
“ಐದು ಗ್ರಾಮಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಗಂಗಾವತಿ: ವಿಧಾನಸಭಾ ಕ್ಷೇತ್ರದ ಬಸಪಟ್ಟಣ, ಹಿರೇಬೆಣಕಲ್, ಆಗೋಲಿ, ಉಡುಮಕಲ್ ಹಾಗೂ ಮಲಕನಮರಡಿ ಗ್ರಾಮಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮಗಳಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಭಾಗವಹಿಸಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ
ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅವರು ಜಗತ್ತಿಗೆ ಪವಿತ್ರ ರಾಮಾಯಣ ಮಹಾಕಾವ್ಯವನ್ನು ನೀಡಿದ ಮಹಾನ್ ಋಷಿಯಾಗಿದ್ದಾರೆ. ರಾಮಾಯಣದಲ್ಲಿ ಶ್ರೀರಾಮಚಂದ್ರನ ಆದರ್ಶ ವ್ಯಕ್ತಿತ್ವ, ಏಕಪತ್ನಿ ವ್ರತ, ವಾತ್ಸಲ್ಯ ಹಾಗೂ ಶ್ರೀರಾಮ–ಆಂಜನೇಯರ ಭಕ್ತಿಯ ನಂಟನ್ನು ಸವಿಸ್ತಾರವಾಗಿ ಚಿತ್ರಿಸಲಾಗಿದೆ. ವಾಲ್ಮೀಕಿಯವರ ತತ್ವಾದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮುಖಂಡರಾದ ವೀರೇಶ್ ಬಲಕುಂದಿ, ಯಮನೂರು ಚೌಡ್ಕಿ, ದುರ್ಗಪ್ಪ ದಳಪತಿ, ಮಂಜುನಾಥ ನಾಯಕ್, ಷಣ್ಮುಖ ನಾಯಕ್, ಆನಂದ್ ಗೌಡ, ಕಾಳಿಂಗ ನಾಯಕ್, ಅರ್ಜುನ್ ನಾಯಕ್, ಚಿನ್ನಪ್ಪ ನಾಯಕ್, ದೀಪಕ್ ಬಾಂಟೀಯ, ಶ್ರೀಧರ್ ಕಲ್ಮಾನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.”





