Urge to solve the problem of agricultural laborers-U Basavaraj
ಗಂಗಾವತಿ, ಪಿ ಪಿ ಎಂ ಪಕ್ಷ ವತಿಯಿಂದ ತಾಲೂಕಿನ ಹೇಮಗುಡ್ಡ ದಲ್ಲಿ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು
ಬಾಗ್ಯ ಜ್ಯೋತಿ ಹೊಂದಿದ ರೈತರಿಗೆ 75% ರಷ್ಟು ಯುನಿಟ್ ಕೊಡಲು ಸರಕಾರ ಮುಂದಾಗಿದ್ದು. ಇದು ಸರಿಯಾದ ಬೆಳವಣಿಗೆ ಅಲ್ಲ.ಎಲ್ಲಾರಿಗೂ 200 ಯುನಿಟ್ ವಿದ್ಯುತ್ ಕೊಡಬೇಕೆಂದರು. ಬಡ ಜನರಿಗೆ ಕಾಂಗ್ರೆಸ್ ಸರಕಾರ ತಂದ 5 ಗ್ಯಾರಂಟಿ ಗಳನ್ನು ಸ್ವಾಗತ ಮಾಡುತ್ತೇವೆ .ಆ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿ ಯಾಗಲಿ ಸರಕಾರ ಕರ್ನಾಟಕ ಕೂಲಿಕಾರ ರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು ಇದರಿಂದ ಬಡವರಿಗೆ ತುಂಬ ಅನುಕೂಲವಾಗುತ್ತದೆ ಎಂದರು. ವೇದಿಕೆಯ ಮೇಲೆ ಕೃಷಿ ಕೂಲಿಕಾರ ರ ಸಂಘದ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಸ್ವಾಮಿ.ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ.ಬೀಮಶೆಟ್ಟಿ ಯಂಪಳ್ಳಿ.ನಿರುಪಾದಿ ಬೆಣಕಲ್.ಸುಂಕಪ್ಪ ಗದಗ ಬಸವರಾಜ ಮರಕುಂಬಿ.ಇತರರು ಇದ್ದರು.
Dandeli forest department officials have done injustice to government schools and given justice only to private companies: Journalist and activist Basavaraju alleges...!
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಭರ್ಚಿ ಅರಣ್ಯ ಪ್ರದೇಶದ ವಲಯದ ವ್ಯಾಪ್ತಿಯಲ್ಲಿ ಬರುವ ನಾಗರಗೊಳ, ಗೋಬ್ರಾಳ ಸೇರಿದಂತೆ ಬಹುತೇಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳು ಕಾಂಪೌಂಡ್
ನಿರ್ಮಿಸಿಕೊಳ್ಳಲು ಪ್ರಯತ್ನ ಪಟ್ಟರೇ ಸಾಕು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಓಡೋಡಿ ಬಂದು ಅಭಿವೃದ್ಧಿ ಕೆಲಸಗಳನ್ನು ತಡೆಯುತ್ತಾರಂತೆ, ಆದ್ರೆ ಇತ್ತೀಚೆಗೆ ಖಾಸಗಿ ಸಣ್ಣ ಕಂಪನಿಗಳು, ರೆಸಾರ್ಟ್ ಗಳು ಮಾತ್ರ ಅರಣ್ಯ ಪ್ರದೇಶದಲ್ಲಿದ್ದರೂ ಸಹ ಅವುಗಳಿಗೆ ಮರ ಕಡಿಯುದಕ್ಕೆ ಹಾಗೂ ಕಟ್ಟಡ ನಿರ್ಮಾಣ ಮಾಡಿ ಕೊಳ್ಳೋದಕ್ಕೆ ಹಾಗೂ ಕಾಂಪೌಂಡ್
ನಿರ್ಮಿಸಿಕೊಳ್ಳೋದಕ್ಕೆ ಅನುಮತಿ ನೀಡುತ್ತಾರಂತೆ, ಇನ್ನೂ 20 ವರ್ಷಗಳಿಂದ ಇದೇ ಸ್ಥಳದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ಯಾಯ, ಖಾಸಗಿ ರೆಸಾರ್ಟ್ ಹಾಗೂ ಕಂಪನಿಗಳಿಗೆ ಮಾತ್ರ ನ್ಯಾಯವೇ…! ಇನ್ನೂ ದಟ್ಟ ಅರಣ್ಯ ಪ್ರದೇಶದಲ್ಲಿ ಇರುವ ನ್ಯಾಶನಲ್ ಕಾಂಕ್ರೀಟ್ ಎಂಬ ಖಾಸಗಿ ಕಂಪನಿಗೆ ಮಾತ್ರ ಮರಗಳನ್ನು ಕಡಿಯುವುದಕ್ಕೆ, ಕಟ್ಟಡ ನಿರ್ಮಾಣ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಳ್ಳೋದಕ್ಕೆ ಬರ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈ ಜೋಡಿಸಿದರೇ ಎಂಬ ಸಂಶಯ ಕಾಡುತ್ತಿದೆ. ಆದ್ದರಿಂದ ಪತ್ರಕರ್ತ ಹಾಗೂ
