Breaking News

ಆನೆಗುಂದಿ: ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಹುಂಡಿಯಲ್ಲಿ *ರೂ.31,77,385./ಸಂಗ್ರಹ

ಆನೆಗುಂದಿ:ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ಆನೆಗುಂದಿ (ಚಿಕ್ಕರಾಂಪುರ)ದಲ್ಲಿ
ಇಂದು ದಿ. 21/09/2023 ರಂದು ಮಂಜುನಾಥ ಗ್ರೇಡ್ -1 ತಹಶೀಲ್ದಾರರು ಗಂಗಾವತಿ ಇವರ ನೇತೃತ್ವದಲ್ಲಿ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ. 09-08-2023 ರಿಂದ 21-09-2023 ರವರೆಗೆ ಒಟ್ಟು 43 ದಿನಗಳ ಅವಧಿಯಲ್ಲಿ) ಒಟ್ಟು *ರೂ.31,77,385./-* ರೂ ಗಳು ಸಂಗ್ರಹವಾಗಿರುತ್ತದೆ. ಎರಡು ವಿದೇಶಿ ನೋಟು (ಯುಎಸ್ಎ, ಸೌದಿ ಅರೇಬಿಯಾ) ಮತ್ತು ಮೂರು ವಿದೇಶಿ ನಾಣ್ಯ (ಇಂಗ್ಲೆಂಡ್, ಓಮನ್, ಯುಎಸ್ಎ) ಹುಂಡಿಯಲ್ಲಿ ಸಂಗ್ರಹವಾಗಿರುತ್ತದೆ.
ಈ ಸಂದರ್ಭದಲ್ಲಿ ಗ್ರೇಡ್-2 ತಹಶೀಲ್ದಾರರು, ಶಿರಸ್ತೇದಾರಾದ ರವಿಕುಮಾರ ನಾಯಕವಾಡಿ,
ಮೈಬೂಬಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ ,ಮಹೇಶ್ ದಲಾಲ, ಹಾಲೇಶ್ ಗುಂಡಿ ತಹಶೀಲ್ ಕಾರ್ಯಾಲಯದ ಸಿಬ್ಬಂದಿಗಳಾದ ಶ್ರೀಕಂಠ, ಗುರುರಾಜ, ಇಂದಿರಾ ಪ್ರದಸ , ಸೌಭಾಗ್ಯ, ಸೈಯದ್ ಮುರ್ತುಜಾ,ಕವಿತಾ ಪೂಜಾ, ದ್ವಿ.ದ.ಸ ಮತ್ತು ಗಂಗಾವತಿ,ವೆಂಕಟಗಿರಿ ,ಮರಳಿ ಗ್ರಾಮ ಆಡಳಿತ ಅಧಿಕಾರಿಗಳು , ಗ್ರಾಮ ಸಹಾಯಕರು , ಹಾಗೂ ಪಿ ಕೆ ಜಿ ಬಿ ಸಣಾಪೂರ ಬ್ಯಾಂಕ್ ಸಿಬ್ಬಂದಿಗಳಾದ ರಾಜಶೇಖರ್, ಸುನಿಲ್ , ಪೋಲಿಸ್ ಸಿಬ್ಬಂದಿ ರೇಖಾ ಸಿ , ಪ್ರವಾಸಿ ಮಿತ್ರ ಹನುಮಂತಪ್ಪ, ಹುಸೇನ್ ಸಾಬ್ ಸಿಬ್ಬಂದಿಗಳು ಹಾಗೂ ವೆಂಕಟೇಶ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು

ಜಾಹೀರಾತು
ಜಾಹೀರಾತು

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ .08/08/2023 ರಂದು ಹುಂಡಿ ತೆರೆಯಲಾಗಿತ್ತು ಮೊತ್ತ ರೂ *25,27,155/-* ಸಂಗ್ರಹವಾಗಿತ್ತು.

About Mallikarjun

Check Also

ರಾಜಿಕ್ ಸಿಂಡ್ರೋಮ್ ನಿಂದ ಗೋವುಗಳ ಕರುಳಿನಲ್ಲಿ ರಕ್ತಸ್ರಾವ: ತಕ್ಷಣಕ್ರಮಕೈಗೊಳ್ಳುವಂತೆ ವಿಎಪಿಎಸ್ ಅಕ್ಷಯಾ ಫೌಂಡೇಶನ್ ಟ್ರಸ್ಟ್ ಪುಣ್ಯಕೋಟಿ ಗೋಶಾಲೆ ಒತ್ತಾಯ

Intestinal bleeding in cows due to Rajik syndrome: VAPS urges Akshaya Foundation Trust Punyakoti Goshala …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.