ನಿಹಾರಿಕಾ ಕ್ರಿಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ (ಆಲ್ಬಮ್ ಹಾಡು)
Heart Talk (Album Song) by Niharika Creations




ಅತಿಶೀಘ್ರದಲ್ಲಿ ನಿಮ್ಮ್ ಮುಂದೆ…

ಬೆಂಗಳೂರು:- ಪ್ರೀತಿ ಪ್ರೇಮದ ವಿರಹ ಪ್ರೀತಿ ಮಾಡಿದ ಹುಡುಗನಿಂದ ಪ್ರೀತಿ ದೂರವಾದ ಮೇಲೆ ಆ ಪ್ರೀತಿಯ ನೆನಪು ಮತ್ತೆ ಮತ್ತೆ ಕಾಡುವ ಹಾಗೆ ಅವಳ ಪ್ರೀತಿಯ ನೆನಪಿನಂಗಳದಲ್ಲಿ ಮರೆಯಾದ ಸುಂದರ ಪ್ರೇಮ ವಿರಹದ ಗೀತೆಯನ್ನು ಇತ್ತೀಚೆಗಷ್ಟೇ ಸಕ್ಲೇಶಪುರ/ಹಾಸನ ಬೆಂಗಳೂರು/ಸುತ್ತಮುತ್ತ ಸುಂದರ ರಮಣೀಯ ಮನೋಹರಕವಾದ ತಾಣಗಳಲ್ಲಿ ಚಿತ್ರಕರಿಸಲಾಯಿತು. ಈ ಗೀತೆಯನ್ನು ರಚಿಸಿ ಸಾಹಿತ್ಯ ಸಂಯೋಜನೆ ಮಾಡಿ ಹಾಡಿದವರು ಡಿ.ಕೆ. ಹಣಮಂತು ನಾರಾಯಣಪುರ (ಯಾದಗಿರಿ) ಮತ್ತೆ ಈ ಗೀತೆಯ ನೃತ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದವರು ಅಭಿಲಾಶ್, ಹಾಸನ್,
ಸಹಾಯಕ ನಾಗಿ ಇಂದ್ರ್ ಜಿತ್,(ಮಸ್ಕಿ) ಹಾಗೂ ಈ ಗೀತೆಗೆ ನೃತ್ಯ ಸಂಯೋಜನೆ ಪ್ರದೀಪ್ ನಂದಿ (ವಿಜಯಪುರ) ಅವರದು,
ಈ ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ಲಕ್ಷಿತ ಪೂಜಾರಿ (ಮಂಗಳೂರು) ಇವರ ಜೊತೆಯಾಗಿ ಮೌನೇಶ್ ರಾಠೋಡ್ (ಮಸ್ಕಿ) ನಾಯಕನಾಗಿ ಹೆಜ್ಜೆ ಹಾಕಿ ಜೊತೆಗೆ ಆಲ್ಬಮ್ ಹಾಡಿನ ಸಂಪೂರ್ಣ ವೆಚ್ಚವನ್ನು ಬರೆಸಿ ನಿರ್ಮಾಪಕರಾಗಿದ್ದಾರೆ, ಯಲಿಯೂರು ಪಿಳ್ಳೇಗೌಡ ರವರ ನಿರ್ದೇಶನವಿದೆ.

ಮಕ್ಕಳ ಸ್ನೇಹಿ ಗ್ರಂಥಾಲಯಗಳನ್ನಾಗಿ ಮಾಡಿ:ಇಓಮಹಾಂತಗೌಡ ಪಾಟೀಲ್ ಸಲಹೆ
Make libraries child-friendly: Eomahantha Gowda Patil advises


ಗಂಗಾವತಿ: ಮಕ್ಕಳನ್ನು ಓದಿನತ್ತ ಕರೆತರಲು ಗ್ರಂಥಾಲಯಗಳ ಪಾತ್ರ ಪ್ರಮುಖವಾಗಿದ್ದು, ಗ್ರಾಮೀಣ ಗ್ರಂಥಾಲಯಗಳು ಮಕ್ಕಳ ಸ್ನೇಹಿ ಗ್ರಂಥಾಲಯಗಳಾಗಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್ ಅವರು ಹೇಳಿದರು.

ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರಿಗೆ ಗ್ರಂಥಾಲಯ ಇಲಾಖೆ ಹಾಗೂ ಅಬ್ದುಲ್ ನಜೀರ್ ಸಾಬ್ ಸಂಸ್ಥೆಯಿಂದ ಆಯೋಜಿಸಿದ್ದ ಮೂರು ದಿನಗಳ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಗಂಗಾವತಿ, ಕನಕಗಿರಿ ಹಾಗೂ ಕಾರಟಗಿಯ ಅಖಂಡ ತಾಲೂಕಿನ ಎಲ್ಲ ಗ್ರಂಥಾಲಯಗಳು ಮಾದರಿ ಗ್ರಂಥಾಲಯಗಳಾಗಬೇಕು. ಗ್ರಂಥಾಲಯ ಮೇಲ್ವಿಚಾರಕರು ಸರಿಯಾದ ಸಮಯ ಪಾಲನೆ, ಶಿಶ್ತು ಪಾಲನೆ, ಮಕ್ಕಳ ಆಕರ್ಷಣೆಗೆ ತಕ್ಕಂತೆ ಪುಸ್ತಕ ಜೋಡಿಸುವುದು, ನಿತ್ಯ ಮಕ್ಕಳ ನೋಂದಣಿ ಮಾಡುವುದು, ಲೈಬ್ರರಿಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಿಸುವ ಕೆಲಸ ಮಾಡಬೇಕು ಎಂದರು.

ವಿಶೇಷ ಚಟುವಟಿಕೆಗಳಾದ ಪುಸ್ತಕಗಳ ಪರಿಚಯ, ಗಟ್ಟಿ ಓದು ಅಭಿಯಾನ, ಸಣ್ಣಕಥೆಗಳ ಓದುವ ಹವ್ಯಾಸ, ಕ್ರೀಡೆಗಳನ್ನು ಆಯೋಜಿಸಿ ಮಕ್ಕಳನ್ನು ಓದಿನತ್ತ ಕರೆತರಬೇಕು. ಬಾಲ್ಯದಲ್ಲೇ ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವ ಕೆಲಸ ಆಗಬೇಕು. ಕಂಪ್ಯೂಟರ್ ಶಿಕ್ಷಣ ನೀಡಬೇಕು. ಇತ್ತೀಚೆಗೆ ಮಕ್ಕಳು ಮೊಬೈಲ್ ಗೀಳಿಗೆ ಬೀಳುತ್ತಿದ್ದಾರೆ, ಇವರನ್ನು ಅದರಿಂದ ಹೊರತಂದು ಗ್ರಂಥಾಲಯಕ್ಕೆ ಬರುವಂತೆ ಮಾಡಬೇಕಾದ ಜವಾಬ್ದಾರಿ ಗ್ರಂಥಾಲಯ ಮೇಲ್ವಿಚಾರಕರ ಮೇಲಿದೆ ಎಂದರು.

ಮೂರು ದಿನದ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.

ತಾಪಂ ತರಬೇತಿ ವಿಷಯ ನಿರ್ವಾಹಕರಾದ ಶಿವಮೂರ್ತಯ್ಯ, ಗಂಗಾವತಿ ಶಾಖಾ ಗ್ರಂಥಾಲಯದ ಸಹ ಮೇಲ್ವಿಚಾರಕರಾದ ಕವಿತಾ ಎಂ. ಮುರಾಳ, ಎಸ್ ಐಆರ್ ಡಿ ತರಬೇತಿ ಸಂಯೋಜಕರಾದ ಶೇಖರಪ್ಪ ಸಿಂದೋಗಿ ಸೇರಿ, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿಯ ಎಲ್ಲ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.

ನೀರಾವರಿ ತಜ್ಞ ಎಂ.ಆರ್. ವೆಂಕಟೇಶ ಗೆ ಕಾಡಾ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ
Irrigation expert MR. Request to give the post of KADA president to Venkatesh





ಗಂಗಾವತಿ: ಮುನಿರಾಬಾದ್‌ನ ಸಾಹಿತಿ, ಪರಿಸರ ಪ್ರೇಮಿ, ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ (ರಿ) ಅಧ್ಯಕ್ಷರು, ಕಾಂಗ್ರೆಸ್ ಕಾರ್ಮಿಕರ ಘಟಕದ ಜಿಲ್ಲಾಧ್ಯಕ್ಷರಾದ ಎಂ.ಆರ್. ವೆಂಕಟೇಶ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಎಂ.ಆರ್. ವೆಂಕಟೇಶರವರು ಕಳೆದ ೩೦ ವರ್ಷಗಳಿಂದ ರೈತರ ಹಾಗೂ ರೈತಕೂಲಿಕಾರರ ಜೊತೆಗಿದ್ದು, ರಾಯಚೂರು, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಚಿರಪರಿಚಿತರಾಗಿದ್ದಾರೆ. ತುಂಗಭದ್ರಾ ಜಲಾಶಯದ ಬಗ್ಗೆ ಇವರಿಗಿರುವ ಅಪಾರ ಮಾಹಿತಿ ನಮ್ಮ ಭಾಗದಲ್ಲಿ ಯಾರಿಗೂ ಇಲ್ಲ. ಇವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಿಸಿದರೆ ಜಲಾಶಯ ಹಾಗೂ ಅಚ್ಚುಕಟ್ಟಿನ ಸಮಸ್ಯೆಗಳನ್ನು ಬಗೆಹರಿಸಲು ಅರ್ಹರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಲಾಶಯದ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ೨೦೦೮-೦೯ ರಲ್ಲಿ ತುಂಗಭದ್ರಾ ಹೂಳು ಮತ್ತು ಕಲುಷಿತ ನೀರಿನ ಬಗ್ಗೆ ಸಂಶೋಧನೆ ಮಾಡಲು ತುಂಗಭದ್ರಾ ಹುಟ್ಟಿನಿಂದ ಕೊನೆಯವರೆಗೆ ಪ್ರವಾಸ ಮಾಡಿದ್ದಾರೆ. ಅದರ ವರದಿಯನ್ನು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಅವರು ಇವರ ವರದಿಯನ್ನು ಪರಿಶೀಲಿಸಿ ಬಹಳಷ್ಟು ಕ್ರಮಗಳನ್ನು ಜರುಗಿಸಿದ್ದಾರೆ. ಇಂತಹ ಸೂಕ್ತ ವ್ಯಕ್ತಿಯನ್ನು ಕಾಡಾ ಅಧ್ಯಕ್ಷರನ್ನಾಗಿ ಮಾಡಿದರೆ ಜಲಾಶಯದ ಹಾಗೂ ಅಚ್ಚುಕಟ್ಟಿನ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸುವಲ್ಲಿ ಅನುಮಾನವಿಲ್ಲ. ಕೂಡಲೇ ಎಂ.ಆರ್. ವೆಂಕಟೇಶ ಇವರನ್ನು ಕಾಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಮುಖ್ಯಮಂತ್ರಿಗಳನ್ನು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒತ್ತಾಯಿಸುವಂತೆ ಭಾರದ್ವಾಜ್ ಮನವಿ ಮಾಡಿದ್ದಾರೆ.

ಕುಮ್ಮಟದುರ್ಗದ ಅಭಿವೃದ್ಧಿ, ಎಸ್.ಟಿ. ಕಛೇರಿ ಸೇರಿ ಅಭಿವೃದ್ಧಿ ಕೆಲಸಕ್ಕೆ ಆಧ್ಯತೆ :ಕಲ್ಲೇಶ.
Development of Kummadadurga, ST. Preferred for development work in office : Kallesha