ಹೋರಾಟಗಾರ ಬಸವರಾಜು ಭೇಟಿಕೊಟ್ಟು ಅರಣ್ಯ ಪ್ರದೇಶದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು , ಅಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ನಂತರ ಖಾಸಗಿ ಕಂಪನಿಗಳು ನಿರ್ಮಾಣವಾಗುತ್ತಿರುವ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಾರತಮ್ಯ ಹಾಗೂ ಶಾಮೀಲಿನ ಬಗ್ಗೆ ವರದಿ ತಯಾರಿಸಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ ವೈದ್ಯ ಅವರಿಗೆ ಕರೆ ಮಾಡಿ ಈ ಸಮಸ್ಯೆ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಅರಣ್ಯ ಪ್ರದೇಶದ ವ್ಯಾಪ್ತಿಯ ಈ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಭಾಗ್ಯ ಸಿಕ್ಕು, ನಾಯಿ ಕೊಡೆಗಳಂತೆ ತಲೆಯೆತ್ತಲು ಕಾರಣರಾದ ಈ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮವಾಗುವುದೇ ಎಂಬುದನ್ನು ಕಾದುನೋಡಬೇಕಿದೆ.
Application Invitation for the post of Guest Lecturer
ಕೊಪ್ಪಳ ಜುಲೈ 15 (ಕ.ವಾ.):ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕನಕಗಿರಿಯಲ್ಲಿ ನಡೆಯುತ್ತಿರುವ ಎಲೆಕ್ಟಿçಸಿಯನ್ ಮತ್ತು ಫಿಟ್ಟರ್ ಟ್ರೇಡಗಳಿಗೆ 2023-24ನೇ ಸಾಲಿನಲ್ಲಿ ತರಬೇತಿ ನೀಡಲು ಅತಿಥಿ ಬೋಧಕರ ಅವಶ್ಯಕತೆ ಇದ್ದು, ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಲೆಕ್ಟ್ರಿಷಿಯನ್ 1 ಹುದ್ದೆಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಇಇ ಅಥವಾ ಬಿಇ ಎಲೆಕ್ಟ್ರಿಕಲ್ ವಿದ್ಯಾರ್ಹತೆ ಇರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು. ಫಿಟ್ಟರ್ 2 ಹುದ್ದೆಗಳಿಗೆ ಐಟಿಐ ಅಥವಾ ಎಟಿಎಸ್ ಅಥವಾ ಡಿಎಂಇ ಅಥವಾ ಬಿಇ (ಮೆಕ್ಯಾನಿಕ್) ವಿದ್ಯಾರ್ಹತೆ ಹೊಂದಿರಬೇಕು. ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಜಿಗಳನ್ನು ಜುಲೈ 28ರ ಸಂಜೆ 5 ಗಂಟೆಯೊಳಗಾಗಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ (ಮೊ:9448259832) ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಕೊಪ್ಪಳ ಜುಲೈ 15 (ಕ.