ನೀರಿನ ಪೋಲು ತಡೆಯಲು ಕೂಡಲೇ ಕಾಲುವೆಗಳಿಗೆ ನೀರು ಹರಿಸುವಂತೆ ರೈತರ ಒತ್ತಾಯ
*ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಳ ಭತ್ತ ನಾಟಿ ಕೃಷಿಚಟುವಟಿಕೆ ನಿರತ ರೈತರು.
*ಮುಂಗಾರು ಮಳೆ ಅಧಿಕ ಐಸಿಸಿಗಾಗಿ ಕಾಯದೇ ನೀರು ಬಿಡಲು ಆಗ್ರಹ
*ಇತಿಹಾಸದ ಪ್ರಕಾರ ಡ್ಯಾಂ ನಿರ್ಮಾಣ ಆದಾಗಿನಿಂದಲೂ ಮುಂಗಾರು ಬೆಳೆ ಸಮೃದ್ಧ
*ನೀರಿನ ಕೊರತೆಯ ಸಂದರ್ಭದಲ್ಲಿ ಮಾತ್ರ ಐಸಿಸಿ ಸಭೆ ಕರೆಯುವ ಪದ್ಧತಿ
*ನಾಟಿ ಮಾಡಲು ಸಿದ್ಧಗೊಂಡಿರುವ ಭತ್ತದ ಸಸಿ ಮಡಿಗಳು
ಗಂಗಾವತಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯ ಕಾರಣಕ್ಕೆ ಈಗಾಗಲೇ ಡ್ಯಾಂ ನಲ್ಲಿ ೩೦ ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗಿದ್ದು ಕೂಡಲೇ ತುಂಗಭದ್ರಾ ಎಡದಂಡೆ ಕಾಲುವೆ ಸೇರಿ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರ ಮನವಿಯಾಗಿದ್ದು ಈಗಾಗಲೇ ಭತ್ತ ನಾಟಿ ಮಾಡಲು ಭತ್ತದ ಸಸಿ ಮಡಿ ಸಿದ್ಧವಾಗಿದ್ದು ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಪ್ರತಿ ವರ್ಷವೂ ಜುಲೈ-ಆಗಷ್ಟ್ ನಲ್ಲಿ ಕಾಲುವೆ ನೀರು ಹರಿಸುವುದರಿಂದ ಮುಂದೆ ಭತ್ತದ ಬೆಳೆ ಚಳಿಗಾಲಕ್ಕೆ ಸಿಗದೇ ಉತ್ತಮ ಇಳುವರಿ ಬರುತ್ತದೆ. ಆದ್ದರಿಂದ ರೈತರು ನದಿ ಪಾತ್ರ ಹಾಗೂ ಪಂಪ್ ಸೆಟ್‌ಗಳಲ್ಲಿ ಭತ್ತದ ಸಸಿ ಮಡಿಕೊಂಡು ಅಗತ್ಯವಿರುವ ರಸಗೊಬ್ಬರ, ಕ್ರಿಮಿನಾಶಕಗಳನ್ನು ಸಂಗ್ರಹ ಮಾಡಿದ್ದು ಕಾಲುವೆಗಳಿಗೆ ಕೂಡಲೇ ನೀರು ಹರಿಸುವ ಮೂಲಕ ಬೇಗನೆ ಭತ್ತದ ನಾಟಿ ಕಾರ್ಯಕ್ಕೆ ಅನುವು ಮಾಡುವಂತೆ ಬಹುತೇಕ ರೈತರ ಅನಿಸಿಕೆಯಾಗಿದ್ದು ಭತ್ತ ನಾಟಿ ಮಾಡುವ ಕಾಲವಾಗಿದ್ದು ಈಗಲೇ ಭತ್ತ ನಾಟಿ ಮಾಡುವುದರಿಂದ ಮಳೆಗೆ ಭತ್ತದ ಬೆಳೆ ಉತ್ತಮವಾಗಿ ಬೆಳೆಯುತ್ತದೆ ಮತ್ತು ರೋಗಗಳಿಗೆ ತುತ್ತಾಗುವುದಿಲ್ಲ. ಕ್ರಿಮಿನಾಶಕ ಸಿಂಪರಣೆ ಕಡಿಮೆಯಾಗಿ ಆರ್ಥಿಕ ಹೊರೆ ರೈತರ ಮೇಲೆ ಅತ್ಯಂತ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಉತ್ತಮ ದರ ಸಿಕ್ಕು ಸಾಲದ ಬಾಧೆಯಿಲ್ಲದೇ ಜೀವನ ನಡೆಸಲು ಅನುಕೂಲವಾಗುತ್ತದೆ.
