37th Sharan Mela campaign to be held at Kudala Sangam in 2024
ಯಲಬುರ್ಗ:2024 ಜನೆವರಿ 12 ರಿಂದ 14 ರ ವರೆಗೆ ಕೂಡಲ ಸಂಗಮದಲ್ಲಿ ನಡೆಯುವ 37 ನೇ ಶರಣಮೇಳ ಪ್ರಚಾರಾರ್ಥವಾಗಿ ಪರಮ ಪೂಜ್ಯ ಡಾ।। ಮಾತೆ ಗಂಗಾದೇವಿ ಬಸವ ಧರ್ಮಪೀಠದ ದ್ವಿತೀಯ ಮಹಿಳಾ ಜಗದ್ಗುರುಗಳು ಇವರು, ರಾಷ್ಟ್ರೀಯ ಬಸವ ದಳದ ಸಂಘಟಕರು ಶರಣ ಬಸವನಗೌಡ ಪೋಲಿಸ್ ಪಾಟೀಲ್ ನಿವೃತ್ತ ಪಿ ಎಸ್ ಐ ಇವರ ಅಧ್ಯಕ್ಷತೆ ಯಲ್ಲಿ ದಿನಾಂಕ 20/11/2023 ರಿಂದ 24/11/2023 ನಾಲ್ಕು ದಿನ ಕೊಪ್ಪಳ ಜಿಲ್ಲೆಯಾದ್ಯಂತ ಶರಣ ಮೇಳ ಪ್ರಚಾರ ಕೈಗೊಂಡಿದ್ದು, ಪ್ರಥಮದಲ್ಲಿ ಗಂಗಾವತಿ ಮತ್ತು ಯಲಬುರ್ಗಾ ತಾಲೂಕಿನ ಗುಳೆ, ವನಜಭಾವಿ, ಮಾಟಲದಿನ್ನಿ, ಮರಕಟ್ಟ್, ಕಲಭಾವಿ, ಗ್ರಾಮಗಳಿಂದ ಪ್ರಾರಂಭಗೊಂಡು, ಕುಷ್ಟಗಿ, ಟಣಕನಕಲ್, ಹಟ್ಟಿಗ್ರಾಮ ಮತ್ತು ಕೊಪ್ಪಳ ನಗರಕ್ಕೆ ತೆರಳಿ, ಗುರು ಬಸವಣ್ಣನವರ, ವಿಧ್ಯಾಭೂಮಿ, ತಪೋಭೂಮಿ ಐಖ್ಯಸ್ಥಳ, ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳದ ಪ್ರಚಾರ ಮತ್ತು ಸರ್ವ ಸಮಾನತೆಯ ತತ್ವ ಪ್ರತಿಪಾದಕರಾದ ವಿಶ್ವ ಗುರು, ಸ್ತ್ರೀ ಕುಲೋದ್ಧಾರಕ, ದೀನ ದಲಿತೋದ್ಧಾರಕ ಗುರು ಬಸವಣ್ಣನವರ ಪ್ರವಚನವನ್ನು ಕೊಪ್ಪಳ ಜಿಲ್ಲೆಯಲ್ಲಿ ನಿರಂತರವಾಗಿ ನಾಲ್ಕು ದಿನ ಸಾಯಂಕಾಲ ಸಮಯದಲ್ಲಿ ಪ್ರಾರಂಭಗೊಳ್ಳಲಿದೆ, ಕಾರಣ ತಾಲೂಕಿನ ಬಸವಾಭಿಮಾನಿಗಳು, ಬಸವ ಪರ ಚಿಂತಕರು, ಬಸವ ತತ್ವ ಪ್ರತಿಪಾದಕರು ಮತ್ತು ಗ್ರಾಮ ಗ್ರಾಮಗಳಲ್ಲಿನ ಸದ್ಭಕ್ತರು ಎಲ್ಲರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣೀಕರ್ತರಾಗಬೇಕೆಂದು ಈ ಮೂಲಕ ಕರೆಕೊಡಲಾಗಿದೆ.
ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳದ ಶರಣಗ್ರಾಮ ಗುಳೆ