SFI staged a protest condemning the demolition of the arts auditorium on the Government Junior College campus and the use of the college premises for other commercial purposes.

ಸ.ಜ್ಯೂನಿಯರ್ ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರ ನೆಲಸಮಗೊಳಿಸಿ ಇತರೆ ವಾಣಿಜ್ಯ ಉಪಕರಣಗಳಿಗೆ ಸರ್ಕಾರಿ – ಕಾಲೇಜು ಆವರಣವನ್ನು ಬಳಸುತ್ತಿರುವುದನ್ನು ಖಂಡಿಸಿ ಎಸ್ಎಫ್ಐ ಪ್ರತಿಭಟನೆ

ಸ.ಪ.ಪೂ (ಜ್ಯೂನಿಯರ್) ಕಾಲೇಜು ಆವರಣದಲ್ಲಿದ್ದ ಕಲಾ ರಂಗಮಂದಿರ ನೆಲಸಮಗೊಳಿಸಿ ಇತರೆ ವಾಣಿಜ್ಯ ಉಪಕರಣಗಳಿಗೆ ಸರ್ಕಾರಿ – ಕಾಲೇಜು ಆವರಣವನ್ನು ಬಳಸುತ್ತಿರುವುದನ್ನು ಖಂಡಿಸಿ ಎಸ್ಎಫ್ಐ ಮನವಿ ಮಾಡಿ ಜಿಲ್ಲಾಧಿಕಾರಿಗಳ ತಾಸಿಲ್ದಾರರು ರಾಜು ಫಿರಂಗಿಯವರಿಗೆ ಮನವಿ ಸಲ್ಲಿಸಲಾಯಿತು
ಗಂಗಾವತಿ:ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷರು ನಾಗರಾಜ ಯು ಮಾತನಾಡಿ ನಗರದ ಬಾಲಕರ ಸ.ಪ.ಪೂ.ಕಾಲೇಜು (ಜ್ಯೂನಿಯರ್) ಮೈದಾನಕ್ಕೆ ಸರಿ ಸುಮಾರು 75 ವರ್ಷಗಳ ಇತಿಹಾಸವಿದ್ದು, ಬರೋಬ್ಬರಿ 10ಎಕರೆ ವಿಸ್ತಾರವಿತ್ತು. 2004 ರವರೆಗೂ ತಾಲೂಕಿನ ಎಲ್ಲ ಶಾಲೆ, ಕಾಲೇಜುಗಳ ಕ್ರೀಡಾ ಕೇಂದ್ರವಾಗಿತ್ತು. ಸಾರ್ವಜನಿಕ ಮತ್ತು ಹಲವಾರು ಸಂಘ – ಸಂಸ್ಥೆಗಳ, ಕನ್ನಡ ಪರ ಕಾರ್ಯಕ್ರಮಗಳು ಉತ್ಸವಗಳು, ಸಾಹಿತ್ಯ ಸಮ್ಮೇಳನಗಳಿಗೆ ಮತ್ತು ಸರ್ಕಾರಿ ಯೋಜನೆಗಳ ಪ್ರಚಾರದ ಬಹಿರಂಗ ಕಾರ್ಯಕ್ರಮಕ್ಕೆ ವೇದಿಕೆಯಾಗಿತ್ತು. ಬಾಲಕಿಯರ ಎಂಎನ್‌ಎಂ ಶಾಲೆ ಕಟ್ಟಡದಿಂದ ಶುರುವಾದ ಮೈದಾನದ ಒತ್ತುವರಿ ಕಳೆದ 25ವರ್ಷಗಳಲ್ಲಿ ಬಹುತೇಕ ಅತಿಕ್ರಮಣಕ್ಕೊಳಗಾಗಿದೆ. ಮೈದಾನ ಉಳಿಸಿಕೊಳ್ಳಲು ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯು ನಿರಂತರ ಹೋರಾಟ ಮಾಡುತ್ತ ಬಂದಿವೆ.
