
Unknown person found dead at Munirabad railway station: Case registered
.

ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಮೃತ: ಪ್ರಕರಣ ದಾಖಲು
ಕೊಪ್ಪಳ ಮೇ 11 (ಕರ್ನಾಟಕ ವಾರ್ತೆ): ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ 2026ರ ಮೇ ರಂದು ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಸುಮಾರು 35 ರಿಂದ 40 ವರ್ಷದ ವ್ಯಕ್ತಿ ಚಲಿಸಿ ಬರುವ 17329 ರೈಲು ಗಾಡಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು, ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆ ಯು.ಡಿ.ಆರ್ ನಂಬರ್ 20/2026 ಕಲಂ 194 ಬಿ.ಎನ್.ಎಸ್.ಎಸ್ ರೀತ್ಯ ಪ್ರಕರಣ ದಾಖಲಾಗಿದೆ.
ಮೃತನ ಚಹರೆ ಪಟ್ಟಿಯ: ಮೃತ ವ್ಯಕ್ತಿಯು ಕೋಲು ಮುಖ, ಹಗಲವಾದ ಹಣೆ ಮತ್ತು ಉದ್ದನೆಯ ಮೂಗು, ಸಾದಾಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.5 ಪೂಟ ಎತ್ತರ, ತಲೆಯಲ್ಲಿ ಸುಮಾರು 1/2 ಇಂಚಿನಷ್ಟು ಕಪ್ಪು ಮತ್ತು ಬಿಳಿ ಕೂದಲು, ಸುಮಾರು 1/2 ಇಂಚು ಕಪ್ಪು ದಾಡಿ ಮತ್ತು ಮೀಸೆ ಬಿಟ್ಟಿರುತ್ತಾನೆ. ಮೃತನ ಮೈಮೇಲೆ ಒಂದು ಬಿಳಿ ಕಲರಿನ ಕಪ್ಪು ಚುಕ್ಕೆಯುಳ್ಳ ಆಪ್ ಶರ್ಟ, ಒಂದು ತಿಳಿ ನೀಲಿ ಬನಿಯನ್, ಒಂದು ನೀಲಿ ಕಲರ್ ಜೀನ್ಸ್ ಪ್ಯಾಂಟ್, ಒಂದು ಕಂದು ಬಣ್ಣದ ಅಂಡರವಿಯರ್ ಧರಿಸಿರುತ್ತಾನೆ ಹಾಗೂ ಬಲಗೈ ಮುಂಗೈ ಮೇಲೆ ಅಮ್ಮ ಅಂತಾ ಅಚ್ಚೆ ಗುರುತು ಇರುತ್ತದೆ.
ಈ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರತಲ್ಲಿ ಅಥವಾ ವಾರಸುದಾರರಿದ್ದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯ ದೂರವಾಣಿ ಸಂ.08372-278744 ಅಥವಾ ಮೊ.ನಂ: 9480802128 ಮತ್ತು ಇmಚಿiಟ: gadagrly@ksp.gov.inಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ.ನಂ: 080-22871291 ಗೆ ಸಂಪರ್ಕಿಸುವಂತೆ ಗದಗ ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
