ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಕಾರಾಗೃಹ &ಸುಧಾರಣಾ ಸೇವಾ ಇಲಾಖೆಗೆ ನೇಮಿಸಿಕೊಳ್ಳಲು ಅವಕಾಶ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Permission to employ ex-servicemen on contract basis in the Prisons & Correctional Services Department

ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಕಾರಾಗೃಹ &
ಸುಧಾರಣಾ ಸೇವಾ ಇಲಾಖೆಗೆ ನೇಮಿಸಿಕೊಳ್ಳಲು ಅವಕಾಶ

ಜಾಹೀರಾತು


ಕೊಪ್ಪಳ ಏಪ್ರಿಲ್ 21 (ಕರ್ನಾಟಕ ವಾರ್ತೆ): 550 ಮಾಜಿ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಗೆ ನೇಮಿಸಿಕೊಳ್ಳಲಾಗುತ್ತಿದ್ದು, ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪುನರ್ವವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
 ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ಖಾಲಿಯಿರುವ ವೀಕ್ಷಕರ ಹುದ್ದೆಗಳನ್ನು ತಾತ್ಕಾಲಿಕವಾಗಿ 550 ಮಾಜಿ ಸೈನಿಕರನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣಿಗಳಲ್ಲಿ ಪಾರದರ್ಶಕತೆ ಅಧಿನಿಯಮದನ್ವಯ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿಸಿ ಸರ್ಕಾರವು ಆದೇಶಿಸಿದೆ. ಮಾಜಿ ಸೈನಿಕರ ವಯೋಮಿತಿ 45 ವರ್ಷಗಳಿಗಿಂತಲೂ ಕಡಿಮೆ ಇರಬೇಕು ಮತ್ತು ಶೇಪ್ ಒನ್ (Shಚಿಠಿe -1) ಆಗಿ ನಿವೃತ್ತಿ ಹೊಂದಿರಬೇಕು ಹಾಗೂ ಇನ್ನು ಕೆಲವು ಷರತ್ತುಗಳೊಂದಿಗೆ 11 ತಿಂಗಳೊಳಗೆ ಗುತ್ತಿಗೆ ಆಧಾರದ ಮೇಲೆ ನಿಯೋಜಿಸುವಂತೆ ಕೋರಿರುತ್ತಾರೆ.
 ಆದಕಾರಣ ಇಚ್ಛೆವುಳ್ಳ ಬಾಗಲಕೋಟ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸೈನಿಕರು ತಮ್ಮ ಸೇವಾ ದಾಖಲೆಗಳೊಂದಿಗೆ ಏಪ್ರಿಲ್ 24 ಸಮಯ ಮಧ್ಯಾಹ್ನ 2 ರೊಳಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬಾಗಲಕೋಟೆ ಇವರಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Total Views: 0
Share This Article