Chamundeshwari Amman Vardhanti Mahotsav at Mysore Maramma Temple.
ವರದಿ : ಬಂಗಾರಪ್ಪ ಸಿ ಹನೂರು . ಹನೂರು :ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ನಡೆಯಿತು . ಹನೂರು ಪಟ್ಟಣದ ಆದಿಪರಶಕ್ತಿ ಮೈಸೂರು ಮಾರಮ್ಮ ದೇವಾಲಯದಲ್ಲಿ ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಪ್ರಯುಕ್ತ ಹಿರಿಯ ಅರ್ಚಕ ಗೋಪಾಲ್ ರಾವ್ ಪವರ್ ಅರುಣ್ ರಾವ್ ಪವರ್ ಅವರಿಂದ ಸಮಯ ಬೆಳಿಗ್ಗೆ 3:00 ಘಂಟೆ ಯಿಂದ ತಾಯಿಗೆ ಹಾಲು ಮೊಸರು ಜೇನುತುಪ್ಪ ಬೆಣ್ಣೆ ಸೇರಿದಂತೆ ಎಳನೀರು ಅಭಿಷೇಕ ಹಾಗೂ ಅರಿಶಿನ ಕುಂಕುಮದ ಅಭಿಷೇಕ ಆಲಾಭಿಷೇಕ ಪಂಚಾಮೃತ ಅಭಿಷೇಕ ದೂಪದ ಆರತಿ ಹಾಗೂ ವಿವಿಧ ಹೂಗಳಿಂದ ಸಿಂಗರಿಸಿ ಬೆಳ್ಳಿ ಕಿರೀಟ ಧರಿಸಿ ವಿಶೇಷ ಅಲಂಕಾರ ಮಾಡುವ ಮೂಲಕ ಮಹಾ ಮಂಗಳಾರತಿಯೊಂದಿಗೆ ಚಾಮುಂಡೇಶ್ವರಿ ವರ್ದಂತಿ ಪೂಜಾ ಕಾರ್ಯಕ್ರಮಗಳನ್ನು ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿಸಲಾಯಿತು ,ಇದನ್ನು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾದರು . ಭಕ್ತರಿಗೆ ಅನ್ನಸಾರ್ಪಣೆ : ಇದೇ ಸಮಯದಲ್ಲಿ ಇಂದು ನೆರವೆರಿಸಿದ ವಿಶೇಷ ಚಾಮುಂಡೇಶ್ವರಿ ದೇವಿಯ ಆರಾಧನೆ ಹಾಗೂ ವರ್ಧಂತಿ ಅಂಗವಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಪೂಜೆ ಸಲ್ಲಿಸಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು .
ಉತ್ತರ ಕರ್ನಾಟಕದಲ್ಲಿ ಹೊಲ ಗದ್ದೆಗಳಲ್ಲಿ ಎಥೆಚ್ಚವಾಗಿ ತನ್ನಿಂದ ತಾನೇ ಬೆಳೆಯುವ ಉಚಿತವಾದ ಔಷಧೀಯ ಸೊಪ್ಪು ಅನ್ನಬಹುದು ನನಗೆ ತಿಳಿದ ಮಟ್ಟಿಗೆ ಇದಕ್ಕಿಂತ ಪ್ರಯೋಜನ ಕಾರಿ ಸೊಪ್ಪು ಇನ್ನೊಂದಿಲ್ಲ ಅದೇ ಈ ಹಕ್ಕರಿಕಿ(ಹತ್ತರಕಿ) ಸೊಪ್ಪು ಸಾಕಷ್ಟು ಜನರಿಗೆ ಈಗಾಗಲೇ ಇದರ ಬಗ್ಗೆ ಗೊತ್ತಿರಬಹುದು ಉಳಿದವರಿಗೂ ತಿಳಿಯಲಿ ಅಂತ ಪೋಸ್ಟ್ ಮಾಡಿದೆ ನೀವು ಓದಿ ಮತ್ತೆ ವಿನಿಮಯ ಮಾಡಿ
