ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ .

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಮ ಬೆಟ್ಟದಲ್ಲಿ ಸಿಗದ ಆಂಬುಲೆನ್ಸ್ ವಾಹನ ಸಾರ್ವಜನಿಕರಿಂದ ಪ್ರತಿಭಟನೆ .

ಜಾಹೀರಾತು

Public protests over ambulances not available in Mt.

ವರದಿ: ಬಂಗಾರಪ್ಪ .ಸಿ ‌.‌
ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಾದಪ್ಪನ ಸನ್ನಿದಿಯಲ್ಲಿಯಲ್ಲಿನ ಜೋಡಿ ರಸ್ತೆಯಲ್ಲಿ
ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊರೆದೊಯ್ಯಲು ಆಂಬುಲೆನ್ಸ್ ಸಿಗದ ಹಿನ್ನೆಲೆಯಲ್ಲಿ ಸ್ಥಳಿಯ ಜನರು ಸೇರಿದಂತೆ ಬೇಡಗಂಪಣ ಸಮುದಾಯದ ಮುಖಂಡರು ಮ ಬೆಟ್ಟದ ಸರ್ಕಾರಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ಹನೂರು ತಾಲ್ಲೂಕಿನ
ಆಸ್ಪತ್ರೆ ಮುಂಭಾಗ ನೆರೆದಿದ್ದ ಪ್ರತಿಭಟನಾಕಾರರು ಸ್ಥಳಿಯ ಜನಪ್ರತಿನಿಧಿಗಳ ವಿರುದ್ದ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ವಿವರ :
ದೇವಾಲಯದ ಮುಂಬಾಗದ ಜೋಡಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಮಯದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದರ ಪರಿಣಾಮವಾಗಿ ,ಅಪರಿಚಿತ ಯುವಕನೊಬ್ಬ ಗಾಯಗೊಂಡಿದ್ದ. ಈತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಜೀವ ಉಳಿಸಬಹುದಿತ್ತು. ಆದರೆ ಆಂಬುಲೆನ್ಸ್ ಸಿಗದ ಪರಿಣಾಮ ಯುವಕ ಮೃತಪಟ್ಟಿದ್ದಾನೆ,ಇದರಿಂದ ಕೆರಳಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು , ದೇವಾಲಯಕ್ಕೆ ತಮಿಳುನಾಡು ಹಾಗೂ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಸೂಕ್ತಕ್ರಮ ಜರುಗಿಸಬೇಕಾಗಿ ಆಗ್ರಹಿಸಿದರು.
ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ ವೈದ್ಯರು ಕೊಳ್ಳೇಗಾಲ, ಹನೂರು ಹಾಗೂ ರಾಮಾಪುರದಿಂದ ಬರಬೇಕಿದ್ದು, ಮುಂದಿನ ದಿನಗಳಲ್ಲಿ ನಮ್ಮಲ್ಲೆ ಮಾಡಲಿ ಎಂದು ಪ್ರತಿಭಟನಕಾರರು ತಿಳಿಸಿದರು.

Total Views: 0
Share This Article