Breaking News

Tag Archives: kalyanasiri News

ಪ್ರತಿಯೊಬ್ಬರೂ ಮನೆಗೊಂದು ಸಸಿ ಬೆಳೆಸಿಜಿ.ಪಂ. ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ ಹೇಳಿಕೆ

ಹೇಮಗುಡ್ಡದಲ್ಲಿ ವನಮಹೋತ್ಸವ ಕಾರ್ಯಕ್ರಮ ಗಂಗಾವತಿ : ಪ್ರತಿಯೊಬ್ಬರೂ ಮನೆಗೊಂದು ಗಿಡ ಬೆಳೆಸಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ ಅವರು ಹೇಳಿದರು. ತಾಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾದೇವಿ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾ.ಪಂ.ವತಿಯಿಂದ ಶುಕ್ರವಾರ ಆಯೋಜಿಸಿದ್ದ ವನ ಮಹೋತ್ಸವಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ನಶಿಸುತ್ತಿರುವ ಪರಿಸರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ಗ್ರಾಮದಲ್ಲಿ ಸುಂದರ …

Read More »

ವೀರಾಪೂರ ಗ್ರಾಮದ : ಶ್ರೀ ಗಾಳೆಮ್ಮ ದೇವಿ ಹಾಗೂಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ

ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪೂರ ಗ್ರಾಮದ ಶ್ರೀ ಗಾಳೆಮ್ಮ ದೇವಿಯ ಹಾಗೂ ದುರ್ಗಾ ದೇವಿ ಜಾತ್ರಾ ಮಹೋತ್ಸವವು ದಿ.07.06.2024ರ ಶುಕ್ರವಾರದಿಂದ ದಿ.11.06 ಮಂಗಳವಾರದವರೆಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುವವು. ದಿ. 07 ರ ಶುಕ್ರವಾರದಂದು ಬೆಳಿಗ್ಗೆ 8 ಗಂಟೆಗೆ ಶ್ರೀ ದೇವಿಯ ಕಂಕಣ ಕಟ್ಟುವ ಕಾರ್ಯಕ್ರಮ ಜರುಗಲಿದೆ. ದಿ. 10ರಂದು ಸೋಮವಾರ ರಾತ್ರಿ ಅಗ್ನಿ ಹಚ್ಚುವ ಕಾರ್ಯಕ್ರಮ ನಡೆಯಲಿದೆ, ರಾತ್ರಿ 11ಗಂಟೆಗೆ ಭಕ್ತರಿಂದ ಮದ್ದು ಸುಡುವ …

Read More »

17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ವಿವಿಧೆಡೆ ಇಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಥಲ್ಲಿ ಹವಾಮಾನ ಇಲಾಖೆಯು 17 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಿಸಿದೆ.ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಯೆಲ್ಲೊ ಅಲರ್ಟ್‌ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕೆಲವೆಡೆ 30 ರಿಂದ 40 ಕಿ.ಮೀ. …

Read More »

ಪ್ರತಿಯೊಬ್ಬರೂ ತಮ್ಮ ಹುಟ್ಟು ಹಬ್ಬದಂದು ಒಂದು ಸಸಿ ಬೆಳಸಿ : ಫಾದರ್ ಸಜ್ಜಿ ಜಾರ್ಜ್

ಕುಕನೂರು : ಪ್ರತಿಯೊಬ್ಬ ನಾಗರಿಕರು ತಮ್ಮ ಹುಟ್ಟು ಹಬ್ಬದಂದು ಒಂದು ಸಸಿ ಬೆಳಸಿ ಅವುಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಪರಿಸರವನ್ನು ಉಳಿಸಲು ಮುಂದಾಗಬೇಕು ಎಂದು ಎಸ್ ಎಫ್ ಎಸ್ ಶಾಲೆಯ ಮುಖ್ಯಸ್ಥರಾದ ಫಾದರ್ ಸಜ್ಜಿ ಜಾರ್ಜ ಹೇಳಿದರು. ಅವರು ಕುಕನೂರ ಪಟ್ಟಣದ ಎಸ್ ಎಫ್ ಎಸ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪರಿಸರ ಸಂರಕ್ಷಣೆ ಹಾಗೂ ಅದರ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರದಲ್ಲಿ ಕುಕನೂರು …

Read More »

ಜ್ಯೋತಿ ಗೊಂಡಬಾಳಗೆ ಕಿತ್ತೂರ ಚನ್ನಮ್ಮ ರಾಜ್ಯ ಪ್ರಶಸ್ತಿ

ಕೊಪ್ಪಳ: ಇಲ್ಲಿನ ಪ್ರಗತಿಪರ ಹೋರಾಟಗಾರ್ತಿ, ಮಹಿಳಾ ಮುಖಂಡೆ, ಕರ್ನಾಟಕ ಸರಕಾರದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಎಂ. ಗೊಂಡಬಾಳ ಅವರಿಗೆ ಸಮಾಜ ಸೇವೆ ವಿಭಾಗದಲ್ಲಿ ರಾಜ್ಯಮಟ್ಟದ “ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ.ಕುಷ್ಟಗಿ ತಾಲೂಕ ದೋಟಿಹಾಳ ಗ್ರಾಮದಲ್ಲಿ ಜೂನ್ ೨೫ ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುವದು ಎಂದು ಸಂಘಟಕರಾದ ನಾಗರಾಜ ಕಾಳಗಿ, ಶಂಕ್ರಮ್ಮ ಕೊಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಚುನಾವಣೆ ನಿಮಿತ್ಯ ಕಾರ್ಯಕ್ರಮ ತಡವಾಗಿದ್ದು, ಮಹಿಳಾ ದಿನಾಚರಣೆ ನಿಮಿತ್ಯ …