ಕಾಲೇಜು ಆವರಣದ ಮುಂಭಾಗದಲ್ಲಿ ನಗರಸಭೆ, ಪಿಕಾರ್ಡ್, ಪಿಡಬ್ಲ್ಯುಡಿ, ಬಿಇಒ ಸಂಬಂಧಿಸಿದ್ದ ಕಟ್ಟಡಗಳು ನಿರ್ಮಿಸಿದ್ದಾರೆ ಮತ್ತು ಎರಡು ದಿಕ್ಕಿನಲ್ಲೂ ಬಾಲಕಿಯರ, ಬಾಲಕರ, ಅಲ್ಪಸಂಖ್ಯಾತರ ಕಟ್ಟಡಗಳ ಜತೆಗೆ ಶೈಕ್ಷಣಿಕ ಸಂಬಂಧಿಸಿದ ಅನುದಾನ ಬಳಕೆ ನೆಪದಲ್ಲಿ ಅನಗತ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ ಒಟ್ಟಾರೆ ಸಂಪೂರ್ಣವಾಗಿ ಕಾಲೇಜು ಮೈದಾನವನ್ನು ಬಳಸಿರುವುದು ಅತ್ಯಂತ ಆತಂಕ ಸಂಗತಿ.
ಮೈದಾನದಲ್ಲಿರುವ ಕಲಾ ರಂಗಮಂದಿರುವು ಹಲವಾರು ಕಲಾವಿದರು ಬೆಳೆದು ಬಂದ ರಂಗಮಂದಿರವಿದು ಈಗ ಇಂತಹ ರಂಗಮಂದಿರಕ್ಕೆ ಏಕಾಏಕಿಯಾಗಿ ನಗರ ಪೌರಾಯುಕ್ತರು ಫುಡ್ ಕೋರ್ಟ್ ಹೆಸರಿನಲ್ಲಿ ಬುಲ್ಡೋಜರ್ ನುಗ್ಗಿಸಿ ನೆಲಸಮಗೊಳಿಸಿದ್ದರುವುದನ್ನು ಗಮನಿಸಿದರೆ ಪೌರಯುಕ್ತರು ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತವೆ.
ಸರ್ಕಾರದ ಇತರೆ ಕೆಲಸಗಳಿಗೆ ಹಳೆ ಐಬಿ ಸೇರಿದಂತೆ ಹಲವಾರು ಪರ್ಯಾಯ ಜಾಗಗಳು ಇದ್ದು ಸರ್ಕಾರಿ ಕಾಲೇಜು ಅವರಣವನ್ನು ಬಳಸುತ್ತೋರುವುದು ವಿದ್ಯಾರ್ಥಿಗಳ ಮೌಲ್ಯದಾರಗಳಿಗೆ ಧಕ್ಕೆ ತರಲಿದೆ ಈ ಘಟನೆಯಿಂದ ಹಲವಾರು ರಂಗ ಭೂಮಿ ಕಲಾವಿದರು, ಪ್ರೇಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ ಇಂತಹ ಹೀನಾಯ ಕೃತ್ಯವನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ತೀವ್ರವಾಗಿ ಖಂಡಿಸುತ್ತದೆ ಮತ್ತು ಅದೇ ಸ್ಥಳದಲ್ಲಿ ರಂಗಮಂದಿರವನ್ನು ಮರು ನಿರ್ಮಾಣ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿ ಈ ವಿಷಯವು ಮಾನ್ಯ ಜಿಲ್ಲಾಧಿಕಾರಿಗಳಿಗೆ ಗಮನಕ್ಕೆ ಇದ್ದು ಸಹ ರಂಗಮಂದಿರವನ್ನು ನೆಲಸಮಗೊಳಿಸಿದ್ದು ಅಧಿಕಾರಿಗಳ ಮೌನವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ನೇರವಾಗಿ ಪ್ರಶ್ನಿಸುತ್ತದೆ.
ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಸ್ಥಿಕೆಯನ್ನು ವಹಿಸಿ ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಕೂಡಲೇ ರಂಗ ಮಂದಿರವನ್ನು ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡಬೇಕು ಇಲ್ಲಾದಿದ್ದಲ್ಲಿ ಮುಂದೆ ಭಾರತ ವಿದ್ಯಾರ್ಥಿ ಫೆಡರೇಶನ್ ಸಂಘಟನೆಯು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಈ ಮೂಲಕ ಎಚ್ಚರಿಕೆಯ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ನಾಗರಾಜ ಯು ಬಸವರಾಜ್ ಮರಕುಂಬಿ ಹುಸೇನಪ್ಪ ಕೆ ರಮೇಶ್ ಡಿ ಉಪಸ್ಥಿತರಿದ್ದರು