ಹುಲ್ಲು ಹುಲ್ಲಾಗಿರುವ, ಅಗಲವಾದ ಎಲೆಗಳನ್ನು ಬಿಡುವ, ಟರ‌್ಯಾಕ್ಸಕಮ್ ಅಫಿಷಿನೇಲ್ ಕುಲದ ಸಸ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯ ಮಧ್ಯ ವರ್ಷವಿಡೀ ತಾನೇ ತಾನಾಗಿ ಹುಟ್ಟಿ ಬೆಳೆಯುವ ಸೊಪ್ಪಿನ ಗಿಡವಿದು. (ಆದರೆ, ಬೇರೆ ಸೊಪ್ಪಿನ ರೀತಿ ಇದನ್ನು ಮಾರಾಟಕ್ಕೆಂದು ಬೆಳೆಯುವುದಿಲ್ಲ.) ಹೊಲದಲ್ಲಿ ಕೆಲಸ ಮಾಡುವವರಿಗೆ ಊಟದ ಜತೆಗಿನ ಸೈಡ್ಸ್ ಆಗಿ ಬಳಕೆ. ಆಡು ಭಾಷೆಯಲ್ಲಿ ಹಕ್ಕರಿಕೆ ಎಂದು ಕರೆಯುತ್ತಾರೆ. ಈ ಸೊಪ್ಪಿನ ಇಂಗ್ಲಿಷ್ ಹೆಸರೇ ದಾಂಡೇಲಿಯನ್ ಗ್ರೀನ್ಸ್. ಇದರ ಎಲೆಗಳು ಅತಿ ಹೆಚ್ಚು ಪ್ರೊಟೀನ್ ಅಂಶ ಒಳಗೊಂಡಿವೆ. ಎಲೆ ಮತ್ತು ಬೇರಿನಲ್ಲಿರುವ ಹೆಚ್ಚಿನ ಅಂಶಗಳೆಂದರೆ, ವಿಟಮಿನ್ ಸಿ, ಇ ಮತ್ತು ಕಬ್ಬಿಣಾಂಶ. ಏಡ್ಸ್ ಮತ್ತು ಹರ್ಪಿಸ್ ಕಾಯಿಲೆ ಹರಡಲು ಕಾರಣವಾಗುವ ವೈರಸ್ ಅನ್ನು ನಾಶಪಡಿಸುವ ರೋಗನಿರೋಧಕ ಗುಣ ಈ ಸೊಪ್ಪಿನಲ್ಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಜೀರ್ಣಕ್ರಿಯೆಗೆ, ದೀರ್ಘಕಾಲದ ಕಾಯಿಲೆಗಳಿಗೆ ಔಷಧದಂತೆ ವರ್ತಿಸುತ್ತದೆ. ರೋಗ ಬರದಂತೆ ತಡೆಯುವ ನೈಸರ್ಗಿಕ ಪರಿಹಾರ ಗುಣ ಇದಕ್ಕಿದೆ. ಪಿತ್ತಜನಕಾಂಗ ಮತ್ತು ಮೂತ್ರಪಿಂಡದ ಕಾರ್ಯವನ್ನು ಉತ್ತಮಗೊಳಿಸುತ್ತದೆ. ನರಮಂಡಲದ ಮೇಲೆ ಪ್ರಯೋಜನಕಾರಿ ಪರಿಣಾಮ ಉಂಟುಮಾಡಿ, ನಿದ್ರೆ ಬರುವಂತೆ ಮಾಡುತ್ತದೆ. ರಕ್ತ ಹೆಚ್ಚಿಸುತ್ತದೆ. ಚರ್ಮದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಚಿಗುರಿನಿಂದ ಬೇರಿನವರೆಗೆ ಔಷಧೀಯ ಗುಣಗಳನ್ನೇ ಹೊಂದಿದೆ. ಇದರ ಉಪಯುಕ್ತತೆಯನ್ನು ಕೇಳಿದರೆ, ಊಟದ ಬದಲು ಸೊಪ್ಪನ್ನೇ ತಿಂದು ಬದುಕಬೇಕು ಎನಿಸುತ್ತದಲ್ಲವೇ?