ಡ್ಯಾಂನಲ್ಲಿ ಸೋಮವಾರದ ಸಂಜೆ ವೇಳೆಗೆ ೩೦ ಟಿಎಂಸಿ ನೀರು ಸಂಗ್ರಹವಾಗಿದ್ದು ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ಮತ್ತು ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕುಡಿಯುವ ನೀರಿಗೆ ೪೦ ಟಿಎಂಸಿ ನೀರು ಬೇಕಾಗುತ್ತದೆ. ಇನ್ನೂ ಅಧಿಕ ಮಳೆಗಾಲವಿದ್ದು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಬೇಗನೆ ಡ್ಯಾಂ ಭರ್ತಿಯಾಗಿ ನದಿಗೆ ನೀರನ್ನು ಹರಿಸುವ ಬದಲಿಗೆ ಕಾಲುವೆಗಳಿಗೆ ಜುಲೈ ಕೊನೆ ಅಥವಾ ಆಗಷ್ಟ್ ಮೊದಲ ವಾರ ನೀರು ಹರಿಸುವುದರಿಂದ ನದಿ ಮೂಲಕ ಪೋಲಾಗುವ ನೀರನ್ನು ಉಳಿಸಿ ರೈತರ ಭೂಮಿಗೆ ಹರಿಸಿದಂತಾಗುತ್ತದೆ. ಆದ್ದರಿಂದ ಬೇಗನೆ ಕಾಲುವೆಗಳಿಗೆ ನೀರು ಹರಿಸಿದರೆ ಭತ್ತದ ನಾಟಿ ಕಾರ್ಯವೂ ಬೇಗನೆ ಮುಗಿದು ಕೃಷಿ ಚಟುವಟಿಕೆಯಿಂದ ಗ್ರಾಮೀಣ ಭಾಗದ ಜನತೆಗೂ ಉದ್ಯೋಗ ಸಿಗುತ್ತದೆ. ಪ್ರಾಕೃತಿಕವಾಗಿ ಜುಲೈ-ಆಗಷ್ಟ್ ತಿಂಗಳು ಭತ್ತದ ನಾಟಿಗೆ ಉತ್ತಮವಾಗಿದ್ದು ಸತತ ಮಳೆಯ ಪರಿಣಾಮ ಭತ್ತದ ಬೆಳೆ ಚನ್ನಾಗಿ ರೋಗ ರಹಿತವಾಗಿ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎನ್ನುವುದು ರೈತರ ವಾದವಾಗಿದೆ.