ವಾ.): ವಿಶ್ವ ಹಿರಿಯ ನಾಗರಿಕರ ದಿನಾಚಾರಣೆಯ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಶಿಕ್ಷಣ, ಸಾಹಿತ್ಯ, ಕಾನೂನು, ಪ್ರತಿಭೆ, ಕ್ರೀಡೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಮಾಜ ಸೇವೆ ಒಳಗೊಂಡಂತೆ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 01 ಸಂಸ್ಥೆಗೆ ಒಟ್ಟು 07 ಪ್ರಶಸ್ತಿಗಳನ್ನು ರಾಜ್ಯಮಟ್ಟದಲ್ಲಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಮೇಲ್ಕಂಡ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಂದ ಮತ್ತು ಅರ್ಹ ಸಂಸ್ಥೆಗಳಿಂದ ಅರ್ಜಿಯನ್ನು ದ್ವಿಪ್ರತಿಯಲ್ಲಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಗಳನ್ನು ಈ ಕಚೇರಿಯಿಂದ ಪಡೆದು ನಿಗದಿತ ನಮೂನೆಯಲ್ಲಿ ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿ ಪ್ರಸ್ತಾವನೆಗಳನ್ನು ದ್ವಿಪ್ರತಿಯಲ್ಲಿ ಆಗಸ್ಟ್ 14ರೊಳಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಕಚೇರಿ, ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ ಕೊಠಡಿ ಸಂಖ್ಯೆ 31,32 ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಹೊಸಪೇಟ್ ರಸ್ತೆ ಕೊಪ್ಪಳ ಈ ಕಚೇರಿಗೆ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08539-295496 ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಕೊಪ್ಪಳ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
World Population Day celebrations at Lakshmi Camp as part of Azadi Ka Amrita Mahotsav program
ಗಂಗಾವತಿ: ನಗರದಲ್ಲಿ 24 ನೇ ವಾರ್ಡ್ ಲಕ್ಷ್ಮೀ ಕ್ಯಾಂಪನಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ನಂತರ ಉದ್ಘಾಟಿಸಿ ಮಾತನಾಡಿ ನಗರಸಭೆ ಸದಸ್ಯ ನವೀನಕುಮಾರ ಪಾಟೀಲ್ ಇವರು ವಿಶ್ವ ಜನಸಂಖ್ಯೆ ಸುಮಾರು 500,ಕೋಟಿಗೆ ತಲುಪಿದ ದಿನದಂದು ಅಂದಿನಿಂದ ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿವಿಧ ಫೋಷವಾಕ್ಯಗಳೊಂದಿಗೆ ಪ್ರತಿವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನಾಚರಣೆ ಆಚರಣೆ ಮಾಡಲಾಯಿತು ಆದ್ರೇ ಆಚರಣೆ ಮಾಡಿ ಬಿಡುವುದಲ್ಲಾ ಕಾರ್ಯ ರೂಪಕ್ಕೆ ತವರುವುದು ನಮ್ಮ ನಿಮ್ಮ ಜವಾಬ್ದಾರಿ ಆದಕಾರಣ ಪ್ರತಿ ನಿಮಿಷಕ್ಕೆ ಪ್ರತಿ ಘಂಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತೀರುವದರಿಂದ ಆಹಾರ ನೀರು,ಬಟ್ಟೆ, ವಸತಿ, ಹಾಗೂ ಖನಿಜಗಳ ಸಂಖ್ಯೆ ಕೊರತೆ ಆಗುತ್ತದೆ ಆದಕಾರಣ ಜನಸಂಖ್ಯೆ ತಡೆಗಟ್ಟಲು ಇರುವ ಕೆಲವು ಮಾರ್ಗಗಳು ಮದುವೆಯಾಗಲು ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ 18 ವರ್ಷ ತುಂಬಿರಬೇಕು ಮದುವೆಯಾದ ನಂತರ ಕನಿಷ್ಟ ಮೂರು ವರ್ಷಗಳವರೆಗೂ ಮೊದಲನೆಯ ಮಗುವನ್ನು ಪಡೆಯಬಾರದು ಹಾಗೂ ಜನಗಳ ನಡುವೆ ಕಡೇ ಪಕ್ಷ ನಾಲ್ಕು ವರ್ಷಗಳ ಅಂತರವಿರಬೇಕು ಈ ಒಂದು ತಡೆಗಟ್ಟಲು ನಿರೋದ್ ಬಳಕೆಯನ್ನು ಮಾಡಬೇಕು ಎಲ್ಲಾ ಉಪಕೇಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ, ಸಮುದಾಯ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರಲ್ಲಿ ಸಹ ಲಭ್ಯವಿರುತ್ತದೆ ಹಾಗೂ ಮಹಿಳೆಯರಿಗೆ ವಂಕಿಧಾರಣೆ,ಪಿಪಿಐಯುಸಿಡಿ,ಪಿಎಐಯುಸಿಡಿ,ಇಂಟರ್ ವಲ್ ಐಯುಸಿಡಿ ಗರ್ಭನಿರೋಧಕ ಮಾಲ್ ಎ.ಗುಳಿಗೆಗಳು ಮಹಿಳೆಯರು ಇದೊಂದು ತಾತ್ಕಾಲಿಕ ಗರ್ಭನಿರೋಧಕ ವಿಧಾನವಾಗಿದೆ ಎಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅನುಷನ ಅಧಿಕಾರಿಗಳಾದ ಡಾ.ರವೀಂದ್ರನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಆಶಾಬೇಗಂ,ಡಾ.ರಮೇಶ,ಡಾ.ಶಬರೀನ್,ಆರೋಗ್ಯ ಸಿಬ್ಬಂದಿ ವೀರೇಶ ಎಲ್.ಡಿ.ಸಿ, ಮುಖ್ಯೋಪಾಧ್ಯಾಯರಾದ ಮಾತಮ್ಮ ಪತ್ತಾರ,ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಆಚಾರ್ಯ, ಸುಮಾ,ಮೀನಾಕ್ಷಿ, ಸರೋಜಬಾಯಿ,ಗೌಸೀಯಾ, ದೀಪಾ,ಗಾಯಿತ್ರಿ,ಸವಿತ,ಸೇರಿದಂತೆ ಇದ್ದರು
Massive protest by BJP Zilla Yuva Morcha condemning the killing of Jain sages and the neglectful attitude of the Planetary Department.
ಗಂಗಾವತಿ,,15 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಾನೂನು ವ್ಯವಸ್ಥೆಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇತ್ತೀಚಿಗೆ ಜರುಗಿದ ಜೈನ ಮುನಿಗಳ ಹತ್ಯೆ ಬಿ ಗ್ರೇಡ್ ಮುಖಂಡ ವೇಣುಗೋಪಾಲ್ ಹತ್ಯೆ ಸೇರಿದಂತೆ ರಾಜ್ಯದಲ್ಲಿಅ ರಾಜಕಥೆ ತಾಂಡವಾಡುತ್ತಿದ್ದು, ಖಂಡಿಸಿ ಭಾರತೀಯ ಜನತಾ ಪಕ್ಷ ಕೊಪ್ಪಳ ಜಿಲ್ಲಾ ಯುವ ಘಟಕದ ನೇತೃತ್ವದಲ್ಲಿ ಶನಿವಾರದಂದು ಬೃಹತ್ ಪ್ರತಿಭಟನೆ ನಡೆಸಿದರು, ಸಿಬಿಎಸ್ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆಯನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿ ಮಾತನಾಡಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 45 ದಿನಗಳು ಸಹ ಪೂರ್ಣಗೊಂಡಿಲ್ಲ ಈ ಅವಧಿಗಳಿಗೆ ಬೆಳಗಾವಿ ಚಿಕ್ಕೋಡಿಯ ಜೈನ ಮುನಿಗಳ ಬರ್ಬರ ಹತ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ, ಹಾಗೆ ಹಿಂದು ಮುಖಂಡ ವೇಣುಗೋಪಾಲ್ ಹತ್ತೆ ಸಹಷುಲ್ಲಕ ಕಾರಣಕ್ಕೆ ಜರಗಿದ್ದು ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ ಯನ್ನು ಕಾಪಾಡುವಲ್ಲಿ ಗ್ರಹ ಇಲಾಖೆ ವಿಶೇಷ ಗಮನ ಹರಿಸಲು ರಾಜ್ಯಪಾಲರು ಸೂಚನೆ ನೀಡಬೇಕೆಂದು ಒಪ್ಪಿಸಲಾಗುತ್ತದೆ ಎಂದರು, ಯುವ ಘಟಕದ ಜಿಲ್ಲಾಧ್ಯಕ್ಷ ಶಿವಕುಮಾರ್ ಅರಿಕೇರಿ ವೀರಭದ್ರಪ್ಪ ನಾಯಕ್ ಕಾಶಿನಾಥ್ ತಿಪ್ಪೇರುದ್ರಸ್ವಾಮಿ ಹನುಮಂತಪ್ಪ ನಾಯಕ್ ಸೇರಿದಂತೆ ಹಲವು ಘಟಕಗಳ ಸದಸ್ಯರು ಅಧ್ಯಕ್ಷ ಪದಾಧಿಕಾರಿಗಳು ಹಾಗೂ ಜೈನ್ ಸಮಾಜದ ಮುಖಂಡರು ಪಾಲ್ಗೊಂಡಿದ್ದರು ಬಳಿಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಶ್ರೀ ಮಹಾವೀರ ವೃತ್ತದಲ್ಲಿ ತಸಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು
ಬೆಂಗಳೂರು, ಜುಲೈ ೧೫: ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧದ ಭದ್ರತಾ ಪಡೆ ೨೫೦ಕ್ಕೂ ಹೆಚ್ಚು ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದು, ಈ ಘಟನೆಯ ನಂತರ, ಪೊಲೀಸರು ಇಂತಹ ನಕಲಿ ಪಾಸ್ ಬಳಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ೪ ಜುಲೈ ೭ ರಂದು ೭೨ ರ‍್ಷದ ತಿಪ್ಪೇರುದ್ರ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಿದ ನಂತರ ವಿಧಾನಸೌಧ ಭದ್ರತಾ ಅಧಿಕಾರಿಗಳು ಅರ‍್ಟ್ ಆಗಿದ್ದಾರೆ. ಅದೇ ದಿನ ಸ್ಪೀಕರ್ ಯುಟಿ ಖಾದರ್ ಸಭೆ ನಡೆಸಿ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಈ ಬಗ್ಗೆ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಎಸ್‌ಡಿ ಶರಣಪ್ಪ, ನಾವು ಸಾಮಾನ್ಯವಾಗಿ ಕಟ್ಟುನಿಟ್ಟಾದ ಭದ್ರತಾ ತಪಾಸಣೆಗಳನ್ನು ಹೊಂದಿರುತ್ತೇವೆ. ಬಜೆಟ್ ಅಧಿವೇಶನದಲ್ಲಿ ನಡೆದ ಘಟನೆಯ ನಂತರ, ನಾವು ಭದ್ರತೆಯನ್ನು ಹೆಚ್ಚಿಸಿದ್ದೇವೆ ಮತ್ತು ತಪಾಸಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಾವು ಸುಮಾರು ೨೫೦ ನಕಲಿ ಪಾಸ್‌ಗಳನ್ನು ಪತ್ತೆ ಮಾಡಿ ಅವುಗಳನ್ನು ವಶಪಡಿಸಿಕೊಂಡಿದ್ದೇವೆ. ಹಲವಾರು ನೌಕರರು ಮತ್ತು ಶಾಸಕರ ಸಿಬ್ಬಂದಿ ಕೂಡ ಹಳೆಯ ಪಾಸ್‌ಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಘಟನೆಗಳು ಮರುಕಳಿಸಿದರೆ ನಾವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು. ಎಂಎಲ್‌ಎ, ಎಂಎಲ್‌ಸಿಗಳಿಗೆ ನೀಡಿರುವ ಪಾಸ್‌ಗಳನ್ನು ಕಲರ್ ಜೆರಾಕ್ಸ್ ಮಾಡಿ ವಿಧಾನಸೌಧ ಬರುತ್ತಿದ್ದರು. ನಕಲಿ ಪಾಸ್‌ಗಳನ್ನ ಬಳಸಿ ಒಳ ಪ್ರವೇಶಿಸುವವರ ನಿಯಂತ್ರಣಕ್ಕೆ ವಿಧಾನಸೌಧಕ್ಕೆ ಪ್ರವೇಶ ನೀಡುವ ಎಲ್ಲಾ ಗೇಟ್‌ಗಳಲ್ಲಿ ಪ್ರತಿಯೊಬ್ಬರ ಪರಿಶೀಲನೆ ನಡೆಸಲಾಗುತ್ತಿದೆ. ಅವಧಿ ಮುಗಿದಿರುವ ಪಾಸ್, ಕಲರ್ ಜೆರಾಕ್ಸ್ ಪಾಸ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್‌ಗಳ ಬಳಕೆಯಾಗುತ್ತಿದೆ ಎನ್ನಲಾಗಿದೆ. ಸದ್ಯ ನಕಲಿ ಪಾಸ್ ಬಳಸುತ್ತಿದ್ದ ಎಲ್ಲರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಶೀಲನೆ ನಂತರ ಮಾಜಿ ಎಂಎಲ್ಎ, ಎಂಎಲ್‌ಸಿ ಪಾಸ್‌ಗಳೇ ನಕಲಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ವಿಧಾನಸೌಧ ಸಿಬ್ಬಂದಿ ಎಂದೇ ನಕಲಿ ಪಾಸ್ ಬಳಕೆ ಮಾಡಿರುವುದು ಕಂಡುಬಂದಿದೆ. ಈ ನಕಲಿ ಪಾಸ್‌ಗಳ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಧಾನಮಂಡಲ ಜಂಟಿ ಅಧಿವೇಶನದೊಳಕ್ಕೆ ಬಜೆಟ್ ಮಂಡನೆ ದಿನವೇ (ಜುಲೈ ೦೭) ಅನುಮಾನಾಸ್ಪದ ವ್ಯಕ್ತಿ ಆಗಮಿಸಿದ್ದ ಬೆನ್ನಲ್ಲೆ ಜುಲೈ ೧೦ರಂದು ಮಹಿಳೆಯೊಬ್ಬಳು ವಿಧಾನಸೌಧಕ್ಕೆ ಚಾಕು ಇಟ್ಟುಕೊಂಡು ಬಂದಿದ್ದ ಘಟನೆ ನಡೆದಿತ್ತು. ಸೋಮವಾರ ಎಂದಿನಂತೆ ವಿಧಾನಸೌಧ ಕರ‍್ಯಕಲಾಪಗಳು ಆರಂಭವಾಗಿದ್ದವು. ಈ ವೇಳೆ ವಿಧಾನನೌಧ ಪ್ರವೇಶಿಸಲು ಆಗಮಿಸಿದ ಮಹಿಳೆಯ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದ್ದು, ಆಕೆಯನ್ನು ಅಲ್ಲಿದ್ದ ಭದ್ರತಾ ಸಿಬ್ಬಂದಿ ವಾಪಸ್ ಕಳುಹಿಸಿದ್ದರು. ಸದನಕ್ಕೆ ಶಾಸಕರ ಸೋಗಿನಲ್ಲಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ಕರ‍್ಯ ಚುರುಕುಗೊಳಿಸಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರವೇಶಿಸುವ ಪ್ರತಿ ವ್ಯಕ್ತಿ ಹಾಗೂ ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಒಳ ಬಿಡಲಾಗುತ್ತಿದೆ. ವಿಧಾನಸೌಧ ಪ್ರವೇಶಿಸುವ ಎಲ್ಲಾ ಗೇಟ್‌ಗಳಲ್ಲಿ ರ‍್ತವ್ಯ ನರ‍್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ. ಕಾರು ಕೊಟ್ಟಿಲ್ಲ ಎಂದು ನಿಕಾಹ್ ಸಮಾರಂಭ ನಡೆದು ಎರಡು ಗಂಟಗಳಲ್ಲೇ ತ್ರಿವಳಿ ತಲಾಖ್ ಘೋಷಿಸಿದ ವರ! ಅಲ್ಲದೆ, ಬ್ಯಾಗ್ ಸೇರಿ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ಅನುಮಾನಾಸ್ಪವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆಗೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್‌ಗಳನ್ನು ಕಡ್ಡಾಯವಾಗಿ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್ ಇದ್ದರೆ ಮಾತ್ರ ಒಳಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.