Guru Puja Program: See Guru is a Shakti - Manjunath Guruji
ಕನಕಪುರ ವೇದ ಮಾತ ಗುರುಕುಲದ ಸಂಸ್ಥಾಪಕ ಪೂಜ್ಯ ಶ್ರೀ ಮಂಜುನಾಥ ಆರಾಧ್ಯರು ಗುರು ವಂದನೆ ಸ್ವೀಕರಿಸಿ ಮಾತನಾಡುತ್ತಾ “ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ.ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿ ಮಾರ್ಗದರ್ಶನ ನೀಡುತ್ತವೆ ಎಂದರು
ನಮ್ಮ ಗುರುಗಳು 18 ವರ್ಷಗಳಿಂದ ವೇದ ಆಗಮ ಶಾಸ್ತ್ರಗಳು ಪುರೋಹಿತ್ಯ ತರಬೇತಿ ದೇವಸ್ಥಾನದಲ್ಲಿ ಆಚರಿಸಬೇಕಾದ ಕ್ರಮಗಳು ಪಂಚಾಂಗದ ಮಹತ್ವ ಎಲ್ಲವನ್ನು ನಮ್ಮಗೆ ತಿಳಿಸುತ್ತ ಬರುತ್ತಿದ್ದಾರೆ ಅಂತಹ ಗುರುವಿನಿಂದ ಅನುಗ್ರಹ, ಉಪದೇಶ ಪಡೆದರೆ, ಯಾವುದೇ ವ್ಯಕ್ತಿಯಲ್ಲಿರುವ ಸಂದೇಹ, ಜಿಜ್ಞಾಸೆಗಳು ಬಗೆಹರಿದು ಉತ್ತಮ ಜೀವನ ನಡೆಸಲು ಸಾಧ್ಯ ಅಂತಹ ಗುರು ಪಡೆದಿದೆ ನಮ್ಮ ಪುಣ್ಯ ಎಂದು ಮುನೇಶ ಶಾಸ್ತ್ರಿಗಳು ಹೇಳಿದರು
ಗುರು ನಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ನಮ್ಮ ಭವಿಷ್ಯವನ್ನು ರೂಪಿಸಿ ನಮ್ಮನ್ನು ವಿದ್ಯಾವಂತರು ಬುದ್ಧಿವಂತರನ್ನಾಗಿ ಮಾಡುವ ಕಲೆ ನಮ್ಮ ಗುರಗಳದ್ದಾಗಿದೆ. ಹಸಿಮಣ್ಣಿಗೆ ಆಕಾರ ಕೊಡುವ ಗುರು ಎಂಬ ಮಾರ್ಗದರ್ಶಿ ತಂದೆ ತಾಯಿಯ ಸ್ಥಾನಕ್ಕೆ ಸಮಾನರು. ಜ್ಞಾನ ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭಾವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವವರಲ್ಲಿ ಪ್ರಮುಖರಾಗಿದ್ದಾರೆ. ಎಂದು ಲಕ್ಷ್ಮೀ ನಾರಾಯಣ ಶಾಸ್ತ್ರಿಗಳು ತಿಳಿಸಿದರು
ಗುರು ಪಾದಗಳನ್ನು ತೊಳೆಯುವುದು ಗುರುವಿನ ಕೃಪೆ ಕರುಣೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ ಎಂಬುದನ್ನು ತೋರಿಸುವ ದ್ಯೋತಕವಾಗಿ ಈ ದಿನ ಪೂಜೆ ಸಲ್ಲಿಸಿದೆ ಸತೀಶ್ ತಿಳಿಸಿದರು
ಗುರುವಿನ ಅಗತ್ಯ ಮಾತೊಂದು ಹೀಗಿದೆ, ಅದೇನೆಂದರೆ ಹರ ಮುನಿದರೂ ಗುರು ಕಾಯುತ್ತಾನೆ ಎಂದು. ಅಂದರೆ ಒಂದು ವೇಳೆ ದೇವರು ನಮ್ಮ ರಕ್ಷಣೆಗೆ ಬಾರದಿದ್ದರೂ, ಅಜ್ಞಾನದಿಂದ ನಮಗೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಲು ಗುರು ಸಹಕಾರಿಯಾಗುತ್ತಾರೆ. ಎಷ್ಟೋ ಬಾರಿ ಗುರು ಎಂಬ ಶಕ್ತಿಗೆ ದೇವತೆಗಳೂ ಮೊರೆ ಹೋಗಿದ್ದು, ಪರಿಹಾರ ಕಂಡುಕೊಂಡಿದ್ದಾರೆ. ಅಂತಹ ಗುರುವಿನ ಅನುಗ್ರಹಕ್ಕೆ ಪಾತ್ರರಾಗಲು ಗುರುಪೂರ್ಣಿಮೆ ಮಹತ್ವದ ದಿನವಾಗಿದೆ ಹಾಗಾಗಿ ನಮ್ಮ ಗುರುಕುಲದಲ್ಲಿ ಗುರುಪೂಜೆ ಮಾಡಲಾಗಿದೆ ಎಂದು ಗಣೇಶ ರವರು ತಿಳಿಸಿದರು