Read More »

ನೆಲಮಂಗಲದಲ್ಲಿ ಗ್ರೀನ್ ಗ್ರೋವ್ಸ್ ಪ್ರಾರಂಭ ;

ಆಧುನಿಕ ಜೀವನದಲ್ಲಿ ವಿನೂತನ ಮಾದರಿಯ ಭರವಸೆ ನೀಡುವ ಹೊಸ ಹೆಗ್ಗುರುತು ಬೆಂಗಳೂರು,: ಸತ್ತ್ವ ಗ್ರೂಪ್‌ ಇತ್ತೀಚೆಗೆ ನೆಲಮಂಗಲದಲ್ಲಿ ಗ್ರೀನ್ ಗ್ರೋವ್ಸ್ ಆರಂಭಿಸಿದ್ದು, ಈ ಯೋಜನೆಯು ಬಹಳ ವೇಗವಾಗಿ ಸಮಕಾಲೀನ ಜೀವನದ ದಾರಿದೀಪವಾಗಿ ಹೊರಹೊಮ್ಮುತ್ತಿದೆ. 45 ಎಕರೆಗಳಷ್ಟು ಹಚ್ಚ ಹಸಿರಿನ ನಡುವೆ ಸ್ಥಾಪಿಸಲಾದ ಈ ಯೋಜನೆಯು ಸಾಟಿಯಿಲ್ಲದ ಆಧುನಿಕ ಸೌಕರ್ಯಗಳನ್ನು ಒದಗಿಸುತ್ತದೆ. ಈ ಗ್ರೀನ್​ ಗ್ರೋವ್ಸ್ ಅಚ್ಚುಕಟ್ಟಾಗಿ ಪ್ಲಾನ್​ ಮಾಡಲಾದ 750 ವಿಲ್ಲಾ ಪ್ಲಾಟ್‌ಗಳನ್ನು ಒಳಗೊಂಡಿದೆ. ವಿಶೇಷವಾಗಿ ಸಮುದಾಯ ವಾಸಿಸಲು ಅನುಕೂಲವಾಗುವಂತೆ …

Read More »

ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

ಬೆಂಗಳೂರು: ಜೂನ್ 05: ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯಲ್ಲಿ ಸಂಸ್ಥೆಯ ನಿರ್ದೇಶಕರು ಹಾಗೂ ರಿಜಿಸ್ಟ್ರಾರ್ ಅವರ ಮಾರ್ಗದರ್ಶನದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಆವರಣದಲ್ಲಿ ಹೊಸ ಗಿಡ, ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಸಂಸ್ಥೆಯ ಸಿಬ್ಬಂದಿಗಳಾದ ರಾಜು ಕಾಂಬಳೆ, ಸಿದ್ದರಾಜು, ಪುನೀತ, ರಂಗಪ್ಪ, ಅಂಬರಮ್ಮ, ಶಂಕರಪ್ಪ, ಗೋವಿಂದರಾಜು, ಬಸವರಾಜು, ಲಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು. ನಂತರ ಸಿಹಿ …

Read More »

ಪ್ರತಿಯೊಬ್ಬರೂ ಗಿಡಗಳನ್ನ ನಡಬೇಕು: ವೆಂಕಟೇಶ

ಗಂಗಾವತಿ,05:ಪ್ರತಿ ವರ್ಷ ಜೂನ್‌ 5 ರಂದು ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ವಿಶ್ವಾದ್ಯಂತ ಪರಿಸರದ ಬಗ್ಗೆ ಜಾಗೃತಿ ಮತ್ತು ನಮ್ಮ ಪರಿಸರದ ರಕ್ಷಣೆಗೆ ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪರಿಸರದ ಸಮೃದ್ಧಿ ಆರೋಗ್ಯಕರ ಜೀವನ ಮತ್ತು ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೆಂಕಟೇಶ ಹೇಳಿದರು. ವಿಶ್ವ ಪರಿಸರ …

Read More »

ಹೃದಯ ಸ್ಪರ್ಶ ಟ್ರಸ್ಟ್ ನಿಂದಪರಿಸರದಿನಾಚರಣೆ.

ಬೆಂಗಳೂರು ಜೂನ್ 5; ಹೃದಯ ಸ್ಪರ್ಶ ಟ್ರಸ್ಟ್ ವತಿಯಿಂದ ಬೆಂಗಳೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜೂನ್ 5 ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಎಸ್ ಐ ಟಿ ಡಿ ವೈಎಸ್ ಪಿ, ಎಲ್ ವೈ ರಾಜೇಶ್, ಡಾ.ಆರ್.ಸಂದ್ಯಾ ಡೀನ್ ಇ ಎಸ್ ಐ ಸಿ ಹಾಸ್ಪಿಟಲ್,ಚರ್ಮ ರೋಗ ತಜ್ಞರಾದ …

Read More »

ಈರಯ್ಯ ಸ್ವಾಮಿ ಸಂಶಿ ಮಠ ನಿಧನ

ಗಂಗಾವತಿ: ಸಂಗಯ್ಯ ಸ್ವಾಮಿ ಸಂಶಿಮಠ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಇವರ ಸಹೋದರರಾದ ಶ್ರೀ ಈರಯ್ಯ ಸ್ವಾಮಿ ಸಂಶಿ ಮಠ ವೀರಗಾಸೆ ಪುರವಂತರು, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಎದುರುಗಡೆ ಜುಲೈ ನಗರ ಗಂಗಾವತಿ, ಇವರು ದಿನಾಂಕ 4.6.2024 ರಂದು ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಅಂತ್ಯಕ್ರಿಯೆ ದಿನಾಂಕ 5.6.2024 ರಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ.

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.