Mohan Kumar Danappa was conferred with the Adarsh Bharatiya Award by the Governor’s Special Duty Officer
ಬೆಂಗಳೂರು; ಡಿ 28, ದೇಶದಲ್ಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ದೇಶಾದ್ಯಂತ ಜಾಗೃತಿ ಮೂಢಿಸುತ್ತಿರುವ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರಿಗೆ ಕರ್ನಾಟಕ ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿಗಳಾದ ಆದರ್ಶ್ ಪಾಸ್ವಾನ್ ರವರು ಆದರ್ಶ ಭಾರತೀಯ ಪ್ರಶಸ್ತಿ (ಐಡಿಯಲ್ ಇಂಡಿಯನ್ ಅವಾರ್ಡ್) ನೀಡಿ ಅಭಿನಂದಿಸಿದರು!
ದೇಶದಲ್ಲಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಢಿಸುವ ನಿಟ್ಟಿನಲ್ಲಿ ರಾಜ್ಯ ಸೇರಿದಂತೆ ದೇಶಾದ್ಯಂತ ವಿನೂತನ ಮ್ಯಾರಥಾನ್ ಓಟದ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರ ಸಮರ್ಪಿತ ಪ್ರಯತ್ನಗಳು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಭಾರತೀಯ ಸಮಾಜಕ್ಕೆ ಬದ್ಧವಾದ ಕೊಡುಗೆ ನೀಡುತ್ತಿರುವ ಇವರ ಸೇವೆಯನ್ನ ಗುರುತಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ ಮ್ಯಾರಥಾನ್ ಜಾಗೃತಿ ವರ್ಗದಲ್ಲಿ ದಿ ಐಡಿಯಲ್ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನವರು 2023ನೇ ಸಾಲಿನ ಐಡಿಯಲ್ ಇಂಡಿಯನ್ ಅವಾರ್ಡ್-2023 ಪ್ರಶಸ್ತಿಯನ್ನು ಹೆಮ್ಮೆಯಿಂದ ನೀಡಿ ಭವಿಷ್ಯದಲ್ಲಿನ ಎಲ್ಲಾ ನಿರಂತರ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ,