Taluk Best Teacher Awardee Srinivasa Naidu felicitated by Gangavati Friends

ಗಂಗಾವತಿ: ನೈತಿಕ ಶಿಕ್ಷಣದ ಜೊತೆಗೆ ಗುಣಮಟ್ಟದ ಶಿಕ್ಷಣ ಕೊಡುವುದು ಅತೀ ಅವಶ್ಯವಾಗಿದೆ.ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮುಖ್ಯ ಶಿಕ್ಷಕ ಶ್ರೀ ನಿವಾಸ ನಾಯ್ಡು ಸೇವೆ ಅಮೂಲ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಹೇಳಿದರು.
ಅವರು ಗಂಗಾವತಿ ಗೆಳೆಯರ ಬಳಗದ ವತಿಯಿಂದ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ನಾಯ್ಡು ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಲಕ್ಷ್ಮಣಗೌಡ, ಎಂ.ಶರಣಪ್ಪ,ಅಶೋಕ ಗೌಡ,ಸಿಂಗನಾಳ ಕುಮಾರೆಪ್ಪ,ರಂಗಪ್ಪ ನಾಯಕ,ರಾಜೇಂದ್ರ ನಾಯಕ,ಪತ್ರಕರ್ತರ ಸಂಘದ ಅಧ್ಯಕ್ಷ ಇಂಗಳಗಿ ನಾಗರಾಜ, ತಿಮ್ಮಣ್ಣ,ಗೋಟೂರು ಮಲ್ಲಿಕಾರ್ಜುನ, ಕುರಿ ರಾಮಣ್ಣ, ಶಿವರಾಮ,ರಂಗನಾಥ ಆನೆಗೊಂದಿ ಸೇರಿ ಅನೇಕರಿದ್ದರು.