ಕೊಪ್ಪಳ : ಜಿಲ್ಲೆಯ ಐತಿಹಾಸಿಕ ಕ್ಷೇತ್ರ, ತಾಲೂಕಿನ ಜಬ್ಬಲಗುಡ್ಡದ ಮೇಲ್ಭಾಗದಲ್ಲಿರುವ ಗಂಡುಗಲಿ ಕುಮಾರರಾಮನ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವದು ಸೇರಿದಂತೆ ಹಲವು ಕೆಲಸ ಮಾಡಲು ಅಧ್ಯತೆ ನೀಡುವುದಾಗಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ ಮೆಣೆದಾಳ ಹೇಳಿದರು.
ಅವರು ಸಮಾಜ ಕಲ್ಯಾಣ ಇಲಾಖೆಗೆ ನೂತನವಾಗಿ ನಿರ್ದೇಶಕರಾದ ಪ್ರಯುಕ್ತ ತಮ್ಮ ಕೊಪ್ಪಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಂದೋಲನ ಸಮಿತಿ ಮೂಲಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಮ್ಮ ಜಿಲ್ಲೆಯ ಜನ ಅಂತಹ ಹುದ್ದೆ ಸ್ವೀಕರಿಸಿದ್ದಕ್ಕೆ ಬಹಳಷ್ಟು ಸಂತೋಷ ಪಟ್ಟಿದ್ದಾರೆ, ಶುಭ ಕೋರಿದ್ದಾರೆ ಅದು ಬಹಳ ಆಂದ ತಂದಿದೆ, ಇನ್ನು ಅಂತಹಸ್ಥಾನದಲ್ಲಿ ಇದ್ದುಕೊಂಡು ಕಾನೂನು ಬದ್ಧವಾಗಿ ಜಿಲ್ಲೆಗೆ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ, ಸರಕಾರ ಮಟ್ಟದಲ್ಲಿ ಪ್ರಯತನ್ ಪಡುತ್ತೇನೆ ಎಂದ ಅವರು. ಜಿಲ್ಲೆಯಲ್ಲಿ ಪ್ರತ್ಯೇಕ ಎಸ್.ಟಿ. ಕಛೇರಿ, ಜಿಲ್ಲೆಯ ಅಲೆಮಾರಿ ಹರಣ ಶಿಕಾರಿ ಜನರಿಗೆ ಸೂರು ಒದಗಿಸುವದು, ಎಸ್.ಟಿ. ಜನರಿಗೆ ಸೌಲಭ್ಯಗಳನ್ನು ಸರಿಯಾಗಿ ಮುಟ್ಟಿಸುವದು ಸೇರಿದಂತೆ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮತ್ತು ಸರಿಯಾಗಿ ಶಿಷ್ಯವೇತನ,ವಿದ್ಯಾರ್ಥಿ ವೇತನ ಬರುವಂತೆ ಮಾಡುವದು, ಜಿಲ್ಲೆಯ ಎಸ್.ಟಿ. ವಿದ್ಯಾರ್ಥಿಗಳು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವದಕ್ಕೆ ಅನುಕೂಲ ಒದಗಿಸುವ ಕೆಲಸಕ್ಕೆ ಆಧ್ಯತೆ ನೀಡುವದಾಗಿ ಭರವಸೆ ನೀಡಿದರು.
ಇದಕ್ಕೂ ಮೊದಲು ಸನ್ಮಾನ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಒಳ ಮೀಸಲಾತಿ ಆಂದೋಲನ ಸಮಿತಿ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅನೇಕ ಬೇಡಿಕೆಗಳನ್ನು ಇಟ್ಟು ಅದರ ಅವಶ್ಯಕತೆಗಳ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಅಲ್ಲದೇ ಅತ್ಯಂತ ವಿಶಾಲ ಹೃದಯದ, ಸಭ್ಯ ಅಧಿಕಾರಿ ಆಗಿರುವ ಕಲ್ಲೇಶ ಅವರು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಡಿಡಿಯಾಗಿ ಬಹಳ ಕೆಲಸ ಮಾಡಿದ್ದಾರೆ, ಸಮುದಾಯದ ಸಮಸ್ಯೆಗಳ ಅರಿವಿದೆ, ಕೆಳಹಂತದಿಂದ ಕೆಲಸ ಮಾಡಿದ್ದರಿಂದ ಜನರಿಗೆ ಉಪಯುಕ್ತವಾದ ಯೋಜನೆಗಳನ್ನು ರೂಪಿಸುವ ಭರವಸೆ ಇದೆ ಹಾಗೂ ಜಿಲ್ಲೆಯ ಅಧಿಕಾರಿಯೊಬ್ಬರು ರಾಜ್ಯಮಟ್ಟದ ಸ್ಥಾನಕ್ಕೆ ಬಂದಿರುವದು ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿಸಿದೆ ಎಂದರು.
ಈ ವೇಳೆ ಯುವ ಮುಖಂಡರುಗಳಾದ ಪ್ರಭು ಜಹಗೀರದಾರ, ಮಂಜುನಾಥ ಅನಾಳಪ್ಪ ಪೂಜಾರ, ರವಿಕುಮಾರ ಹ್ಯಾಟಿ ಇತರರು ಇದ್ದರು.

ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಉದ್ಘಾಟನಾಸಮಾರಂಭ ಉಪ ವಿಭಾಗ ಆಸ್ಪತ್ರೆ
Active Tuberculosis Detection Movement Inauguration Ceremony Sub Divisional Hospital




