
Woman missing: Request for assistance in finding her

ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಮೇ 11 (ಕರ್ನಾಟಕ ವಾರ್ತೆ): ಗಂಗಾವತಿ ತಾಲ್ಲೂಕಿನ ತಿರುಮಲಪುರ ಗ್ರಾಮದ ಗಾಳೆಮ್ಮ ಗಂ.ಪAಪಾಪತಿ ಎಂಬ 47 ವರ್ಷದ ಮಹಿಳೆಯು 2025 ರ ಸೆಪ್ಟೆಂಬರ್ 30 ರಂದು ಅಯೋಧ್ಯೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.336/2025 ಕಲಂ ಮಹಿಳೆ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ವಿವರ: ಮಹಿಳೆಯು 5.4 ಫೀಟ್ ಎತ್ತರವಿದ್ದು, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಉದ್ದನೆ ಕೂದಲು ಇದ್ದು, ಜುಟ್ಟು ಕಟ್ಟುತ್ತಾರೆ. ಹಣೆಗೆ ಹಚ್ಚೆ ಬಟ್ಟು ಇರುತ್ತದೆ. ಕನ್ನಡ, ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಮಹಿಳೆಯ 2 ಕೈಗಳ ಮೇಲೆ ಹಚ್ಚೆಯಿದ್ದು, ಬಲಗೈಗೆ ಪಂಪಣ್ಣ ಎಂದು ಹಾಗೂ ಎಡಗೈಗೆ ಹೂವಿನ ಡಿಜೈನ್ ಇರುವ ಹಚ್ಚೆಯಿದೆ. ಈ ಚಹರೆಯ ಮಹಿಳೆಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು: 08539-230222, ಪೊಲೀಸ್ ಉಪಾಧೀಕ್ಷಕರು: 08533-230853, ಆರಕ್ಷಕ ನಿರೀಕ್ಷಕರು, ಗಂಗಾವತಿ ಗ್ರಾಮೀಣ ಠಾಣೆ: 08533-230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
