The short URL of the present article is: https://kalyanasiri.in/bout
ಕೊಪ್ಪಳ ನಗರಸಭೆ: ಮ್ಯಾಪಿಂಗ್ & ಪ್ರೋಜಿನಿ ಕಾರ್ಯಕ್ಕೆ
ಗುರುತಿನ ಚೀಟಿಯೊಂದಿಗೆ ಬಿ.ಎಲ್.ಓ.ಗಳಿಗೆ ಸಂಪರ್ಕಿಸಿ

Koppal Municipal Corporation: Contact BLOs with ID card for mapping & progini workಕೊಪ್ಪಳ ಡಿಸೆಂಬರ್ 15 (ಕರ್ನಾಟಕ ವಾರ್ತೆ): ಮ್ಯಾಪಿಂಗ್ ಮತ್ತು ಪ್ರೋಜಿನಿ ಕಾರ್ಯಕ್ಕಾಗಿ ಕೊಪ್ಪಳ ನಗರಸಭೆ ವ್ಯಾಪ್ತಿಯ ಮತದಾರರು ತಮ್ಮ ಗುರುತಿನ ಚೀಟಿಯೊಂದಿಗೆ ಸಂಬಂಧಿಸಿದ ಬಿ.ಎಲ್.ಓ.ಗಳಿಗೆ ಸಂಪರ್ಕಿಸುವಂತೆ ಕೊಪ್ಪಳ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಮಾನ್ಯ ಮುಖ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿ ಎಸ್.ಐ.ಆರ್. ಕಾರ್ಯ ಪ್ರಾರಂಭವಾಗಲಿದ್ದು, ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮ್ಯಾಪಿಂಗ್ ಆಗದಿರುವ ಪ್ರಯುಕ್ತ, ಎಸ್.ಎಫ್.ಆರ್. ಕಾರ್ಯ ಸುಗಮವಾಗಿ ನಡೆಸಲು 2002 ರಲ್ಲಿ ಮತದಾನ ಮಾಡಿದ ಮತದಾರರನ್ನು 2025ರ ಮತದಾರರ ಪಟ್ಟಿಯಲ್ಲಿ ಗುರುತಿಸಿ ಈ ಮತದಾರರ ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟ ಮ್ಯಾಪಿಂಗ್ ಆದ ಮತದಾರರ ಸಂತತಿಯವರನ್ನು (18 ವರ್ಷ ಮೇಲ್ಪಟ್ಟ 40 ವರ್ಷ ಒಳಗಿನ ಮತದಾರರನ್ನು) ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೋಜಿನಿ ಕಾರ್ಯ ಪೂರ್ಣಗೊಳಿಸಬೇಕಾಗಿರುತ್ತದೆ.
ಆದಕಾರಣ ಕೊಪ್ಪಳ ನಗರಸಭೆ ವ್ಯಾಪ್ತಿಯ ಮತದಾರರಲ್ಲಿ ಈ ಮೂಲಕ ತಿಳಿಸುವುದೇನಂದರೆ, ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನೀವು ಮತದಾನ ಮಾಡುವ ಕೇಂದ್ರದಲ್ಲಿ ಬಿ.ಎಲ್.ಓ. ರವರಿಗೆ ಭೇಟಿಯಾಗಿ ಪ್ರಸ್ತುತ ನಿಮ್ಮ ಮತದಾನದ ಗುರುತಿನ ಚೀಟಿಯೊಂದಿಗೆ 2002 ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆ: ಬಿ.ಎಲ್.ಓ. ರವರಿಗೆ ತಿಳಿಸಿ ಅಥವಾ ಹಾಜರುಪಡಿಸಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಎಂದು ಕೊಪ್ಪಳ ನಗರಸಭೆ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Kalyanasiri Kannada News Live 24×7 | News Karnataka