ಕೋಟಯ್ಯಕ್ಯಾಂಪಿನಲ್ಲಿ ಕಾರ್ತಿಕಮಾಸ ವನಭೋಜನ, ದೀಪೋತ್ಸವ ಆಚರಣೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Dr. Sharanabasappa Kolkar: The Mentor of My Research Life!





ಕೋಟಯ್ಯಕ್ಯಾಂಪಿನಲ್ಲಿ ಕಾರ್ತಿಕಮಾಸ ವನಭೋಜನ, ದೀಪೋತ್ಸವ ಆಚರಣೆ

ಜಾಹೀರಾತು


ನ.23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು; ಭಕ್ತರಿಗೆ ಆಹ್ವಾನ


ಗಂಗಾವತಿ: ಕಮ್ಮವಾರಿ ಯುವ ಸೇವಾ ಸಮಿತಿ, ಗಂಗಾವತಿ ಮಂಡಲ ಹಾಗೂ ಶ್ರೀ ಸೀತಾರಾಮ ದೇವಸ್ಥಾನ ಕಮಿಟಿ, ಕೋಟಯ್ಯಕ್ಯಾಂಪ್ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 23ರ ಸೋಮವಾರ ಕೋಟಯ್ಯಕ್ಯಾಂಪಿನ ಶ್ರೀ ಸೀತಾರಾಮ ದೇವಸ್ಥಾನದಲ್ಲಿ ಕಾರ್ತಿಕಮಾಸ ವನಭೋಜನ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಸಿ. ಪ್ರಭಾಕರ ತಿಳಿಸಿದ್ದಾರೆ.


ಅಂದು ಬೆಳಿಗ್ಗೆ 8 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಿಗ್ಗೆ 8 ಗಂಟೆಗೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, 10ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಗೀತಾ ಪಾರಾಯಣ, ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಕೋಟಯ್ಯಕ್ಯಾಂಪಿನ ಮಂಡಲವಾಸಿಗಳಿಂದ ಶ್ರೀ ಶ್ರೀನಿವಾಸ ಕಲ್ಯಾಣ ಭಜನೆ ನಡೆಯಲಿದೆ.
ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ವನಭೋಜನ, ಸಂಜೆ 6 ಗಂಟೆಗೆ ಕಾರ್ತಿಕಮಾಸದ ಅಂಗವಾಗಿ ದೀಪೋತ್ಸವ ಹಾಗೂ ಸಂಜೆ 7 ಗಂಟೆಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿದೆ.


ಕಾರ್ತಿಕ ಮಾಸದ ಧಾರ್ಮಿಕ ಮಹತ್ವವನ್ನು ಸಾರುವ ಉದ್ದೇಶದಿಂದ ಭಕ್ತಿಭಾವ, ಧಾರ್ಮಿಕ ಸಂಪ್ರದಾಯ ಹಾಗೂ ಸಾಮೂಹಿಕ ಭಜನೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಪೂಜೆ, ಗೀತಾ ಪಾರಾಯಣ, ಭಜನೆ, ವನಭೋಜನ ಹಾಗೂ ದೀಪೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಿ. ಪ್ರಭಾಕರ ಮನವಿ ಮಾಡಿದ್ದಾರೆ.
ಕಾರ್ಯಕ್ರಮವನ್ನು ಕಮ್ಮವಾರಿ ಯುವ ಸೇವಾ ಸಮಿತಿ, ಗಂಗಾವತಿ ಮಂಡಲ ಹಾಗೂ ಶ್ರೀ ಸೀತಾರಾಮ ದೇವಸ್ಥಾನ ಕಮಿಟಿ, ಕೋಟಯ್ಯಕ್ಯಾಂಪ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಆಯೋಜಿಸಿದ್ದಾರೆ.

Total Views: 1
Share This Article
Leave a Comment