ಗಂಗಾವತಿ:ಸೋಮವಾರ ಜುಲೈ 17 ರಿಂದ ಆಗಸ್ಟ್ 3 ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯ ಆರಂಭವಾಗಲಿದೆ ಇದರ ಸದುಪಯೋಗವನ್ನು ಸಮಾಜದ ಎಲ್ಲಾ ನಾಗರಿಕರು ಬಳಸಿಕೊಂಡು ಕ್ಷಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಅವರು ಮಾತನಾಡುತ್ತಾ ವಿಶೇಷವಾಗಿ ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್, ಲಕ್ಷ್ಮಿ ಕ್ಯಾಂಪ್, ಎಚ್ ಆರ್ ಎಸ್ ಕಾಲೋನಿ, ಗಾಂಧಿನಗರ, ಹಿರೇ ಜಂತಕಲ್, ಹಮಾಲರ ಕಾಲೋನಿ, ಮೆಹಬೂಬ ನಗರ, ಸಂತೆ ಬಯಲು, ಸಂಗಾಪುರ ಆನೆಗುಂದಿ ವೆಂಕಟಗಿರಿ ಶ್ರೀರಾಮನಗರ ಹೊಸಕೇರಿ ವಡ್ಡರಹಟ್ಟಿ, ಪ್ರದೇಶಗಳಲ್ಲಿ ಸಂಶಯಸ್ಪದ ಕ್ಷಯ ರೋಗಿಗಳು ಇದ್ದು ಪರೀಕ್ಷೆಗೆ ಒಳಪಡದ ಕಾರಣ 2022-23ರಲ್ಲಿ ಪತ್ತೆ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಈಶ್ವರ ಸವಡಿ ಅವರು ಒಬ್ಬ ಚಿಕಿತ್ಸೆ ಪಡೆಯದ ಕ್ಷಯ ರೋಗಿಯು ಒಂದು ವರ್ಷಕ್ಕೆ ಸುಮಾರು 15 ರಿಂದ 18 ಜನಕ್ಕೆ ಕ್ಷಯ ರೋಗವನ್ನು ಹರಡಿಸಬಲ್ಲ ಆದ್ದರಿಂದ ಸಂಶಯಸ್ಪದ ಕ್ಷಯರೋಗದ ಲಕ್ಷಣಗಳಾದ ಎರಡು ವಾರಕ್ಕೂ ಮೇಲ್ಪಟ್ಟು ಕೆಮ್ಮು ಸಾಯಂಕಾಲದ ವೇಳೆ ಜ್ವರ ಬರುವುದು ಹಸಿವೆ ಆಗದಿರುವುದು ಕಫದಲ್ಲಿ ರಕ್ತ ಬೀಳುವುದು ದೇಹದ ತೂಕ ಕಡಿಮೆಯಾಗಿರುವುದು ಕತ್ತು ಮತ್ತು ಕಂಕಳಲ್ಲಿ ಗಡ್ಡೆಗಳಾಗಿರುವುದು ಲಕ್ಷಣಗಳು ಗೋಚರಿಸಿದಾಗ ಹತ್ತಿರದ ಆಶಾ ಕಾರ್ಯಕರ್ತೆಯರು ಅಥವಾ ಇಂದಿನಿಂದ 15 ದಿನಗಳವರೆಗೆ ಪ್ರತಿ ಮನೆಗೆ ಇಲಾಖೆಯ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುವಾಗ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಕ್ಷಯ ರೋಗ ನಿರ್ಮೂಲ ಕಚೇರಿ ಕೊಪ್ಪಳ ಉಪ ವಿಭಾಗ ಆಸ್ಪತ್ರೆ ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ ಕ್ಷಯರೋಗ ಘಟಕದಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಕೈ ಜೋಡಿಸಿ 2025 ಕ್ಕೆ ಕ್ಷಯ ಮುಕ್ತ ಸಮಾಜ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು, ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಶರಣಪ್ಪ ಚಕೋರಿ ವಿಜಯಪ್ರಸಾದ್ ಮಲ್ಲಿಕಾರ್ಜುನ್ ರಾಘವೇಂದ್ರ ಜೋಶಿ ಕಾಶಿಮ್ ಬಿ ಹನುಮಂತಪ್ಪ ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು.

ಭೀಮನ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದುಬಂದ ಭಕ್ತ‌ಸಾಗರ
The sea of ​​devotees flowed to the hill Mahadeshwar on the occasion of Bhima's new moon

ಹನೂರು:ತಾಲ್ಲೊಕಿನ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರ ಸಹಯೋಗದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳು ನೆರವೆರಿದವು.
ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಶೃಂಗಾರ ಮಾಡಲಾಗಿತ್ತು , ನಂತರ ಸಹಸ್ರಾರು ಭಕ್ತಾದಿಗಳ ದರ್ಶನಕ್ಕೆ ಸ್ವಾಮಿಯನ್ನು ಅನುವು ಮಾಡಿಕೊಡಲಾಯಿತು.

