
The butchery of building Kannada on the border is commendable: Gavisiddappa Patil

ಗಡಿ ಭಾಗದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುವ ಕಸಾಪ ಕಾರ್ಯ ಶ್ಲಾಘನೀಯ: ಗವಿಸಿದ್ದಪ್ಪ ಪಾಟೀಲ್

ಗಡಿಭಾಗವಾದ ರಾಯಚೂರು ಜಿಲ್ಲೆಯಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದ್ದು, ಇಂತಹ ಮಹತ್ವಪೂರ್ಣ ಕಾರ್ಯಕ್ಕೆ ಲಕ್ಷ್ಮೀದೇವಿ ಶಾಸ್ತ್ರಿ ಅಂತಹ ಸಾಹಿತಿಗಳು ದತ್ತಿ ದಾನ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಕಲಬುರಗಿ ಸಾಹಿತಿ ಡಾ.ಗವಿಸಿದ್ದಪ್ಪ.ಎಚ್.ಪಾಟೀಲ್ ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2026-27ನೇ ಸಾಲಿನ ದತ್ತಿನಿಧಿ ಕಾರ್ಯಕ್ರಮ ಉದ್ಘಾಟನಾ ಸಮಾರಂಭಹಾಗೂ ಲಿಂಗೈಕ್ಯ ಶಿವಬಸಯ್ಯ ನಂದಿಧ್ವಜ = ಹಳೆ ಶಹಬಾದ್ ಕಲಬುರಗಿ ಅವರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತಿದ್ದು, ಕನ್ನಡವನ್ನು
ಬೆಳೆಸುವ ಹಾಗೂ ಕಟ್ಟಲು ಈ ಭಾಗದ ಸಾಹಿತಿಗಳು ಸಾಕಷ್ಟು ಶ್ರಮಿಸಿದ್ದಾರೆ. ಕೇಂದ್ರ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಯನ್ನು ಪರಿಚಯಿಸಿದ ನಂತರ ಲಕ್ಷ್ಮೀ ದೇವಿ ಶಾಸ್ತಿ ಅಂತಹ ದತ್ತಿ ದಾನಿಗಳು ಕನ್ನಡ ಭಾಷೆ, ಸಾಹಿತ್ಯ ಬೆಳೆಯಲು ದಾನ ನೀಡುವುದು. ಹೆಮ್ಮೆಯ ವಿಚಾರವಾಗಿದೆ ಎಂದರು. ಲಕ್ಷ್ಮೀ ದೇವಿ ಶಾಸ್ತ್ರಿ ಅವರು, ಬಾಲ್ಯದಿಂದಲೂ ಬಡತನ ಮತ್ತು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾ ಬಂದವರಾಗಿದ್ದಾರೆ. ಅಂತಹ ಸವಾಲುಗಳ ನಡುವೆಯೂ ಶಿಕ್ಷಣವನ್ನು ಪಡೆದು, ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಇಂದು ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಬಿ.ವಿಜಯೇಂದ್ರ, ಸಾಹಿತಿಗಳಾದ ಲಕ್ಷ್ಮೀದೇವಿ ಶಾಸ್ತ್ರಿ, ರಾಮಣ್ಣ ಹವಳೆ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ, ರಾಯಚೂರು ವಿಶ್ವವಿದ್ಯಾಶಲಯದ ಸಿಂಡಿಕೇಟ್ ಸದಸ್ಯೆ ಡಾ.ಮೀನಾಕ್ಷಿ ಖಂಡಿಮಠ, ಬಂಡೂರಾವ್ ಚಾಗಿ, ವೀರಹನುಮಾನ, ವಿಶ್ವನಾಥ ಶಾಸ್ತ್ರಿ, ನಾಗಪ್ಪ ಹೊರಪ್ಯಾಟಿ, ದತ್ತಿ ಪ್ರಶಸ್ತಿ ಪುರಸ್ಕೃತ ಸಂಪತ್ಕುಮಾರ, ಜಿಲ್ಲಾ ಘಟಕದ ಸಹ ಕಾರ್ಯದರ್ಶಿ ಡಾ. ದಂಡಪ್ಪ ಬಿರಾದಾರ್ ರಾವುತ್ರಾವ್ ಬರೂರ್, ಪ್ರತಿಭಾ ಗೋನಾಳ ರಾಯಚೂರ ತಾಲೂಕ ಘಟಕ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ಬೇವಿನ ಬೆಂಚಿ ಸೇರಿದಂತೆ ಅನೇಕರಿದ್ದರು.
