ಹನೂರು ವಿಧಾನಸಭಾ ಕ್ಷೇತ್ರದಲ್ಲೆಡೆ ನೀರಿನ ಅಭಾವ ನೀಗಿಸಲು ಅಧಿಕಾರಿಗಳ ಸಭೆ .‌

H.Mallikarjun
H.Mallikarjun - Kalyanasiri
2 Min Read

ಹನೂರು ವಿಧಾನಸಭಾ ಕ್ಷೇತ್ರದಲ್ಲೆಡೆ ನೀರಿನ ಅಭಾವ ನೀಗಿಸಲು ಅಧಿಕಾರಿಗಳ ಸಭೆ .‌

ಜಾಹೀರಾತು

 

A meeting of officials to address the water shortage in Hanur Assembly constituency.

ವರದಿ: ಬಂಗಾರಪ್ಪ .ಸಿ.‌
ಹನೂರು: ನಮ್ಮ ಕ್ಷೇತ್ರದ ವಿವಿಧೆಡೆ ಮಳೆಯ ಕೊರತೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಸೂಚಿಸಿದರು.
ಹನೂರು ಪಟ್ಟಣದ ಲೊಕೋಪಯೋಗಿ ಇಲಾಖೆ ವಸತಿಗೃಹದ ಸಭಾಂಗಣದಲ್ಲಿ ಆರ್.ಡಿ.ಇ.ಡಿ, ಕಂದಾಯ ಸೇರಿದಂತೆ ಆರ್.ಬಿ.ಎಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯನ್ನು ಅಯೋಜನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ
ಸಂಪೂರ್ಣ ಮಳೆಯ ಅಭಾವದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಲ್ಲಲ್ಲಿ ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಕುಡಿಯುವ ನೀರು ಒದಗಿಸುವುದು ಮುಖ್ಯವಾಗಿದೆ. ಹೀಗಾಗಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಬೋರ್ ಕೊರೆಯುವುದು ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ತುರ್ತು ವ್ಯವಸ್ಥೆ ಮಾಡಲಾಗುವುದು.

ಕೆಲವು ತಾಂತ್ರಿಕ ದೋಷದಿಂದ ಅನುದಾನ ಬಿಡುಗಡೆಗೆ ಸಮಸ್ಯೆಯಾಗಿತ್ತು. ಇದೀಗ ಅದು ಬಗೆಹರಿಯಲಿದೆ. ಅಲ್ಲದೆ ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್ ನಿಂದ ಅಡೆತಡೆ ಇತ್ತು ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು 2022 ರಲ್ಲೇ ಕಾಮಗಾರಿ ಪೂರ್ಣವಾಗಬೇಕಿತ್ತು. ಈಗ ಅಂತಿಮ ಹಂತಕ್ಕೆ ಬಂದಿದೆ. ಚಿಕ್ಕಮಾಲಾಪುರ ಬೋರೆ ಬಳಿಯ ಕಾಮಗಾರಿ ತುರ್ತಾಗಿ ಆಗಬೇಕಿದೆ. ಕಾಮಗಾರಿಗೆ ಪ್ಲಾಂಟ್ ರೆಡಿ ಇದೆ. ಮೋಟರ್ ಗಳು ಸಹ ಬಂದಿವೆ. ಜೆಜೆಎಂ ಕಾರ್ಯ ಆರಂಭವಾಗಿ ಸ್ವಲ್ಪ ಸಮಯದ ಬಳಿಕ ಎಲ್ಲವೂ ಸರಿಯಾಗಲಿದೆ. ಇದೀಗ ತುರ್ತು ಪರಿಸ್ಥಿತಿ ಎಂದು ಭಾವಿಸಿ ಜನರು ನೀರನ್ನು ಮಿತವಾಗಿ ಬಳಸಬೇಕು ಎಂದು ಅವರು ಮನವಿ ಮಾಡಿದರು.

ಮೇ ತಿಂಗಳಲ್ಲಿ ಮಳೆಯಾಗಿದೆ. ಆದರೆ ಜೂನ್, ಜುಲೈ, ಆಗಸ್ಟ್ ನಲ್ಲಿ ಬೆಳೆ ಬೀಜ ಮೊಳಕೆ ಹೊಡೆಯುವುದು ಕಷ್ಟವಾಗಿದೆ. ತಾಂತ್ರಿಕ ಸಮಸ್ಯೆಯಿಂದ ಬರಪೀಡಿತ ಘೋಷಣೆ ತೀರ್ಮಾನ ಬಾಕಿ ಇದೆ. ಒಟ್ಟಾರೆ ಎಲ್ಲಾ ಅಂಶಗಳನ್ನು ಗಮನಿಸಿದ ಬಳಿಕ ಬರ ಘೋಷಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಇಲ್ಲಿನ ಬರ ಪರಿಸ್ಥಿತಿ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಚೈತ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಸಂತೋಷ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರೇಖಾ, ಎಇ ಸುಧನ್ವ ನಾಗ್, ಇಓ ಉಮೇಶ್, ಎ.ಡಿ ರವೀಂದ್ರ, ಪಟ್ಟಣ ಪಂಚಾಯತ್ ಜೆ.ಇ ನಾಗರಾಜ್ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Total Views: 0
Share This Article