ಮಾದಪ್ಪನ ಸನ್ನಿಧಿಯ ಮಂಟಪದ ಸುತ್ತಲೂ ವಿವಿಧ ಹೂಗಳು ಹಣ್ಣು ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಮಾದಪ್ಪನ ದರ್ಶನಕ್ಕೆ ಬಂದ ಭಕ್ತರು ಸನ್ನಿಧಿ ಮಂಟಪದ ಸುತ್ತಲೂ ಮಾಡಲಾಗಿದ್ದ ಅಲಂಕಾರವನ್ನು ನೋಡಿ ಕಣ್ತುಂಬಿಕೊಂಡರು.
ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಹಿನ್ನೆಲೆ ತಾಲೂಕು ಜಿಲ್ಲೆ ಸೇರಿದಂತೆ ಬೆಂಗಳೂರು ಹಲಗೂರು, ಕನಕಪುರ, ಕೆಂಗೇರಿ ರಾಮನಗರ, ಮಂಡ್ಯ, ಮಳವಳ್ಳಿ, ಮೈಸೂರು, ಕೊಡಗು, ಶಿವಮೊಗ್ಗ, ತಮಿಳುನಾಡು ಭಾಗದಿಂದಲೂ ಲಕ್ಷಾಂತರ ಭಕ್ತಾಸಾಗರ ಹರಿದು ಬರುತ್ತಿದ್ದು ಎಲ್ಲಾರಿಗೂ ಉತ್ತಮ ವ್ಯವಸ್ತೆಯನ್ನು ಮಾಡಲಾಗಿತ್ತು . ಭಕ್ತರಿಗೆ ದಾಸೋಹ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪ್ರಾಧಿಕಾರ ಆಡಳಿತ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದ್ದು ಸ್ಥಳಿಯ ಅರಕ್ಷಕ ಠಾಣ ಸಿಬ್ಬಂದಿಯು ಸಹ ಹೆಚ್ವಿನ ಬಿಗಿ ಬದೊಬಸ್ತೂ ಮಾಡಿದರು .

ಮಾದಪ್ಪನ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಮಹಿಳೆಯ ಬಂಧನ ,
Arrest of a woman who had illegally stored liquor in Madappa hill.


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ
ಮಾದಪ್ಪನ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಿದ್ದ ಮಹಿಳೆಯೊರ್ವರನ್ನು ಬಂಧನ ಮಾಡಲಾಗಿದೆ .

ಹನೂರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಮಹದೇಶ್ವರ ಬೆಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ ,
ಮಹದೇಶ್ವರ ಬೆಟ್ಟದ ಸಾಲೂರು ಮಠಕ್ಕೆ ತೆರಳುವ ಮಾರ್ಗದ ಊರ ಬಸಪ್ಪನ ಒಡ್ಡು ಪ್ರದೇಶದ ವೆಂಕಟ ಲಕ್ಷ್ಮಮ್ಮ( 40) ಎಂಬಾಕೆಯೇ ಬಂಧಿತ ಮಹಿಳೆಯಾಗಿದ್ದು 90 ಮಿಲಿಯ 183 ಪೌಚ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ದಾಳಿಯ ವೇಳೆಯಲ್ಲಿ ಮಹದೇಶ್ವರ ಬೆಟ್ಟ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ಹಾಗೂ ಇನ್ನಿತರರು ಹಾಜರಿದ್ದರು.

ಎಸ್ ಕೆ ಪೌಂಡೇಷನ್ ವತಿಯಿಂದಅಂಬೇಡ್ಕರ್ ಭಾವ ಚಿತ್ರ ಸಹಿತ ನೋಟ್ ಬುಕ್ ವಿತರಣೆ
Distribution of notebook with Ambedkar Bhava picture by SK Foundation.