ಈ ಸಂದರ್ಭದಲ್ಲಿ ಗುರುಗಳಿಗೆ ಎಲ್ಲಾ ಶಿಷ್ಯವರ್ಗದವರಿಂದ ಪಾದಪೂಜೆ ನೆರವೇರಿಸಿ ಗುರುಗಳ ಶ್ರೀ ರಕ್ಷೆ ಸ್ವೀಕರಿಸಿದ ಸಂದರ್ಭದಲ್ಲಿ ಮಹಾದೇವಸ್ವಾಮಿ ದೇವರಾಜು ಕೃಷ್ಣ ಹರ್ಷ ಬಸವರಾಜು ಪರಮೇಶ್ ಕೀರ್ತಿ ಪ್ರತಾಪ ಕೆಂಪರಾಜು ಲೋಕೇಶ್ ಸರ್ವೇಶ್ ಮಲ್ಲಿಕಾರ್ಜುನ್ ಶಿವಣ್ಣ ಪ್ರಕಾಶ್ ಹೀಗೆ ನೂರಾರು ಶಿಷ್ಯರಂದದವರು ಪಾಲ್ಗೊಂಡಿದ್ದರು
Free check-up camp for heart disease, neuropathy, cancer, kidney stones in Karatagy.
ಕಾರಟಗಿ: ಧನ್ವಂತರಿ ಹೆಲ್ತ್ ಸೆಂಟರ್, ಬಾಲಾಜಿ ಮೆಡಿಕಲ್ಸ್, ಶ್ರೀ ಸ್ವಾಮಿ ವಿವೇಕಾನಂದಸೇವಾ ಸಂಘ, ಶ್ರೀರಾಮನಗರ, ಇವರ ಸಹಕಾರದೊಂದಿಗೆ ಬೆಂಗಳೂರುನಗರದ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆವತಿಯಿಂದ ಶನಿವಾರ ಪಟ್ಟಣದಮುತ್ಯಾಲಪ್ಪ ಕಾಂಪ್ಲೆಕ್ಸ್ನಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಹಮ್ಮಿಕೊಳ್ಳಲಾಯಿತು.ಬಳಿಕ ಎಪಿಎಂಸಿ ಮಾಜಿ ಸದಸ್ಯ ಜಿ. ರಾಮಮೋಹನ್ ಮಾತನಾಡಿ ಬಡವರಅನುಕೂಲಕ್ಕಾಗಿ ಈ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ನುರಿತವೈದ್ಯರು ಆಗಮಿಸಿದ್ದಾರೆ. ಹೃದಯರೋಗ, ನರರೋಗ, ಕ್ಯಾನ್ಸರ್,ಮೂತ್ರಪಿಂಡದ ಕಲ್ಲು ಸೇರಿದಂತೆ ಯಾವುದೇ ಕಾಯಿಲೆಗಳಿದ್ದಲ್ಲಿ ಉಚಿತಚಿಕಿತ್ಸೆ ನೀಡಲಾಗುವುದು. ಜತೆಗೆ ಉಚಿತ ಔಷಧಿಯನ್ನು ಕೂಡಾವಿತರಿಸಲಾಗುವುದು. ಇನ್ನು ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್, ಶುಗರ್ ಪರೀಕ್ಷೆ ಮಾಡಲಾಗುವುದು.ಯಾವುದಾದರು ಗಂಭೀರ ಕಾಯಿಲೆಗಳಿದ್ದಲ್ಲಿ ಅಂತವರಿಗೆ ಬೆಂಗಳೂರಿನಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಇದರಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿ ಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್,ಶುಗರ್ ಪರೀಕ್ಷೆ ಮಾಡಲಾಗುವುದು. ಈ ವೇಳೆ ವಿವೇಕಾನಂದ ಸೇವಾಸಂಘದ ಅಧ್ಯಕ್ಷ ಗರಪಾಟಿ ರಾಮಕೃಷ್ಣ ಮಾತನಾಡಿ ಧನ್ವಂತರಿ ಆಸ್ಪತ್ರೆಹಾಗೂ ಬಾಲಾಜಿ ಮೆಡಿಕಲ್ ಸ್ಟೋರ್ ಹಾಗೂ ವಿವೇಕಾನಂದ ಸೇವಾ ಸಂಘದಿAದಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ೩೦೦ಕ್ಕು ಅಧಿಕ ರೋಗಿಗಳಿಗೆ ತಪಾಸಣೆ ಮಾಡಿ ಉಚಿತ ಔಷದಿ ನೀಡಿದ್ದೇವೆ. ಅದರಲ್ಲಿ೨೦ ಜನರು ಹೃದಯ ಸಂಬAಧಿ ಕಾಯಿಲೆಗೆ ಶಸ್ತçಚಿಕಿತ್ಸೆಗೆ ಹೆಸರುನೋಂದಾಯಿಸಿದ್ದು. ಅವರನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಕರೆದೋಯ್ದು, ಚಿಕಿತ್ಸೆ ನೀಡಲಾಗುವುದು ಮತ್ತು ಈ ಶಿಬಿರಯಶಸ್ವಿಯಾಗಲು ಸಹಕರಿಸಿದ ಬಾಲಾಜಿ ಮೆಡಿಕಲ್ ಸ್ಟೋರ್ ನಾಗೇಶ್ವರಾವ್‌ಹಾಗೂ ಜಿ. ರಾಮ್‌ಮೋಹನ್ ಮತ್ತು ಸಪ್ತಗಿರಿ ಅಸ್ಪತ್ರೆಯವರಿಗೆ ನಮ್ಮ. ವಿವೇಕಾನಂದ ಸೇವಾ ಸಂಘದಿAದ ಧನ್ಯವಾಧಗಳನ್ನು ತಿಳಿಸುತ್ತೇನೆಎಂದರು.ಈ ವೇಳೆ ಸಪ್ತಗಿರಿ ಆಸ್ಪತ್ರೆ ವೈದ್ಯರಾದ ವಿಶ್ವನಾಥ ರೆಡ್ಡಿ,ರಾಘವೇಂದ್ರ, ಪ್ರವೀಣ್, ಜಿ, ರಾಮಕೃಷ್ಣ ಅಧ್ಯಕ್ಷರು, ಸ್ಥಾಮಿವಿವೇಕಾನಂದ ಸೇವಾ ಸಂಘ ಶ್ರೀರಾಮನಗರ, ಬಾಲಾಜಿ ಮೆಡಿಕಲ್ ಮಾಲೀಕರಾದನಾಗೇಶ್ವರರಾವ್, ಎಂ. ನಾಗೇಶ್, ರಮೇಶ್ ವಕೀಲರು, ನಾಗನಗೌಡ, ಜಿ.ಯಾದವೇಂದ್ರ ಶರಣಪ್ಪ ಕಂಡ್ರಿ ಗಾಂಧಿ ಸೇರಿದಂತೆ ವೈದ್ಯಾದಿಕಾರಿಗಳಾದಹನುಮಂತಯ್ಯ, ರತಿ ರಂಜನ್, ಕೆವಿನ್ ವರ್ಷಿಣಿ, ಭಾನು ವಿಜಯ ಹಾಗೂಶಿಬಿರದ ವ್ಯವಸ್ಥಾಪಕರಾದ ವಿಶ್ವನಾಥ ರೆಡ್ಡಿ ಇತರರಿದ್ದರು.-ಸಹಿ-(ಜಿ. ರಾಮಕೃಷ್ಣ)
Vanamahotsava by Janshakti Nagar and Rural Development Organization
ಗಂಗಾವತಿ: ಜನಶಕ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿಸಂಸ್ಥೆ (ರಿ) ಅಡಿಯಲ್ಲಿ ನಡೆಯುತ್ತಿರುವ ತ್ರಿ-ಟಾ ಶಿಕ್ಷಣ ಹಾಗೂಔದ್ಯೋಗಿಕ ತರಬೇತಿ ಕೇಂದ್ರ ಸಂಸ್ಥೆಯ ಅಧ್ಯಕ್ಷರು,ಉಪಾಧ್ಯಕ್ಷರು, ಮುಖ್ಯ ಅತಿಥಿಗಳು, ಸದಸ್ಯರು, ವಿದ್ಯಾರ್ಥಿಗಳಪಾಲಕ/ಪೋಷಕರು ಪಾಲ್ಗೊಂಡು ಇಂದು ದಿನಾಂಕ: ೦೯.೦೭.೨೦೨೩ರಂದು ಪಂಪಾನಗರ ವೃತ್ತದಲ್ಲಿರುವ ಮಾತೋಶ್ರೀಕಾಂಪ್ಲೆಕ್ಸ್ನಲ್ಲಿರುವ ಶಿಕ್ಷಣ ಸಂಸ್ಥೆಯ ಮುಂಭಾಗದಲ್ಲಿಗಿಡಗಳನ್ನು ನೆಡುವುದು ಹಾಗೂ ಉಚಿತವಾಗಿ ಸಸಿಗಳನ್ನುವಿತರಿಸುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನುಆಚರಿಸಲಾಯಿತು ಎಂದು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದರು.ಮುಂದುವರೆದು ಅವರು ಮಾತನಾಡುತ್ತಾ, ಶ್ರೀಚಂದ್ರಶೇಖರ ಅಡವಿಹಾಳ, ಶಿಕ್ಷಣ ಇಲಾಖೆ, ಕುವೆಂಪು ನಗರ,ಗಂಗಾವತಿ ಇವರು ಶಿಕ್ಷಣ ಪ್ರೇಮಿಗಳಾಗಿದ್ದು, ನಮ್ಮ ಶಿಕ್ಷಣಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿ ನಮ್ಮ ಶಿಕ್ಷಣಸಂಸ್ಥೆಗೆ ಅಲ್ಮಾರ (ಬ್ಯುರೋ) ಕೊಡುಗೆ ನೀಡಿದ್ದು, ಅವರಿಗೆ ಇದೇಸಂದರ್ಭದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದಿಂದ ಗೌರವಯುತವಾಗಿಸನ್ಮಾನ ಮಾಡಲಾಯಿತು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಕರು ಹಾಗೂಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಆಲೂರು ಹಾಗೂ ನಗರ ಯೋಜನಾ. ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶ್ರೇಷ್ಠಿಮತ್ತು ಬಿ. ರಾಮಣ್ಣ ಶಿಕ್ಷಣ ಇಲಾಖೆ ಇವರುಗಳು ಆಗಮಿಸಿದ್ದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶೇಖ್ ನಬಿಸಾಬ,ಉಪಾಧ್ಯಕ್ಷರಾದ ಕೆ. ಮಂಜುನಾಥ, ಕಾರ್ಯದರ್ಶಿಗಳಾದದುರ್ಗಾಪ್ರಸಾದ, ಕೋಶಾಧ್ಯಕ್ಷರಾದ ಡಿ.ಆರ್. ಯುನೂಸ್,ಕಾರ್ಯಕಾರಿ ಮಂಡಳಿ ಸದಸ್ಯರಾದ ತಾಜುದ್ದೀನ್, ಅಯೂಬ್ ನಗರಿ,ಪಾಲಕರಾದ ಪಂಪನಗೌಡ್ರು ಹಾಗೂ ವಿದ್ಯಾರ್ಥಿಗಳುಉಪಸ್ಥಿತರಿದ್ದರು.ಮಾಹಿತಿಗಾಗಿ:ಕೆ. ಮಂಜುನಾಥಉಪಾಧ್ಯಕ್ಷರು, ಜ
Dravida Defense Forum” to be launched soon.- Bhardwaj
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ದ್ರಾವಿಡ ರಕ್ಷಣಾ ವೇದಿಕೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅದರಪೂರ್ವಭಾವಿ ಸಭೆಯನ್ನು ದಿನಾಂಕ: ೧೭.೦೭.೨೦೨೩ ಸೋಮವಾರಕರೆಯಲಾಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈಗಿನ ಪೀಳಿಗೆ ಜನರಿಗೆ ನಾವು ಮೂಲ ದ್ರಾವಿಡರು ಎಂಬುವುದುಗೊತ್ತಿಲ್ಲ. ಅದರಿಂದಾಗಿ ಅವರುಗಳು ಸನಾತನ ಆರ್ಯಸಂಘಟನೆಗಳ ಜೊತೆಗೆ ಹೋಗಿ ದ್ರಾವಿಡರ ಮೇಲೆಯೇ ದಾಳಿಮಾಡುತ್ತಿದ್ದಾರೆ. ದ್ರಾವಿಡರ ಬಗ್ಗೆ ಮೂಲ ದ್ರಾವಿಡರಿಗೆ ತಿಳಿಸಿ,ದ್ರಾವಿಡ ರಕ್ಷಣಾ ಸಂಘಟನೆಯನ್ನು ಗಟ್ಟಿಗೊಳಿಸುವುದುನಮ್ಮ ಉದ್ದೇಶವಾಗಿದೆ. ಇದರ ಅಂಗವಾಗಿ ದಿನಾಂಕ: ೧೭.೦೭.