
Controversial work ‘Basava Mantapa’: Demand for action against author Ravi Hanja and publisher Vishweshwara Bhat

ವಿವಾದಿತ ‘ಬಸವ ಮಂಟಪ’ ಕೃತಿ: ಲೇಖಕ ರವಿ ಹಂಜ, ಪ್ರಕಾಶಕ ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ; ಪೊಲೀಸ್ ಠಾಣೆಯಲ್ಲೂ ದೂರು ದಾಖಲು
ಶಿವಮೊಗ್ಗ: ಬಸವಣ್ಣನವರು ಹಾಗೂ ಲಿಂಗಾಯತ ಧರ್ಮದ ಕುರಿತು ವಿವಾದಕ್ಕೆ ಕಾರಣವಾಗಿರುವ ಲೇಖಕ ರವಿ ಹಂಜ ಮತ್ತು ಪ್ರಕಾಶಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ ಇದರ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ವಿವಾದಿತ ಲೇಖಕ ರವಿ ಹಂಜ ಹಾಗೂ ಕೃತಿಯ ಪ್ರಕಾಶಕರಾದ ವಿಶ್ವೇಶ್ವರ ಭಟ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಶರಣೆ ಶಶಿಕಲಾ ಚಂದ್ರಶೇಖರ, ಶರಣ ಶ್ರೀಕಾಂತ ಕದರಮಂಡಲಗಿ, ಶರಣೆ ಶಾಂತ ಮಠ, ಶರಣೆ ದಾಕ್ಷಾಯಣಮ್ಮ ಬಿ.ಎಸ್., ಶರಣ ರಾಜಪ್ಪ ಟಿ., ಶರಣ ಎಚ್.ಆರ್. ಜಯಪ್ಪ, ಶರಣ ಬಿ.ಜಿ. ಚಂದ್ರಶೇಖರ ಸೇರಿದಂತೆ ಬಸವ ಭಕ್ತರು ಉಪಸ್ಥಿತರಿದ್ದರು.


