Major operation by Moodalagi police: 4 stolen bikes worth ₹2 lakh seized, one arrested.
Major operation by Moodalagi police: 4 stolen bikes worth ₹2 lakh seized, one arrested.

ಮೂಡಲಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 2 ಲಕ್ಷ ಮೌಲ್ಯದ 4 ಕಳ್ಳತನದ ಬೈಕ್ ಗಳು ವಶ, ಓರ್ವ ಬಂಧನ

ಮೂಡಲಗಿ:ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿದ ಮೂಡಲಗಿ ಪೊಲೀಸರು, ಸುಮಾರು 2 ಲಕ್ಷ ರೂ. ಮೌಲ್ಯದ 4 ಬೈಕ್ ಗಳನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಮೂಡಲಗಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾನ್ಯ ಎಸ್.ಪಿ ಬೆಳಗಾವಿ, ಹೆಚ್ಚುವರಿ ಎಸ್.ಪಿ, ಡಿ.ವೈ.ಎಸ್.ಪಿ ಗೋಕಾಕ ಹಾಗೂ ಸಿ.ಪಿ.ಐ ಮೂಡಲಗಿ ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ವೈ.ಎಸ್. ಬಿಸನಾಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ದಿನಾಂಕ 03/09/2026 ರಂದು ಮೂಡಲಗಿ-ಮಸಗುಪ್ಪಿ ರಸ್ತೆಯ ಎ.ಪಿ.ಎಂ.ಸಿ ದ್ವಾರದ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 4 ಬೈಕ್ ಗಳನ್ನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿ: ಸುಭಾಷ್ ಶಿವನಪ್ಪ ರಡರಟ್ಟಿ (34), ಸಾ|| ಬೆಟಗೇರಿ, ಹಾಲಿ ಮೂಡಲಗಿ.
ಆರೋಪಿಯಿಂದ 3 ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮತ್ತು 1 ಕವಾಸಕಿ ಬಾಕ್ಸರ್ ಸೇರಿದಂತೆ ಒಟ್ಟು 4 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿ.ಹೆಚ್.ಸಿ ಜಗದೀಶ್ ಮಿರ್ಜಿ, ಸಿ.ಪಿ.ಸಿ ಮನ್ನಾಪುರ, ಸಿ ಪಿ ಸಿ ಕೆ ಸಿ ಬಾಗಲಿ, ಸಿ ಪಿ ಸಿ ಎಲ್ ಬಿ ಗೋಡೆರ ಅವರು ಇದ್ದರು.ತನಿಖಾ ತಂಡವು ಅತ್ಯಂತ ಚಾಣಾಕ್ಷತನದಿಂದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