೨೦೨೩ರಂದು ಬೆಳಿಗ್ಗೆ ೧೧:೦೦ ಗಂಟೆಗೆ ರಾಯಚೂರು ರಸ್ತೆಯಆಟೋನಗರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆಎಂದು ಭಾರಧ್ವಾಜ್ ತಿಳಿಸಿದ್ದಾರೆ.ಆಸಕ್ತರು ದ್ರಾವಿಡರನ್ನು ಉಳಿಸಿಕೊಳ್ಳಲು ಪೂರ್ವಭಾವಿಸಭೆಗೆ ಹಾಜರಾಗಲು ಮನವಿ ಮಾಡುತ್ತಿದ್ದೇವೆ.ಶ್ರೀ ಜೆ. ಭಾರದ್ವಾಜ್,ರಾಜ್ಯಾಧ್ಯಕ್ಷರು, ಕ್ರಾಂತಿಚಕ್ರ ಬಳಗ, ಗಂಗಾವತಿ.
Savalagi Gram Panchayat: Jinnumati elected as President, Kavita as Vice President
ಸಾವಳಗಿ: ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಗ್ರಾಮ ಪಂಚಾಯತ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯತಿಯು ಮತ್ತೆ ಬಿಜೆಪಿ ಮಡಿಲಿಗೆ. ಜಾನಪದ ಪರಿಷತ್ ತಾಲೂಕ ಮಟ್ಟದ ಅಧ್ಯಕ್ಷರಾದ ಪಾರ್ಶ್ವನಾಥ ಉಪಾಧ್ಯ ಅವರ ಧರ್ಮಪತ್ನಿಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಕವಿತಾ ಸುನೀಲ್ ಪಾಟೋಳ್ಳಿ ಅವರು ಆಯ್ಕೆಯಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷೆಯಾದ ಶ್ರೀಮತಿ ಜಿನ್ನುಮತಿ ಪಾರ್ಶ್ವನಾಥ ಉಪಾಧ್ಯ ಅವರು ಗ್ರಾಮದಲ್ಲಿರುವ ಅನೇಕ ಅಭಿವೃದ್ಧಿ ಕಾರ್ಯಗಳು, ಸಮಸ್ಯೆಗಳಿಗೆ ಒತ್ತು ನೀಡುತ್ತೇನೆ. ಗ್ರಾಮವನ್ನು ಮಾದರಿ ಗ್ರಾಮ ಮಾಡುತ್ತೇವೆ, ಸಾರ್ವಜನಿಕರ ಸಮಸ್ಯೆಗೆ ಹಗಲಿರುಳು ಶ್ರಮಿಸುತ್ತೇನೆ ಹಾಗೂ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿದ ಪಕ್ಷದವರಿಗೆ ಹಾಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ್ ಕಡಕೋಳ, ಗ್ರಾಂ ಪಂ ಸದಸ್ಯರಾದ ಬಸುಗೌಡ ಪರಮಗೌಡ, ರಾಜುಗೌಡ ಪಾಟೀಲ, ಸುಜೀತಗೌಡ ಪಾಟೀಲ, ವಿನೋಬಾ ನ್ಯಾಮಗೌಡ, ಸಿದ್ದಾರ್ಥ್ ತಳಕೇರಿ, ಹಣಮಂತ ಸಂತಿವೂರ, ಗಾಮೇಶ ಬಾಪಕರ, ಭರತೇಶ ಜಮಖಂಡಿ, ನಂದಕುಮಾರ ಕನೇರಿ, ಶಂಕರ್ ಐನಾಪೂರ, ರಾಜು ಕರಾಬೆ, ಹಿರಿಯರಾದ ರಾಮಣ್ಣ ಬಂಡಿವಡ್ಡರ, ಪಾರ್ಶ್ವನಾಥ ಉಪಾಧ್ಯ, ಅಶೋಕ್ ಮಾಂಗ, ಸಂಜು ಮಾಳಿ ಹಾಗೂ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Environment protection is necessary to protect the living environment - Chandrasekhar, a retired education officer.
