Sharanappa Saladpura of Shahapur was a devout man.
ಶಹಾಪುರದ ಶರಣಪ್ಪ ಸಲಾದಪುರ ಒಬ್ಬ ಹೋರಾಟಗಾರ ರಾಜಕೀಯ ನಾಯಕ. ಅವರು ಏನೆ ಮಾಡಿದರೂ ಅದು ತುಂಬಾ ವಿಭಿನ್ನವಾಗಿರುತ್ತದೆ. ರೈತ ಕಾರ್ಮಿಕರು ಅಬರಲ್ಲಿ ಅಂತಃಶಕ್ತಿಯನ್ನು ತುಂಬಿದ ಧೀಮಂತ ವ್ಯಕ್ತಿ.
ನಿನ್ನೆಯ ದಿನ ತನ್ನ ಮನೆಯ ಗುರು(ಅರಿವು) ಪ್ರವೇಶದ ಸಂದರ್ಭದಲ್ಲಿ ಸ್ವತಃ ಕುಟುಂಬದ ಸದಸ್ಯರೊಂದಿಗೆ ಕುಳಿತು ಬಸವಾದಿ ಶರಣರ ವಚನಗಳ ಓದನ್ನು ಮಾಡಿ ಪೂಜೆ ಮಾಡಿದರು.
ಮತ್ತೊಂದು ಮಹತ್ವದ ಸಂಗತಿಯೆಂದರೆ ಇದೆ ದಿನ ಅವರ ತಂದೆಯ ಸ್ಮರಣೆಯ ಅಂದರೆ ಪುಣ್ಯ ತಿಥಿಯ ದಿನವೂ ಹೌದು. ತಮ್ಮ ತಂದೆಯ ಸ್ಮರಣೆಯ ದಿನವನ್ನೂ ಕೆಟ್ಟದ್ದು ಎಂದು ಭಾವಿಸುವ ದಿನಗಳಲ್ಲಿ ಶರಣಪ್ಪ ಸಲಾದಪುರ ಅವರು ತಮ್ಮ ಮನೆಯ ಗುರು ಪ್ರವೇಶ ಇಟ್ಟುಕೊಂಡದ್ದು ಒಂದು ಧೀರ ನಡೆಯಾಗಿದೆ.
ಆಕಸ್ಮಿಕವಾಗಿ ಎಂಬಂತೆ ಇದೆ ದಿನ ಭಾರತದ ಸಂವಿಧಾನ ಅಂಗೀಕರಿಸಿದ ದಿನ. ಆದ್ದರಿಂದ ಸಂವಿಧಾನದ ಪೀಠಿಕೆಯನ್ನು ಸಹ ಗುರು ಪ್ರವೇಶದ ದಿನ ಮನೆಯ ಸಂಬಂಧಿಗಳು ಇತರರಿಗೆಲ್ಲ ಬೋಧಿಸಿ, ಅವರಿಂದ ಪ್ರತಿಜ್ಞೆಯನ್ನು ಮಾಡಲಾಯಿತು.
ವಾರ ತಿಥಿ ಮಿತಿ ಘಳಿಗೆಯನ್ನು ನೋಡದೆ, ಯಾವ ಪುರೋಹಿತರ ಕಿರಿ ಕಿರಿ ಇಲ್ಲದೆ, ಮೌಢ್ಯಗಳನ್ನು ಮೂಲೆಗೆ ತಳ್ಳಿ ನಡೆಸಿದ ಬಸವ ಭಾವ ಪೂಜೆ ನಾಗರಿಕರಿಗೆಲ್ಲ ಮಾದರಿ ಎಂಬಂತೆ ಇತ್ತು.
ತನ್ನಾಶ್ರಯದ ರತಿಸುಖವನು,
ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ
ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.
ಎಂಬ ವಚನಾಶಯಕ್ಕೆ ತಕ್ಕಂತೆ ಮಾಡಿದ ಅನುಕರಣೆ ಶ್ಲಾಘನೀಯವಾದುದು.
೦ ವಿಶ್ವಾರಾಧ್ಯ ಸತ್ಯಂಪೇಟೆ