ಬಾಕ್ಸ್
ಪ್ರಸ್ತುತ ತುಂಗಭದ್ರಾ ಡ್ಯಾಂನಲ್ಲಿ ೩೦ ಟಿಎಂಸಿ ನೀರು ಸಂಗ್ರಹವಾಗಿದ್ದು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಮಳೆಗಳು ಇನ್ನೂ ಇದ್ದು ಹವಾಮಾನ ಇಲಾಖೆಯ ಪ್ರಕಾರ ಮುಂದೆಯೂ ಹೆಚ್ಚಿನ ಮಳೆಯಾಗುವುದರಿಂದ ಐಸಿಸಿ ಸಭೆಗೆ ಕಾಯದೇ ಕೂಡಲೇ ತುಂಗಭದ್ರಾ ಎಡದಂಡೆ, ಎಚ್‌ಎಲ್‌ಸಿ ಕಾಲುವೆ ಮತ್ತು ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು. ರೈತರು ಭ ತ್ತದ ಸಸಿ ಮಡಿ ಬೆಳೆಸಿದ್ದು ನೀರು ಕಾಲುವೆಗೆ ಹರಿಸಿದ ತಕ್ಷಣ ಭತ್ತದ ನಾಟಿ ಕಾರ್ಯ ಮಾಡಲಿದ್ದು ಮುಂದೆ ಡ್ಯಾಂ ಭರ್ತಿಯಾಗಿ ನದಿಗೆ ಹೆಚ್ಚುವರಿ ನೀರು ಹರಿಸದೇ ಕಾಲುವೆಗೆ ನೀರು ಹರಿಸಬೇಕು. ಭತ್ತ ನಾಟಿ ಮಾಡಲು ಜುಲೈ-ಆಗಷ್ಟ್ ಅನುಕೂಲವಾಗಿದ್ದು ಸರಕಾರ ಕೂಡಲೇ ಕಾಲುವೆಗೆ ನೀರು ಹರಿಸುವಂತೆ ಜಲಸಂಪನ್ಮೂಲ ಇಲಾಖೆಗೆ ಸೂಚನೆ ನೀಡಬೇಕು.
-ಟಿ.ಸತ್ಯನಾರಾಯಣ ಬಾಪಿರೆಡ್ಡಿ ಕ್ಯಾಂಪ್.ರೈತ ಮುಖಂಡರು
-ಜೋಗದ ಹನುಮಂತಪ್ಪ ನಾಯಕ ರೈತ ಮುಖಂಡರು
ಬಾಕ್ಸ್
ಸದ್ಯ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ತುಂಗಾಡ್ಯಾAನಿAದ ೬೦ ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡಲಾಗುತ್ತಿದೆ. ಜುಲೈ ಅಂತ್ಯಕ್ಕೆ ೫೦-೬೦ ಟಿಎಂಸಿ ನೀರು ಸಂಗ್ರಹವಾಗಲಿದ್ದು ಮುಂಗಾರು ಬೆಳೆ ಮತ್ತು ಕುಡಿಯುವ ನೀರಿಗೆ ಕೊರತೆಯಾಗುವುದಿಲ್ಲ. ಜತೆಗೆ ಮೈಲ್ ೧೦ ಶಿವಪೂರ ಬೋರುಕಾ ಪವರ್ ಹೌಸ್ ಹತ್ತಿರ ಇರುವ ಎಸ್ಪೇಫ್ ಗೇಟ್ ದುರಸ್ಥಿ ಕಾರ್ಯ ಇನ್ನೂ ಒಂದು ವಾರ ಆಗಲಿದೆ. ಐಸಿಸಿ ಕಮೀಟಿ ರಚಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದ್ದು ಸರಕಾರದ ಸೂಚನೆ ಬಂದ ಕೂಡಲೇ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ.
-ಬಸವರಾಜ, ಮುಖ್ಯ ಅಭಿಯಂತರರು ಮುನಿರಾಬಾದ ಕಾಡಾ ಹಾಗೂ ತುಂಗಭದ್ರಾ ಡ್ಯಾಂ.
ಪೊಟೋ೨೪-ಜಿವಿಟಿ-೦೧
ಗಂಗಾವತಿ: ನಾಟಿ ಮಾಡಲು ಭತ್ತದ ಸಸಿ ಮಡಿ ಬೆಳೆದು ನಿಂತಿರುವುದು.
ಬೇಗನೆ ಕಾಲುವೆಗಳಿಗೆ ನೀರು ಹರಿಸಿದರೆ ನೀರಿನ ಪೋಲು ತಡೆಯಲು ಸಾಧ್ಯ,ಕೃಷಿಚಟುವಟಿಕೆ ಅನೂಕುಲ ಆಗುತ್ತದೆ
ಜಾಹೀರಾತು