ಲಿಂಗಾಯತ ಧರ್ಮ ಮತ್ತು ಬಸವಣ್ಣನವರ ಅವಹೇಳನ ಖಂಡಿಸಿ ನಾಳೆ ದಾವಣಗೆರೆಯಲ್ಲಿ ಪ್ರತಿಭಟನೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Protest to be held in Davanagere tomorrow, condemning the denigration of the Lingayat faith and Basavanna.




ಲಿಂಗಾಯತ ಧರ್ಮ ಮತ್ತು ಬಸವಣ್ಣನವರ ಅವಹೇಳನ ಖಂಡಿಸಿ ನಾಳೆ ದಾವಣಗೆರೆಯಲ್ಲಿ ಪ್ರತಿಭಟನೆ

ಜಾಹೀರಾತು

ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಬಸವಪರ ಸಂಘಟನೆಗಳ ನಿರ್ಧಾರ

ದಾವಣಗೆರೆ: ಲಿಂಗಾಯತ ಧರ್ಮ ಹಾಗೂ ಜಗಜ್ಯೋತಿ ಬಸವಣ್ಣನವರ ಕುರಿತು ನಿರಂತರವಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಿರುವವರ ವಿರುದ್ಧ ಮತ್ತು ಅಂತಹವರಿಗೆ ವೇದಿಕೆ ಕಲ್ಪಿಸುತ್ತಿರುವ ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ದಳದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ನವೆಂಬರ್ 21ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಯ ಜಯದೇವ ವೃತ್ತದ ಬಳಿ ಬಸವಪರ ಸಂಘಟನೆಗಳ ಮುಖಂಡರು, ಬಸವಾಭಿಮಾನಿಗಳು ಹಾಗೂ ಶರಣ ಬಂಧುಗಳು ಸಮಾವೇಶಗೊಳ್ಳಲಿದ್ದಾರೆ.

ಪ್ರತಿಭಟನೆಯ ನಂತರ ಪತ್ರಿಕಾಗೋಷ್ಠಿ ನಡೆಸಿ, ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು. ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಲಾಗುವುದು ಎಂದು ರಾಷ್ಟ್ರೀಯ ಬಸವ ದಳದ ದಾವಣಗೆರೆ ಜಿಲ್ಲಾ ಘಟಕ ತಿಳಿಸಿದೆ.

ಲಿಂಗಾಯತ ಧರ್ಮದ ಅಸ್ಮಿತೆ, ಬಸವಣ್ಣನವರ ವಿಚಾರಧಾರೆ ಹಾಗೂ ಶರಣ ಪರಂಪರೆಯ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಈ ಹೋರಾಟಕ್ಕೆ ಸಮಸ್ತ ಬಸವಪರ ಸಂಘಟನೆಗಳು ಮತ್ತು ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

ಶರಣು ಶರಣಾರ್ಥಿಗಳು.

— ರಾಷ್ಟ್ರೀಯ ಬಸವ ದಳ, ದಾವಣಗೆರೆ ಜಿಲ್ಲಾ ಘಟಕ.

Total Views: 0
Share This Article
Leave a Comment