ಗಂಗಾವತಿ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Gangavati ITI: Application Invitation for Admission




ಗಂಗಾವತಿ ಐಟಿಐ: ಪ್ರವೇಶಕ್ಕೆ ಅರ್ಜಿ ಆಹ್ವಾನ

ಜಾಹೀರಾತು

ಕೊಪ್ಪಳ ಏಪ್ರಿಲ್ 29 (ಕರ್ನಾಟಕ ವಾರ್ತೆ): ಗಂಗಾವತಿಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2026-27 ನೇ ಸಾಲಿಗೆ ವಿವಿಧ ವೃತ್ತಿಗಳಲ್ಲಿ ಮೀಸಲಾತಿ ಆಧಾರಿತ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ವಿದ್ಯುತ್ ಶಿಲ್ಪಿ, ವಿದ್ಯುನ್ಮಾನ ದುರಸ್ತಿಗಾರ, ಜೋಡಣೆಗಾರ, ಚರಕೀಯ, ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಬೆಸುಗೆಗಾರ, ಮೆಕ್ಯಾನಿಕ್ ಏಲೆಕ್ಟಿçಕ್ ವೆಹಿಕಲ್, ಅಡ್ವಾನ್ಸ್ಡ್ ಸಿ.ಎನ್.ಸಿ. ಮಷಿನಿಂಗ್ ಟೆಕ್ನಿಷಿಯನ್, ಇಂಡಷ್ಟಿçಯಲ್ ರೋಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್, ಬೇಸಿಕ್ ಡಿಸೈನರ್ ಮತ್ತು ವರ್ಚುವಲ್ ವೆರಿಫೈಯರ್, ಆರ್ಟಿಸನ್ ಯೂಸಿಂಗ್ ಅಡ್ವಾನ್ಸಡ್ ಟೂಲ್, ಮ್ಯಾನುಫೆಕ್ಟರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೋಮೆಷನ್ ವೃತ್ತಿಗಳಲ್ಲಿ ಲಭ್ಯವಿರುವ ಸ್ಥಾನಗಳಿಗೆ ವೃತ್ತಿಗನುಸಾರವಾಗಿ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ/ 8ನೇ ತರಗತಿ ಉತ್ತೀರ್ಣರಾದ ಅರ್ಹ ಆಸಕ್ತ ಅಭ್ಯರ್ಥಿಗಳು ಎನ್‌ಸಿವಿಟಿ ಸಂಯೋಜಿತ ಸಿಟಿಎಸ್ ಅಡಿಯಲ್ಲಿ  ಪ್ರವೇಶವನ್ನು  ಪಡೆಯಬಹುದಾಗಿದೆ.
ಸಂಸ್ಥೆಯಲ್ಲಿ ಐಎಂಸಿ  (Institute Management Committee )     ಕೋಟಾದಡಿಯಲ್ಲಿಯೂ ಸೀಟುಗಳು ಲಭ್ಯವಿದ್ದು ಅರ್ಹ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ನೇರವಾಗಿ ಪ್ರವೇಶವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ವೆಬ್‌ಸೈಟ್:  www.cite.karnataka.gov.in  ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರನ್ನು ಹಾಗೂ ಮೊ.ಸಂ.: 8904448925, 9448259832 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.    

Total Views: 1
Share This Article