ವರದಿ : ಬಂಗಾರಪ್ಪ ಸಿ

ಹನೂರು :ಕಾಡಂಚಿನ ಗ್ರಾಮಗಳ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅವರಿಗೆ ನಮ್ಮ ಸಂಸ್ಥೆಯಿಂದ ಸಣ್ಣ ಪುಟ್ಟ ಕಿರು ಸಹಾಯ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಕಿರಾಳು ಗ್ರಾಮದ
ಸಂತೋಷ್ ತಿಳಿಸಿದರು . ತಾಲ್ಲೋಕಿನ ಕೊಣನ ಕೆರೆಯ ಗಿರಿಜನ ಆಶ್ರಮ ಶಾಲೆಯಲ್ಲಿ ನೊಟ್ ಪುಸ್ತಕ ಹಾಗೂ ಅಂಭೆಡ್ಕರ್ ಭಾವ ಚಿತ್ರ ಸಹಿತ ಪುಸ್ತಕ ನೀಡಿದ ನಂತರ ಮಾತನಾಡಿದ ಅವರು ಅಂಬೇಡ್ಕರ್ ವ್ಯಕ್ತಿತ್ವವನ್ನು ಎಲ್ಲಾರು ಮೈಗೂಡಿಸಿಗೊಳ್ಳಬೇಕು ಅವರ ಆದರ್ಶವನ್ನು ನಾವು ನೀವೆಲ್ಲ ಪಾಲಿಸೋಣ ಮಕ್ಕಳೆ ನಿಮ್ಮ ಓದು ಮುಂದಿನ ವಿಧ್ಯಾರ್ಥಿಗಳಿಗೆ ಮಾದರಿಯಾಗಲಿ ಹಾಗೂ ಶಾಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಪಾಠ ಪ್ರವಚನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದೇ ವೆಳೆ ಮುಖ್ಯೋಪದ್ಯಾಯರಾದ ಅಂಕಪ್ಪ ಮಾತನಾಡಿ ಇವರು ನೀಡುವ ಪುಸ್ತಕವನ್ನು ಮಕ್ಕಳು ಅದರ ಜ್ಝಾನಾರ್ಜನೆ ಮಾಡಲಿಕ್ಕೆ ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು
ಇದೇ ಸಮಯದಲ್ಲಿ ಗಿರಿಜನರು ಕಾಡಂಚಿನ ಗ್ರಾಮದಲ್ಲಿ ಸಾಕಷ್ಟು ಶ್ರಮ ಜೀವಿಗಳಾಗಿದ್ದು ಅವರ ಮಕ್ಕಳೆಲ್ಲ ಇಂದು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಶ್ಲಾಗಿಸಿದರು .
ಇದೇ ಸಮಯದಲ್ಲಿ ಶಾಲೆಯ ಮಕ್ಕಳಿಗೆ ಎಸ್ ಕೆ ಫೌಂಡೇಶನ್ ವತಿಯಿಂದ ಉಚಿತವಾಗಿ ಅಂಬೇಡ್ಕರ್ ಜೀವನ ಆಧಾರಿತ ಹಾಗೂ ನೋಟ್ ಬುಕ್ ಪೆನ್ ವಿತರಿಸಲಾಯಿತು. ಇದೇ ಸಮಯದಲ್ಲಿ
ಮುಖಂಡರಾದ ಜಿಲ್ಲಾ ಬುಡಕಟ್ಟು ನಿರ್ದೇಶಕರಾದ ಜೆ ಮಹಾದೆವಸ್ವಾಮಿ , ಕೋಣನಕೆರೆ ಆಶ್ರಮ ಶಾಲೆಯ ಮುಖ್ಯಾಶಿಕ್ಷಕರಾದ ಅಂಕಪ್ಪ , ಶಿಕ್ಷಕರುಗಳಾದ ಸಿದ್ದರಾಜು ,ಸಮ್ಮುನಿ ,ಸೇರಿದಂತೆ, ಎಸ್. ಕೆ ಫೌಂಡೇಶನ್ ಅಧ್ಯಕ್ಷರಾದ ಸಂತೋಷ್ ಕಿರಾಳು, ಹಿಂದುಳಿದ ವರ್ಗದ ನಾಯಕ ಕಾಳೇಗೌಡ್ರು,ಯುವ ಮುಖಂಡರುಗಳಾದ ವಿಜಯಕುಮಾರ್ (ಆಯರಹಳ್ಳಿ ), ಕಿರಾಳು ಗ್ರಾಮದ ಯುವ ಮುಖಂಡರುಗಳಾದ ವಿಶು, ಶಿವು, ರಾಹುಲ್, ಆದರ್ಶ್ ಇನ್ನಿತರರು ಹಾಜರಿದ್ದರು.

ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ
Application invited for Krishi Pandit award separately from farmer and farmer women

ಕೊಪ್ಪಳ ಜುಲೈ 17 (ಕರ್ನಾಟಕ ವಾರ್ತೆ): ಕೃಷಿ ಇಲಾಖೆಯಿಂದ 2023-24ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೆ ಜಿಲ್ಲೆಯ ಆಸಕ್ತ ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಮತ್ತು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ರೈತ ಮಹಿಳೆಯರಿಗೆ ಕೃಷಿ ಪಂಡಿತ ಪ್ರಶಸ್ತಿಯನ್ನು ನೀಡಲು ಕ್ರಮವಹಿಸಲಾಗಿರುವುದರಿಂದ, ರೈತ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು.
ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸುವವರು ಸಮಗ್ರ ಕೃಷಿ ಸದ್ಧತಿ, ಬೆಳೆ ವೈವಿದ್ಯತೆ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ ನೀರಿನ ಸಮರ್ಪಕ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹಸಿರು ಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಸಾಕಾಣಿಕೆ ಹಾಗೂ ಇನ್ನಿತರೆ ಯಾವುದಾದರೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ತಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗದಿತ ಅರ್ಜಿಯನ್ನು ಪಡೆದು ಜುಲೈ 24ರೊಳಗಾಗಿ ಸಂಬಂಧಿಸಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಈ ಹಿಂದೆ ಕೃಷಿ ಪಂಡಿತ ಪ್ರಶಸ್ತಿಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಹಾಗೂ ಉದಯೋನ್ಮುಖ ಪ್ರಶಸ್ತಿ ಪಡೆದವರು ಮತ್ತೆ ಸ್ಪರ್ಧಿಸುವಂತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಅಮವಾಸೆ ಕಿಷ್ಕಿಂದಿಯಅಂಜನಾದ್ರಿ ಸನ್ನಿಧಿಯಲ್ಲಿ ಭೋಜನ ಪ್ರಸಾದ ವ್ಯವಸ್ಥೆ,,, ಜಿ ರಾಮಕೃಷ್ಣ,
Arrangement of Bhoja Prasad in Kishkindiya Anjanadri Sannidhi every new moon,,, G Ramakrishna,

