ಕಲಿಕಾ ಸಾಮರ್ಥ್ಯ ಹಾಗೂ ಭವಿಷ್ಯದ ಭರವಸೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ‘ಹೊಸದಿಗಂತ’ ಕಾರ್ಯಕ್ರಮ ಸಕಾಲಿಕ – ಪ್ರೊ.ಕರಿಗೂಳಿ

H.Mallikarjun
H.Mallikarjun - Kalyanasiri
2 Min Read

The 'Hosadiganta' program is timely for enhancing students' learning capabilities and future prospects – Prof. Kariguli.





ಕಲಿಕಾ ಸಾಮರ್ಥ್ಯ ಹಾಗೂ ಭವಿಷ್ಯದ ಭರವಸೆ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ‘ಹೊಸದಿಗಂತ’ ಕಾರ್ಯಕ್ರಮ ಸಕಾಲಿಕ – ಪ್ರೊ.ಕರಿಗೂಳಿ

ಜಾಹೀರಾತು

ಗಂಗಾವತಿ : ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ವತಿಯಿಂದ ಪ್ರಥಮ ವರ್ಷದ ಕಲಾ ಬಿ.ಎ, ಬಿ.ಕಾo, ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಹೊಸದಿಗಂತ – ಅಭಿಮುಖೀಕರಣ ಕಾರ್ಯಕ್ರಮ-2026 ವಿವಿಧ ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳೊಂದಿಗೆ 24-08-2026 ರಿಂದ 04-09-2026 ರ ವರೆಗೆ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಕಾಲೇಜು ಶಿಕ್ಷಣ ಇಲಾಖೆಯ ಆದೇಶದಂತೆ ಆಯೋಜಿಸಲಾದ ಈ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಹೊಸಯುಗಕ್ಕೆ ಹಾಗೂ ನವಭಾರತದ ಭವಿಷ್ಯ ನಿರ್ಮಾಣಕ್ಕೆ ಸಿದ್ದಪಡಿಸಲು ಪೂರಕವಾದ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆಗಸ್ಟ್ 24, 2026ರಂದು ಜರುಗಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಗೂಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಹೊಸದಾಗಿ ಕಾಲೇಜಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ವ್ಯಕ್ತಿತ್ವ ಹಾಗೂ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಈ ಅಭಿಮುಖೀಕರಣ ಕಾರ್ಯಕ್ರಮದ 12 ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಉಪಯುಕ್ತ ವಿಷಯಗಳ ಕುರಿತು ಉಪನ್ಯಾಸದ ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಯಿತು. 21ನೇ ಶತಮಾನದ ಕೌಶಲ್ಯಗಳು, ಸಂವಹನ ಕೌಶಲ್ಯಗಳು, ಡಿಜಿಟಲ್ ಕೌಶಲ್ಯಗಳು, ತಾರ್ಕಿಕ ಸಾಮರ್ಥ್ಯ, “ನಿಮ್ಮನ್ನು ನೀವು ಅರಿಯಿರಿ” ಹಾಗೂ “ಕ್ಯಾಂಪಸ್‌ನಿಂದ ವೃತ್ತಿಜೀವನದತ್ತ” ಎಂಬ ಸಕಾಲಿಕ ವಿನೂತನ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಹಾಗೂ ಕಾಲೇಜಿನ ತರಬೇತಿ ಪಡೆದ ಎಲ್ಲಾ ಅಧ್ಯಾಪಕರು ಮಾರ್ಗದರ್ಶನ ನೀಡಿದರು.
ಈ ಎಲ್ಲಾ ಅಧಿವೇಶನಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಸಾಮರ್ಥ್ಯ, ತಾಂತ್ರಿಕ ಜ್ಞಾನ, ತಾರ್ಕಿಕ ಚಿಂತನೆ, ಸ್ವ-ಅರಿವು ಹಾಗೂ ವೃತ್ತಿ ಯೋಜನೆ ಬೆಳೆಸುವಲ್ಲಿ ಸಹಕಾರಿಯಾದವು.
‘ಹೊಸದಿಗಂತ’ ಓರಿಯಂಟೇಶನ್ ಕಾರ್ಯಕ್ರಮ, ನಿರಂತರ ಕಲಿಕೆಯ ಸಂಕಲ್ಪದೊಂದಿಗೆ, ಇಂದು ಸಾಂಕೇತಿಕವಾಗಿ ಸಮಾರೋಪಗೊಂಡಿತು.
ಇಂದಿನ ಕಾರ್ಯಕ್ರಮದಲ್ಲಿ ಡಾ.ಕರಿಗೂಳಿ, ಪ್ರಾಂಶುಪಾಲರು, ಅಧ್ಯಕ್ಷೀಯ ನುಡಿಗಳನ್ನು ನೀಡಿ, ವಿದ್ಯಾರ್ಥಿಗಳು ತಮ್ಮ ಕಾಲೇಜು ಜೀವನದ ಆರಂಭದಲ್ಲಿಯೇ ಉತ್ತಮ ಗುರಿಗಳನ್ನು ಹೊಂದಿ, ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಡಾ.ಸರ್ಫರಾಜ್ ಅಹಮದ್ ಅವರು 21ನೇ ಶತಮಾನದ ಕೌಶಲ್ಯಗಳ ಸಂವಹನ ಕೌಶಲ್ಯಗಳ ಕುರಿತು, ಶಂಕರಪ್ಪ ಎಂ.ಸಂವಹನ ಕೌಶಲ್ಯಗಳ ಕುರಿತು, ಡಾ. ವಿರೂಪಾಕ್ಷ ಕೆ. ಡಿಜಿಟಲ್ ಕೌಶಲ್ಯಗಳ ಕುರಿತು, ಡಾ.ಶಶಿಕುಮಾರ್ ಅವರು Reasoning Aptitude ಕುರಿತು, ವೀರೇಶ ಅವರು “Know Yourself” ವಿಷಯದ ಕುರಿತು ಹಾಗೂ IQAC ಸಂಚಾಲಕರಾದ ರವಿಕುಮಾರ ಅವರು “Campus to Career” ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊಸದಿಗಂತ ಕೌಶಲ್ಯ ಉಪನ್ಯಾಸ ಮಾಲಿಕೆ-2026 ಕಾರ್ಯಕ್ರಮದ ಕುರಿತು ತಮ್ಮ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಗೆ ಈ ಎಲ್ಲಾ ಕೌಶಲ್ಯಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ, ಎಲ್ಲಾ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಹೊಸದಿಗಂತ – ಓರಿಯಂಟೇಶನ್ ಕಾರ್ಯಕ್ರಮ 2026–27 ಹೊಸ ವಿದ್ಯಾರ್ಥಿಗಳಿಗೆ ಕಾಲೇಜಿನ ಶೈಕ್ಷಣಿಕ ವಾತಾವರಣದ ಪರಿಚಯ ಮಾಡಿಸುವುದರ ಜೊತೆಗೆ, ಅವರಲ್ಲಿ ಆತ್ಮವಿಶ್ವಾಸ, ಕೌಶಲ್ಯ ಮತ್ತು ಭವಿಷ್ಯದ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಮೂಡಿಸುವಲ್ಲಿ ಯಶಸ್ವಿಯಾಯಿತು.

Total Views: 1
ಜಾಹೀರಾತು
Share This Article