ದೇವರ ಆಟ’ ಕಿರುಚಿತ್ರ ಶೀಘ್ರ ಬಿಡುಗಡೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
God’s Game’ short film to be released soon




ದೇವರ ಆಟ’ ಕಿರುಚಿತ್ರ ಶೀಘ್ರ ಬಿಡುಗಡೆ

ಜಾಹೀರಾತು


ಮೈಸೂರು: ಸಾಮಾಜಿಕ ಪ್ರಪಂಚದಲ್ಲಿ ನಡೆಯುವ ತಂದೆ-ಮಗನ ಸಂಬಂಧದ ಬಗ್ಗೆ , ಬಾಂಧವ್ಯವನ್ನು ಹಾಗೂ ಈಗಿನ ಕಾಲಘಟ್ಟಕ್ಕೆ ತಂದೆ-ಮಕ್ಕಳು ಯಾವ ರೀತಿ ಇರಬೇಕೆಂದು ‘ದೇವರ ಆಟ’ ಕಿರುಚಿತ್ರದ ಮೂಲಕ ಮನಮುಟ್ಟುವ ರೀತಿಯಲ್ಲಿ ಮೈಸೂರು ಸೋಮು ಹೇಳಹೊರಟಿದ್ದಾರೆ.
ನಲವತ್ತು ನಿಮಿಷಗಳ ಕಿರುಚಿತ್ರವನ್ನು ಮನೆಮಂದಿಯೆಲ್ಲಾ ವೀಕ್ಷಿಸಬಹುದು. ಚಿತ್ರವನ್ನು ಕೆಲವು ಸ್ಪರ್ಧೆಗಳಿಗೆ ಕಳಿಸಲಾಗುತ್ತಿದೆ. ಹೀಗಾಗಿ ಚಿತ್ರವನ್ನು ಸಾಧ್ಯವಿದ್ದಷ್ಟು ಯಾವುದೇ ಕೊರತೆಯಾಗದಂತೆ ಎಲ್ಲ ರೀತಿಯಲ್ಲಿ ರಿಚ್ ಬರುವಂತೆ ಮಾಡುತ್ತಿದ್ದೇವೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಸಣ್ಣ ಬದಲಾವಣೆಯನ್ನಂತೂ ತಮ್ಮ ಮನೆಗಳಲ್ಲಿ-ಮನಗಳಲ್ಲಿ ತಂದುಕೊಳ್ಳುವರು. ಚಿತ್ರದ ಎಲ್ಲಾ ತಾಂತ್ರಿಕ ಕೆಲಸ ಮುಗಿದಿದ್ದು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ . ನಾನು ಛಾಯಾಗ್ರಾಹಕನಾಗಿ ಇನ್ನೂ ಬೆಳೆಯಬೇಕಾಗಿದೆ ಅದಕ್ಕೆ ಚಿತ್ರರಂಗದವರ ಜೊತೆಗೆ ಮಾಧ್ಯಮದವರ ಪ್ರೋತ್ಸಾಹ ಕೂಡ ಬೇಕು ಎಂದು ಸುಮಾರು ಇಪ್ಪತ್ತೈದು ಕಿರು ಚಿತ್ರಗಳಿಗೆ ಛಾಯಾಗ್ರಹಣ , ಎಂಟು ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿ ಅನುಭವವಿರುವ ನಿರ್ದೇಶಕ ಮೈಸೂರು ಸೋಮು ಹೇಳಿದ್ದಾರೆ.
ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಕಾರ್ತಿಕ್ ಜಯರಾಜ್ ಅಭಿನಯಿಸಿದ್ದು ಉಳಿದಂತೆ ಮಂಡ್ಯ ಸತ್ಯ , ಆನಂದ ಬಾಬು, ಅಜಯ್ ಆರ್ ಎಸ್ , ಲೋಕೇಶ್ , ಗಿರೀಶ್ ಮಳವಳ್ಳಿ , ವಿಶ್ವ ಮಳವಳ್ಳಿ ಹಾಗೂ ಹಳ್ಳಿಯ ಗ್ರಾಮೀಣ ಕಲಾವಿದರು ಅಭಿನಯಿಸಿದ್ದಾರೆ. ಸಾಹಿತ್ಯ-ಸಂಭಾಷಣೆ ಜೊತೆಗೆ ಛಾಯಗ್ರಹಣ ಸೋಮು ಅವರದಿದ್ದು , ಪತ್ರಿಕಾಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಕಾರ್ತಿಕ್ ಜಯರಾಜ್ ಮತ್ತು ಮೈಸೂರ್ ಸೋಮು ನಿರ್ಮಾಪಕರಾಗಿದ್ದಾರೆ.
**
-ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬

Total Views: 0
Share This Article