ಜನತಾ ಸೇವಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Painting Competition in English Medium School of Janata Seva Education Institute

ಜಾಹೀರಾತು

ಇಂದು ಗಂಗಾವತಿಯ ಜನತಾ ಸೇವಾ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್ ಗಂಗಾವತಿ ವತಿಯಿಂದ ಪೀಸ್ ಮಾಸ್ಟರ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು

ಈ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರು ಹಾಗೂ ಲಯನ್ಸ್ ಕ್ಲಬ್ ಗಂಗಾವತಿ ಅಧ್ಯಕ್ಷರಾದ ಡಾ. ಅಮರೇಶ್ ಪಾಟೀಲ್ ಅವರು ಭಾಗವಹಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ, ಅವರನ್ನ ಉದ್ದೇಶಿಸಿ ಭಾರತದ ಮಾಜಿ ರಾಷ್ಟ್ರಪತಿಗಳಾದ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜೀವನದ ಸಾಧನೆಯನ್ನ ಉದಾಹರಣೆಗೆ ತೆಗೆದುಕೊಂಡು ಅದರಂತೆ ನೀವು ಸಹ ಆದರ್ಶದಾಯಕವಾದ ಕನಸನ್ನ ಕಂಡು ಅದನ್ನ ಸಕಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನವನ್ನ ಪಡಬೇಕು ಎಂದು ಮಾತನಾಡಿದರು

ಈ ಚಿತ್ರಕಲಾ ಸ್ಪರ್ಧೆಯಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು

ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರವಿಚೈತನ್ಯ ರೆಡ್ಡಿ, ಕಜಾಂಚಿಗಳಾದ ಜೀವನ್ ಕುಮಾರ್, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸ್ಪರ್ಧಾರ್ಥಿಗಳು ಇದ್ದರು.

Total Views: 0
Share This Article