ಸಾಧಕರ ಜೀವನ ಅಧ್ಯಯನಕ್ಕೆ ಸಲಹೆ ಡಾ.ಕೆ.ಸಿ.ಕುಲಕರ್ಣಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Dr.K.C.Kulkarni’s advice for studying the life of the pros

ಜಾಹೀರಾತು


ಗಂಗಾವತಿ: ಪ್ರತಿಯೊಬ್ಬ ಸಾಧಕರ ಜೀವನ ಪ್ರಸ್ತುತ ವಿದ್ಯಾರ್ಥಿಗಳ ಅಧ್ಯಯನ ವಿಷಯವಾಗಲಿ. ವಿಷಯಗಳ ಸಂಗ್ರಹದ ಜತೆಗೆ ನಿತ್ಯವೂ ಪತ್ರಿಕೆ ಓದುವ ಮೂಲಕ ಜ್ಞಾನ ಸಂಪತ್ತು ಪಡೆದು ಪಾಲಕರು ಕಂಡ ಭವಿಷ್ಯದ ಜೀವನ ನಡೆಸುವಂತೆ ಪ್ರಾಚಾರ್ಯ ಡಾ| ಕೆ.ಸಿ.ಕುಲಕರ್ಣಿ ಹೇಳಿದರು.
ಅವರು ಟಿಎಂಎಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಬಿಇಡಿವಿಭಾಗದಲ್ಲಿ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ನಾಗರಿಕರನ್ನು ರೂಪಿಸುವ ಮಹತ್ವದ ಶಿಕ್ಷಕರ ಹುದ್ದೆಗೆ ಹೋಗುವ ಬಿಇಡಿ ಪ್ರಶಿಕ್ಷಣಾರ್ಥಿಗಳು ಅಗಾಧ ಜ್ಞಾನ ಸಂಪಾದಿಸಿ ವೈಚಾರಿಕತೆ ಮೈಗೂಡಿಸಿಕೊಂಡು ಮಕ್ಕಳಿಗೆ ಜ್ಞಾನ ನೀಡಬೇಕು. ಮನುಷ್ಯ ಜೀವಿಯಾಗಿದ್ದು ಸಂಘಟನೆಯ ಮೂಲಕ ಸಕಲರಿಗೂ ಒಳಿತು ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹರಪನಹಳ್ಳಿ ಬಿಇಡಿ ಕಾಲೇಜು ಪ್ರಾಚಾರ್ಯ ಟಿ.ಎಂ. ರಾಜಶೇಖರ, ಡಾ|ಚೇತನ್ ಕುಮಾರ ಡಾ,ಮರುಳ ಸಿದ್ದಪ್ಪ ,ಡಾ.ಡಿ.ಎಂ.ಅರುಣಕುಮಾರ, ಕೆ.ಎಂ.ಶಿವಪ್ರಕಾಶ, ಜಯರಾಮ ಮರಡಿತೋಟದ, ಶಿವರಾಜ ಪಾಟೀಲ ಹಾಗೂ ಫಕೀರಪ್ಪ ಗಂಗಾಧರ ಸೇರಿದಂತೆ ಇತರರು ಇದ್ದರು

Total Views: 0
Share This Article