ಗಂಗಾವತಿ: ಸಕಲ ಜೀವರಾಶಿಗಳ ಅಳಿವು ಉಳಿವು ನಮ್ಮ ಸುತ್ತಲಿನ ಪರಿಸರದ ಮೇಲೆ ಅವಲಂಬಿತವಾಗಿದ್ದು ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ನಿವೃತ್ತ ಶಿಕ್ಷಣ ಇಲಾಖೆ ಅಧಿಕಾರಿ ಚಂದ್ರಶೇಖರ್ ಹೇಳಿದರು ಅವರು ರವಿವಾರದಂದು ತಇಟಾ ಶಿಕ್ಷಣ ಸಂಸ್ಥೆ ಹಾಗೂ ಜನಶಕ್ತಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಪರಿಸರ ದಿನಾಚರಣೆ ಸಂದರ್ಭದಲ್ಲಿ ಸಸನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡಮರಗಳನ್ನು ಕಾಡುಗಳನ್ನು ನಾಶ ಮಾಡುತ್ತಿರುವುದು ಆತಂಕಕಾರಿಯಾಗಿದೆ ಈ ಹಿನ್ನೆಲೆಯಲ್ಲಿ ಮನೆಗೆ ಒಂದು ಮರದಂತೆ ಊರಿಗೆ ಒಂದು ಉದ್ಯಾನವನ ನಿರ್ಮಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದು ತಿಳಿಸಿದರು ಸಂಸ್ಥೆಯ ಅಧ್ಯಕ್ಷ ಶೇಕ್ ನಬಿ ಸಾಬ್ ಮಾತನಾಡಿ ಮಾತನಾಡಿ, ಸಾಲುಮರದ ತಿಮ್ಮಕ್ಕನಂತೆ ಪ್ರತಿಯೊಬ್ಬರು ಹೇಳಮರಗಳನ್ನು ಬೆಳೆಸುವುದರ ಮೂಲಕ ಹಸಿರು ನಗರ ವನ್ನಗಿಸಲು ಪ್ರತಿಯೊಬ್ಬರು ಕಂಕಣಬದ್ದ ರಾಗಬೇಕು, ಸಸಿಗಳನ್ನು ಹಾಕುವುದು ಅಷ್ಟೇ ಅಲ್ಲ ಅವುಗಳನ್ನು ಮಕ್ಕಳಂತೆ ಜೋಪಾನ ಮಾಡಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕೆಂದರು, ಸಂಸ್ಥೆ ಮುಖ್ಯೋಪಾಧ್ಯಾಯ ತಾಜುದ್ದೀನ್ ಪರಿಸರ ಕುರಿತಂತೆ ಪ್ರಮಾಣ ವಚನ ಬೋಧಿಸಿದ,ರು,, ಶಿಕ್ಷಕ ಲಿಂಗಾರೆಡ್ಡಿ ಆಲೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು ಪರಿಸರ ಕುರಿತು ಮಕ್ಕಳು ಘೋಷಣೆಗಳನ್ನು ಕೂಗಿದರು, ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರ ಕೆ ಮಂಜುನಾಥ್ ಯೂಸುಫ್ ಪಂಪಾಪತಿ ದುರ್ಗಾ ಪ್ರಸಾದ್, ವಿದ್ಯಾರ್ಥಿ ಪಾಲಕರಾದ ಹೇಮಾವತಿ ಶೇಷಗಿರಿ ಇತರರು ಪಾಲ್ಗೊಂಡಿದ್ದರು ಬಳಿಕ ಸಾರ್ವಜನಿಕರಿಗೆ ಸಸಿಗಳನ್ನು. ವಿತರಿಸಲಾಯಿತು,