Adjournment of the 17th July Disha Committee meeting
ಕೊಪ್ಪಳ ,(ಕರ್ನಾಟಕ ವಾರ್ತೆ): ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಕರಡಿ ಸಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಜುಲೈ 17ರಂದು ನಿಗದಿಪಡಿಸಲಾಗಿದ್ದ 2022-23ನೇ ಸಾಲಿನ 4ನೇ ತ್ರೈಮಾಸಿಕ ಹಾಗೂ 2023-24ನೇ ಸಾಲಿನ 1ನೇ ತ್ರೈಮಾಸಿಕದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ (ದಿಶಾ) ಸಭೆಯನ್ನು ವಿಧಾನಸಭಾ ಅಧಿವೇಶನ ಜಾರಿಯಲ್ಲಿರುವ ಹಿನ್ನೆಲೆ ಮುಂದೂಡಲಾಗಿದೆ. ಸಭೆಯ ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BJP leader who contested against Priyank Kharge arrested
ಕಲಬುರಗಿ(ಜು.15): ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್ ಆಗಿದ್ದಾರೆ. ಪ್ರಿಯಾಂಕ್ ಖರ್ಗೆ ವಿರುದ್ದ ಸ್ಪರ್ಧಿಸಿ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಚುನಾವಣಾ ಸಂದರ್ಭದಲ್ಲಿನ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಹೀಗಿದ್ದರೂ ವಿಶೇಷ ಜಾಮೀನು ಪಡೆದ ಮಣಿಕಂಠ ರಾಠೋಡ್ ರಾತ್ರಿಯೇ ಜೈಲಿನಿಂದ ಹೊರ ಬಂದಿದ್ದಾರೆ. ಇನ್ನು ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಖರ್ಗೆ ಕುಟುಂಬ ಸಾಫ್ ಮಾಡುವುದಾಗಿ ಮಣಿಕಂಠ ಹೇಳಿದ್ದ ಆಡಿಯೋ ಚುನಾವಣೆ ಸಂದರ್ಭದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣದ ತನಿಖೆಯನ್ನೂ ಚಿತ್ತಾಪುರ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿಯೂ ಮಣಿಕಂಠ ರಾಠೋಡ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ರಾಠೋಡ್ ಜಾಮೀನು ಪಡೆದಿದ್ದರೂ ಚಿತ್ತಾಪುರ ಪೊಲೀಸರು ಅವರಿಗೆ ನೋಟಿಸ್ ನೀಡಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ದ ತೊಡೆತಟ್ಟಿದ್ದ ಮಣಿಕಂಠ ರಾಠೋಡ್ಗೆ ಇದೀಗ ಸಂಕಷ್ಟ ಬಂದಿದೆ.
ಕೊಪ್ಪಳ,(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳ ಕೆಲವು ಹಳ್ಳಿಗಳಲ್ಲಿ ಹಾಗೂ ಇತರೆ ಜನ ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಜಿಲ್ಲೆಯ ಜನ ವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರು ಪೂರೈಸಲಾಗುತ್ತದೆ. ದುರಸ್ತಿ ಮಾಡಬೇಕಾದ ಘಟಕಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ. ಗಂಗಾವತಿ, ಕನಕಗಿರಿ, ಕೊಪ್ಪಳ ಹಾಗೂ ಕುಷ್ಟಗಿ ತಾಲೂಕಿನ 04 ಗ್ರಾಮಗಳಲ್ಲಿ 12 ಟ್ಯಾಂಕರಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಹಾಗೂ ಇತರೆ 13 ಗ್ರಾಮಗಳಿಗೆ 14 ಖಾಸಗಿ ಬೋರವೆಲ್ ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. 2023-24ನೇ ಸಾಲಿನ ತುರ್ತು ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಯ 07 ತಾಲೂಕುಗಳ ವಿವಿಧ ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಒಟ್ಟು 108 ಹೊಸ ಬೋರವೆಲ್ ಗಳನ್ನು ಕೊರೆಯಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಯ ಬಗ್ಗೆ ಕ್ರಮ ವಹಿಸಲಾಗಿದೆ ಎಂಬ ಮಾಹಿತಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ ಎಂದು ಸಿಇಓ ಅವರು ತಿಳಿಸಿದ್ದಾರೆ.