Municipal Corporation's contribution for Diwali festival: No water in Murari Camp, Laxmi Camp areas. Sewage, garbage removed... Residents protest

ಗಂಗಾವತಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಗರದ ಮುರಾರಿ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್, ಗುಂಡಮ್ಮ ಕ್ಯಾಂಪ್ ಬೈಪಾಸ್ ಗೌಳಿ ಮಹಾದೇವಪ್ಪ ರಸ್ತೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಬಾರದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಜೊತೆಗೆ ಚರಂಡಿ ಇಂದ ತೆಗೆದ ಕಥಾ ಮತ್ತು ತ್ಯಾಜ್ಯ ವಸ್ತು ತೆಗೆದುಕೊಂಡು ಹೋಗದೆ ಚರಂಡಿಯ ಪಕ್ಕದಲ್ಲಿ ಬಿಟ್ಟಿರುವುದರಿಂದ ನಿವಾಸಿಗಳು ನಡೆದಾಡಲು ಮತ್ತು ಮನೆ ಮುಂದೆ ಸ್ವಚ್ಛ ಮಾಡಲು ರಂಗೋಲಿ ಹಾಕಲು ತೊಂದರೆಯಾಗಿದ್ದು ಕೂಡಲೇ ನಗರಸಭೆಯವರು ಕುಡಿಯುವ ನೀರು ಬಿಡಬೇಕು.
ಜೊತೆಗೆ ಚರಂಡಿಯ ಕಸವನ್ನು ವಿಲೇಮೂರು ಮಾಡುವಂತೆ ನಿವಾಸಿಗಳು ಮತ್ತು ಮಹಿಳೆಯರು ಆಗ್ರಹಿಸಿದ್ದಾರೆ.
ಪ್ರತಿ ಬಾರಿಯೂ ಹಬ್ಬದ ಸಂದರ್ಭದಲ್ಲಿಯೇ ನಗರಸಭೆಯವರು ಗಂಗಾವತಿ ನಗರದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರನ್ನು ತಾಂತ್ರಿಕ ತೊಂದರೆಯ ನೆಪದಲ್ಲಿ ಬಿಡುತ್ತಿಲ್ಲ , ಆದ್ದರಿಂದ ನಗರಸಭೆಯವರು ಹಬ್ಬದ ಸಂದರ್ಭದಲ್ಲಿ ನಿರಂತರವಾಗಿ ನೀರನ್ನು ಬಿಡುವ ಮೂಲಕ ಕುಡಿಯಲು ಮತ್ತು ಇತರೆ ಕೆಲಸ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕು. ಚರಂಡಿಯಿಂದ ತೆಗೆದ ಕಸ ಮತ್ತು ತ್ಯಾಜ್ಯದಿಂದ ದುರ್ವಾಸನೆ ಬರುತ್ತಿದ್ದು ಸೊಳ್ಳೆ ಮಾಡದಿಂದ ರೋಗರುಜೀನುಗಳು ಬರುತ್ತಿವೆ ಎಂದು ಸ್ಥಳೀಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
Kalyanasiri Kannada News Live 24×7 | News Karnataka
