸಬೇಕು, ಕಾಯಿಸಿ ಆರಿಸಿದ ನೀರು ಕುಡಿಯಬೇಕು ಎಂದು ಹೇಳಿದರು.
ಜನಸಂಖ್ಯೆ ನಿಯಂತ್ರಣ ವನ್ನುಮಾಡಲು ಮಹಿಳೆಯರು, ಮತ್ತು ಪುರುಷರು ಶಸ್ತ್ರಚಿಕಿತ್ಸೆ ಇಲ್ಲದೆ ಮಕ್ಕಳುವಾಗದಂತೆ ತಡೆಯಬಹುದು, ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಗಾವರಾಳ, ವೈದ್ಯಕೀಯ ಸಿಬ್ಬಂದಿಗಳು,ಐ.ಇ.ಸಿ ಸಂಯೋಜಕರು, ಗ್ರಾಮ ಕಾಯಕ ಮಿತ್ರರು, ಕಾಯಕ ಬಂಧುಗಳು ಕೂಲಿಕಾರರು ಹಾಜರಿದ್ದರು.
ವರದಿ : ಪಂಚಯ್ಯ ಹಿರೇಮಠ,,,