ಗಂಗಾವತಿ, 17 ಸಮಾಜ ಸೇವೆ ಜೊತೆಗೆ ಧಾರ್ಮಿಕ ಮನೋಭಾವನೆ ಹೊಂದಿರುವ ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ ರಾಮಕೃಷ್ಣ ಅವರು ಸೋಮವಾರದಂದು ಭೀಮನ ಹಾಗೂ ನಾಗರ ಅಮಾವಾಸ್ಯೆ ಪ್ರಯುಕ್ತ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಭೋಜನ ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ವಂಶಸ್ಥರಾದ ಶ್ರೀಮತಿ ಲಲಿತಾರಾಡಿ ರಾಯಲು, ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶ್ರೀರಾಮನಗರದ ಜಿ ರಾಮಕೃಷ್ಣ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಮನೋಭಾವನೆಯ ಜೊತೆಗೆ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ, ಅವರು ಪ್ರತಿ ಅಮಾವಾಸ್ಯೆ ಕಿಷ್ಕಿಂದೆಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುರಸ್ಕಾರದ ಜೊತೆಗೆ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ನಡೆಸುವ ಸಂಕಲ್ಪವನ್ನು ಹೊಂದಿದ್ದು ಇದರಿಂದ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಅವರ ಕಾರ್ಯವನ್ನು ಪ್ರಶಂಶಿಸಿದರು, ಪ್ರಸ್ತುತ ಇಂದಿನ ಪ್ರಸಾದ ಹಾಗೂ ಬೋಧನಾ ವ್ಯವಸ್ಥೆಯನ್ನು ಅವರ ಶ್ರೀಮತಿಯಾದ ಶ್ರೀಮತಿ ದುರ್ಗಾರಾಣಿ ಜಿ ರಾಮಕೃಷ್ಣ ಅವರು ನೆರವೇರಿಸಿದ್ದು ಈ ಹಿನ್ನೆಲೆಯಲ್ಲಿ, ಶ್ರೀಮತಿ ದುರ್ಗಾ ರಾಣಿ ಹಾಗೂ ಲಲಿತಾ ರಾಣಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಭಕ್ತರು ಗೌರವಿಸಿದರು,,, ಆಯೋಜಕ ಜಿ ರಾಮಕೃಷ್ಣ ಮಾತನಾಡಿ, ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ಹಾಗೂ ಭೋಜನೆಯ ಮೂಲಕ ಕಿಷ್ಕಿಂದದಆಂಜನೇಯ ಸ್ವಾಮಿ ವಿಶ್ವದ್ಯಂತ ಪಸರಿಸಲಿ ಆತನ ಅನುಗ್ರಹ ಆಶೀರ್ವಾದ ಸದಾ ಕಾಲ ವಿಶ್ವದ ಜನತೆಗೆ ದೊರೆಯಲಿ ಎಂದು ತಿಳಿಸಿದರು, ಇದಕ್ಕೂ ಮುಂಚೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಅಷ್ಟೋತ್ತರ ಶತರಾಮಾವಳಿ ಪಾರಾಯಣ ಪೂಜಾ ಕಾರ್ಯಕ್ರಮಗಳನ್ನು ಶ್ರೀ ರಾಮಕೃಷ್ಣ ದಂಪತಿಗಳು ನೆರವೇರಿಸಿದರು,, ಅಮಾವಾಸ್ಯೆ ಪ್ರಯುಕ್ತ ಆಗಮಿಸಿದ ನೂರಾರು ಸಂಖ್ಯೆ ಭಕ್ತಾದಿಗಳು ಶುಚಿ ರುಚಿಯಾದ ಪ್ರಸಾದ ಭೋಜನವನ್ನು ಸವಿದು ರಾಮಕೃಷ್ಣ ದಂಪತಿಗಳಿಗೆ ಶುಭ ಹಾರೈಸಿದರು,,,