ಗಂಗಾವತಿ–ಕಂಪ್ಲಿ–ದರೋಜಿ–ತೋರಣಗಲ್ಲು-ಕುಡತಿನಿ ಮಧ್ಯೆ ನಾಲ್ಕು ಲೇನ್ ರಸ್ತೆ ಹೆದ್ದಾರಿಯನ್ನು ನಿರ್ಮಿಸಿದರೆ ಇದು ಈ ಭಾಗದ ಅಭಿವೃದ್ಧಿಯ ದಿಕ್ಕನ್ನೇ ಬದಲಾಯಿಸುತ್ತದೆ.

If a four-lane highway is built between Gangavati–Kampli–Daroji–Torangal-Kudatini, it will change the direction of development in this area.
ಸುದ್ದಿ: ಫೇಸ್ ಬುಕ್ ಕೃಪೆ
ಗಂಗಾವತಿ ಮತ್ತು ಕಂಪ್ಲಿ ಕೇವಲ 10 ಕಿ.ಮೀ. ಅಂತರದಲ್ಲಿವೆ. ಉತ್ತಮ ನಾಲ್ಕು ಲೇನ್ ಸಂಪರ್ಕ ನಿರ್ಮಾಣವಾದರೆ ಈ ಎರಡೂ ನಗರಗಳು ಹುಬ್ಬಳ್ಳಿ–ಧಾರವಾಡ, ಸಾಂಗ್ಲಿ–ಮಿರಜ್, ಮಾದರಿಯ ಅವಳಿ ನಗರಗಳಾಗಿ ಬೆಳೆಯುತ್ತವೆ. ಇದರಿಂದಾಗಿ ಶಿಕ್ಷಣ, ಆರೋಗ್ಯ, ವ್ಯಾಪಾರ, ವಸತಿ ಹಾಗೂ ಕೈಗಾರಿಕಾ ಹೂಡಿಕೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ.
ಇನ್ನೊಂದೆಡೆ ಕಂಪ್ಲಿಯಿಂದ ತೋರಣಗಲ್ಲುವರೆಗಿನ ಅನೇಕ ಗ್ರಾಮಗಳು ಇಂದು ಜಿಲ್ಲೆಯ ಇತರೆ ಭಾಗಗಳೊಂದಿಗೆ ಸಮರ್ಪಕ ಸಂಪರ್ಕವಿಲ್ಲದೆ ಉಳಿದಿವೆ. ಈ ಹೆದ್ದಾರಿ ನಿರ್ಮಾಣವಾದರೆ ಈಗ ಬಳ್ಳಾರಿ, ಹೊಸಪೇಟೆ, ಕೊಪ್ಪಳಗಳ ಮಧ್ಯೆ ಕೇಂದ್ರಿಕೃತವಾಗಿರುವ ಉದ್ಯಮಗಳು, ಗಂಗಾವತಿ, ಕಂಪ್ಲಿ, ದರೋಜಿ, ಕನಕಗಿರಿ ಭಾಗಗಳಿಗೂ ವಿಸ್ತರಿಸುತ್ತವೆ.
ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ, ಸ್ಥಳೀಯ ವ್ಯಾಪಾರ ಚೇತರಿಸಿಕೊಳ್ಳುತ್ತದೆ, ಕೃಷಿ ಉತ್ಪನ್ನಗಳಿಗೆ ವೇಗವಾದ ಮಾರುಕಟ್ಟೆ ಸಂಪರ್ಕ ದೊರೆಯುತ್ತದೆ ಮತ್ತು ಯುವಕರಿಗೆ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುತ್ತವೆ.
ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೈಗಾರಿಕಾ ಶಕ್ತಿಯನ್ನೂ, ಕಿಷ್ಕಿಂಧೆಯ (ಗಂಗಾವತಿಯ) ಕೃಷಿ ಮತ್ತು ಪ್ರವಾಸೋದ್ಯಮ ಸಾಮರ್ಥ್ಯವನ್ನೂ ಸಂಪರ್ಕಿಸುವ ಈ ಸುಸಜ್ಜಿತ ಹೆದ್ದಾರಿ, ಇಡೀ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯವಾಗುತ್ತದೆ.
ಈ ಯೋಜನೆಗೆ ಆದ್ಯತೆ ನೀಡಲು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ನಮ್ಮ ಜನಪ್ರತಿನಿಧಿಗಳಲ್ಲಿ ಮನವಿ.

