Breaking News

ಮೊಹರಂ ಹಬ್ಬವನ್ನು ಶಾಂತತೆಯಿಂದ ಆಚರಿಸಿ- ಸಿಪಿಐ ಸುರೇಶ್ ,ಡಿ ತಾಕೀತು.

ಕೊಪ್ಪಳ :ತಾಲೂಕಿನ ಇಂದರಗಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಶಾಂತತೆಯಿಂದ ಆಚರಣೆ ಮಾಡಬೇಕು ಎಂದು ಸಭೆಯಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸುರೇಶ ಡಿ.ಹೇಳಿದರು.
ನಮ್ಮ ದೇಶದಲ್ಲಿ ಎಲ್ಲಾ ಹಬ್ಬಳಿಗೆ ತುಂಬಾ ವಿಭಿನ್ನವಾದ ಮಹತ್ವ ಇದೆ. ಈ ಹಬ್ಬಗಳಲ್ಲಿ ಹಿಂದೂ, ಮುಸ್ಲಿಂ ಬಾಂಧವರು ಸೇರಿ ಅಣ್ಣ ತಮ್ಮಂದಿರಂತೆ ಹಬ್ಬಗಳನ್ನು ಆಚರಿಸಬೇಕು. ಯಾವುದೇ ಅಹಿತ ಘಟನೆಗಳು ನಡೆಯಬಾರದು ಎಂದು ತಿಳಿಸಿದರು.
ಮೊಹರಂ ಹಬ್ಬದಲ್ಲಿ ಕೆಲವು ಕಿಡಿಗೇಡಿಗಳು ಸಣ್ಣ ಪುಟ್ಟ ವಿಷಯಗಳ ನೆಪವೊಡ್ಡಿ ಹಳ್ಳಿಯಲ್ಲಿ ಗಲಾಟೆ ಎಬ್ಬಿಸುತ್ತಾರೆ ಇಂಥವರು ಕಂಡರೆ ಅವರ ಮೇಲೆ ಕಠಿಣ ಕಾನೂನು ರೀತಿಯ ಕ್ರಮವನ್ನು ಜರುಗಿಸಲಾಗುವುದು ಎಂದರು.

ಜಾಹೀರಾತು

ಈ ಸಂದರ್ಭದಲ್ಲಿ ಮುನಿರಾಬಾದ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಎಚ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ಜಿಲ್ಲಾ ಉಪಾಧ್ಯಕ್ಷರಾದ ಮೈಲಾರಪ್ಪ ಬಂಡಾರಿ, ಹನುಮಂತಪ್ಪ ಪೂಜಾರ, ಹನುಮೇಶ್, ಎಮ್ಮಿ ನಾಗಪ್ಪ ಪೂಜಾರ, ಹನುಮೇಶ್ ಡಿ ಎಸ್ ಎಸ್, ಹರಿಜನ ಇಂದ್ರೇಶ್ ಕೊಳ್ಳಿ, ಆನಂದ ಕುರಿ, ಮತ್ತು ಊರಿನ ಹಿರಿಯರು ಹಾಗೂ ಗ್ರಾಮದ ಯುವಕರು ಪಾಲ್ಗೊಂಡು ಶಾಂತಿ ಸಭೆಯಲ್ಲಿ ಉಪ್ಥಿತರಿದ್ದರು.

About Mallikarjun

Check Also

ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಆರಂಭಿಸಿದ ನರೇಗಾ ನೌಕರರು

NREGA employees have started an indefinite non-cooperation movement by stopping work. 6 ತಿಂಗಳ ಬಾಕಿ ವೇತನ …

Leave a Reply

Your email address will not be published. Required fields are marked *