ಕೊಪ್ಪಳ ಜಿಲ್ಲೆಯಲ್ಲಿನ  ಸ್ಕ್ಯಾನಿಂಗ್ ಸೆಂಟರ್‌ಗಳ ಕಟ್ಟುನಿಟ್ಟಿನ ತಪಾಸಣೆಗೆ ನಿರ್ಣಯಕಟ್ಟುನಿಟ್ಟಿನ ತಪಾಸಣೆಗೆ ನಿರ್ಣಯ

H.Mallikarjun
H.Mallikarjun - Kalyanasiri
3 Min Read
ಜಾಹೀರಾತು

Decision for strict inspection of scanning centers in Koppal district

ಕೊಪ್ಪಳ ಜಿಲ್ಲೆಯಲ್ಲಿನ  ಸ್ಕ್ಯಾನಿಂಗ್ ಸೆಂಟರ್‌ಗಳ

ಜಾಹೀರಾತು

ಕಟ್ಟುನಿಟ್ಟಿನ ತಪಾಸಣೆಗೆ ನಿರ್ಣಯ


ಕೊಪ್ಪಳ ಮೇ 22 (ಕ.ವಾ): ಲಿಂಗ ಆಯ್ಕೆ ತಡೆ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲ್ವಿಚಾರಣೆಯನ್ನು ಬಲಪಡಿಸುವ ಉದ್ದೇಶದಿಂದ ರಚನೆಯಾದ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ (ಪಿಸಿ ಅಂಡ್ ಪಿಎನ್‌ಡಿಟಿ) ಕಾರ್ಯಕ್ರಮದ ಜಿಲ್ಲಾ ಸಲಹಾ ಸಮಿತಿ ಸಭೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಲಿಂಗರಾಜು ಟಿ ಅವರ ಅಧ್ಯಕ್ಷತೆಯಲ್ಲಿ ಮೇ 22ರಂದು ನಡೆಯಿತು.
ಜಿಲ್ಲಾಡಳಿತದ ಭವನದಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲ್ವಿಚಾರಣೆಯನ್ನು ಮನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸಮಿತಿಯ ಸದಸ್ಯರು ತಮ್ಮ ಕರ್ತವ್ಯದ ನಡುವೆಯೂ ಜಂಟಿ ತಪಾಸಣೆಗೆ ಅಗತ್ಯ ಸಮಯ ಮೀಸಲಿಡಬೇಕೆಂದು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮೊದಲ ತ್ರೈಮಾಸಿಕದ ಅವಧಿ ಏಪ್ರಿಲ್‌ನಿಂದ ಇದುವರೆಗೆ ಜಿಲ್ಲೆಯಾದ್ಯಂತ ಈಗಾಗಲೇ 34 ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಪ್ರಸ್ತುತ ತಪಾಸಣಾ ಪ್ರಗತಿ ಶೇ.100ರಷ್ಟಿದ್ದು, ಉಳಿದ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸ್ಕಾö್ಯನಿಂಗ್ ಸೆಂಟರಗಳಿಗೆ ನಿಯಮಿತ ತಪಾಸಣೆ, ಪಾರದರ್ಶಕತೆ ಮತ್ತು ಕಾಯ್ದೆಯ ಸಮರ್ಪಕ ಅನುಷ್ಠಾನದ ಕುರಿತು ಸಭೆಯಲ್ಲಿ ಸದಸ್ಯರು ನಾನಾ ಸಲಹೆಗಳನ್ನು ನೀಡಿದರು. ಜಿಲ್ಲೆಯಲ್ಲಿ ಪ್ರಸ್ತುತ 60 ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೆಪಿಎಂಇ ನೋಂದಣಿ ಸಂಖ್ಯೆ ಹೊಂದಿದ ಸ್ಕಾö್ಯನಿಂಗ್ ಸೆಂಟರಗಳನ್ನು ಪಿಸಿ ಅಂಡ್ ಪಿಎನ್‌ಡಿಟಿ ಕಾರ್ಯಕ್ರಮದಡಿಯಲ್ಲಿ ಹೊಸದಾಗಿ ನೋಂದಣಿ ಹಾಗೂ ನವೀಕರಣ ಮಾಡಲು ಬೇಕಾದ ಎಲ್ಲಾ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿದ ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಪೋಸ್ಟ್ ಗ್ರಾö್ಯಜುಯೇಟ್ ಸ್ಟಡೀಸ್ ಅಂಡ್ ರಿಸರ್ಚ್ ಸೆಂಟರ್, ಗಂಗಾವತಿಯ ಬಂಬೂ ಬಜಾರ್‌ದಲ್ಲಿನ ಚೈತನ್ಯ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ, ಗಂಗಾವತಿಯ ಕಂಪ್ಲಿ ರೋಡನಲ್ಲಿರುವ ಮಲ್ಲಿಕಾರ್ಜುನ ಮಲ್ಟಿಸ್ಪೆಷಾಲಿಟಿ ಹಾಸ್ಟಿಟಲ್, ಕೊಪ್ಪಳ ಸಿಟಿಯ ಹೊಸಪೇಟೆ ರಸ್ತೆಯಲ್ಲಿನ ಶಿವಶಾಂತ ಕಾಲೋನಿಯ ನವಜೀವನ ಹಾಸ್ಪಿಟಲ್, ಗಂಗಾವತಿಯ ರಾಯಚೂರು ರಸ್ತೆಯಲ್ಲಿರುವ ಸಿದ್ದೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಇವರ ದಾಖಲಾತಿಗಳನ್ನು ಸಭೆಯಲ್ಲಿ ಪರಿಶೀಲಿಸಿ ಈ ಸ್ಕಾö್ಯನಿಂಗ್ ಸೆಂಟರಗಳ ಪಿಸಿ ಪಿಎನ್‌ಡಿಟಿ ಪರವಾನಿಗೆಯನ್ನು ಪಿಸಿ ಪಿಎನ್‌ಡಿಟಿ ಕಾರ್ಯಕ್ರಮದಡಿಯಲ್ಲಿ ಹೊಸದಾಗಿ ನೋಂದಣಿ ಮಾಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಕೊಪ್ಪಳದ ದಿವಟರನಗರದಲ್ಲಿನ ಶ್ರೀ ಮಂಗಳ ಹಾಸ್ಪಿಟಲ್ ಅವರ ಮನವಿಯನ್ನು ಪರಿಶೀಲಿಸಿ ಈ ಸ್ಕಾö್ಯನಿಂಗ್ ಸೆಂಟರನ ಪಿಸಿ ಪಿಎನ್‌ಡಿಟಿ ಪರವಾನಿಗೆಯನ್ನು ಪಿಸಿ ಪಿಎನ್‌ಡಿಟಿ ಕಾರ್ಯಕ್ರಮದಡಿಯಲ್ಲಿ ನವೀಕರಣ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ್ ಎಂ. ಹೆಚ್., ಸದಸ್ಯ ಕಾರ್ಯದರ್ಶಿ ಕಿಮ್ಸ್ ಆಸ್ಪತ್ರೆಯ ರೇಡಿಯಾಲಜಿಸ್ಟ್ ಡಾ. ದಯಾನಂದಸ್ವಾಮಿ, ಪಿಸಿಪಿಎನ್‌ಡಿಟಿ ಕಾರ್ಯಕ್ರಮದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮುನಿರಾಬಾದ್ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞರಾದ ಡಾ.ಕೆ.ಎಚ್.ತೊಗರಿ, ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಮಕ್ಕಳ ತಜ್ಞರಾದ ಡಾ.ಗಿರೀಶ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ವಕೀಲರಾದ ಶಂಕರ ಬಿಸರಳ್ಳಿ, ರಿಲೀಫ್ ಫೌಂಡೇಶನ್ ಹೆಲ್ತ್ ಸರ್ವಿಸ್ ಕೊಪ್ಪಳದ ಎನ್‌ಜಿಓದ ಡಾ.ವಿಶ್ವನಾಥ ನಲ್ವಾಡ, ಧ್ವನಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಂಕ್ರಪ್ಪ ಬಿ ಸುರಳ್, ಅಲ್ಫಾ ಹೆಲ್ತ್ ಎಜ್ಯುಕೇಶನ್ ಅಂಡ್ ರೂರಲ್ ಡೆವಲಪಮೆಂಟ್ ಫೌಂಡೇಶನ್ ಕೊಪ್ಪಳದ ಸಲೀಮಾ ಜಾನ್ ಉಪಸ್ಥಿತರಿದ್ದರು.

Total Views: 0
Share This Article