
Kanneri Kadasiddheshwara Swamy Basavakalyanam entry restricted: Basavaraja Florist.

ಕನ್ನೇರಿ ಕಾಡಸಿದ್ಧೇಶ್ವರ ಸ್ವಾಮಿ ಬಸವಕಲ್ಯಾಣ ಪ್ರವೇಶ ನಿರ್ಬಂಧಿಸಲು ಒತ್ತಾಯ : ಗುಳೆ ರಾಷ್ಟ್ರೀಯ ಬಸವ ದಳದ ಕಾರ್ಯಧ್ಯಕ್ಷ ಬಸವರಾಜ ಹೂಗಾರ.

👉🏾 ಹಿಂದು ಸಮಾವೇಶದ ವಿರುದ್ಧ ಹೋರಾಟ ಅಲ್ಲ, ಪೂಜ್ಯರೊಡಗೂಡಿ ಬಸವ ಪರ ಸಂಘಟಕರಿಗೆ ಅಶ್ಲೀಲ ಪದ ಬಳಸಿ ದ್ವೇಷ ಭಾಷಣ ಮಾಡುವುದರ ವಿರುದ್ದ ನಮ್ಮ ಹೋರಾಟ
ಯಲಬುರ್ಗಾ,: ಜೂನ್ 28 ರಂದು ಬಸವಕಲ್ಯಾಣದಲ್ಲಿ ಆಯೋಜಿಸ ಲಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಆಗಮಿಸುತ್ತಿರುವ ಕನ್ನೇರಿ ಸ್ವಾಮಿಯ ಪ್ರವೇಶ ತಡೆಯಬೇಕು ಎಂದು ಈಗಾಗಲೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಜಿಲ್ಲಾವಾರು ಬಸವ ಪರ ಸಂಘಟನೆಗಳು, ಮಾನ್ಯ ಮುಖ್ಯ ಮಂತ್ರಿ ಹಾಗು ಗೃಹ ಸಚಿವರಿಗೆ ಮನವಿ ಪತ್ರವನ್ನು ಜಿಲ್ಲಾವಾರು ಬಸವ ಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಸಲ್ಲಿಸಾಗಿದೆ.
ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಅಥವಾ ಕನ್ನೇರಿ ಸ್ವಾಮಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿದಲ್ಲಿ ನಾಡಿನ ಸಮಸ್ತ ಬಸವ ಭಕ್ತರಲ್ಲಿ ತೀವ್ರ ಅಸಮಾಧಾನ ಮೂಡಲಿದ್ದು, ಕಾನೂನು ಸುವ್ಯವಸ್ಥೆಗೆ ಸವಾಲುಗಳು ಉಂಟಾಗುವ ಸಾಧ್ಯತೆ ಇದೆ.
ಅಂತಹ ಪರಿಸ್ಥಿತಿ ಎದುರಾದರೆ ಸಂವಿಧಾನಬದ್ಧ, ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ರೀತಿಯಲ್ಲಿ ತೀವ್ರ ಹೋರಾಟ ನಡೆಸಲು ಬದ್ಧ ಮತ್ತು 28 ನೇ ತಾರಿಖಿಗೆ ಬಸವ ಕಲ್ಯಾಣದ ಹೋರಾಟಕ್ಕೆ ನಮ್ಮ ಕೊಪ್ಪಳ ಜಿಲ್ಲೆಯ, ಎಲ್ಲಾ ಬಸವ ಪರ ಸಂಘಟನೆಗಳು ಹೊರಡಲು ಸಿದ್ಧರಿದ್ದೇವೆ. ನಮ್ಮ ಹಿಂದು ಸಮಾವೇಶದ ವಿರುದ್ಧ ಹೋರಾಟ ಅಲ್ಲ. ಬಸವಾದಿ ಶಿವಶರಣರ ಹೆಸರಿನಲ್ಲಿ ಹಿಂದು ಸಮಾವೇಶ ಮಾಡುವುದರ ಜೊತೆಗೆ, ಪೂಜ್ಯ ರನ್ನೊಳಗೊಂಡು ಬಸವ ಪರ ಸಂಘಟಕರಿಗೆ ಅಶ್ಲೀಲ ಪದ ಬಳಸಿ ದ್ವೇಷ ಭಾಷಣ ಮಾಡುವುದರ ವಿರುದ್ದ ನಮ್ಮ ಹೋರಾಟ ಎಂದು ಬಸವರಾಜ ಹೂಗಾರ ತಿಳಿಸಿದರು. ಕಾರಣ
ಮಹಾರಾಷ್ಟ್ರದ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮಿಯವರು. ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಗಳಿಗೆ ವ್ಯತಿರಿಕ್ತವಾದ, ಪ್ರಜ್ಞಾವಂತ ನಾಗರೀಕ ಸಮಾಜ ತಲೆತೆಗ್ಗಿಸುವಂತಹ ಅಶ್ಲೀಲ ಪದಗಳನ್ನು ಉಪಯೋಗಿಸಿ. ಬಸವಾದಿ ಶರಣರ ಅನುಯಾಯಿಗಳನ್ನು, ಮಠಾಧೀಶರುಗಳನ್ನು ನಿಂದಿಸುವ ಕಾರ್ಯಮಾಡುತ್ತ ಕರ್ನಾಟಕದಲ್ಲಿ ಅಶಾಂತಿಯನ್ನು ಹರಡಲು ಕಾರಣರಾಗಿದ್ದಾರೆ.
ಅದೇ ರೀತಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಸಹ, ಬಸವ ಪರ ಸಂಘಟಕರಿಗೆ ” ಬಡ್ಡಿ ಮಕ್ಕಳು” ಎನ್ನುವ ಪದ ಬಳಸಿ ಮಾತನಾಡಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಭಂಗತುರುವ ದ್ವೇಷಮಯ ಭಾಷಣಗಳನ್ನು ಮಾಡುವ ಮೂಲಕ ಈ ಇಬ್ಬರೂ ಸಂಘರ್ಷಕ್ಕೆ ಮತ್ತು ಉದ್ವಿಗ್ನತೆಗೆ ಕಾರಣರಾಗುತ್ತಿದ್ದಾರೆ.
ಕನ್ನೇರಿ ಸ್ವಾಮಿಗೆ ಸುಪ್ರೀಂಕೋರ್ಟ್ ಕೂಡಾ ಈಗಾಗಲೆ ನಾಗರೀಕ ಸಮಾಜದಲ್ಲಿ ವಾಸಿಸಲು ಯೋಗ್ಯರಲ್ಲವೆಂದು ಛೀಮಾರಿ ಹಾಕಿದ್ದರೂ, ಬಸವಾದಿ ಶರಣರ ಮತ್ತು ಬಸವತತ್ವ ನಿಷ್ಠರನ್ನು ಸದಾ ಕೆಣಕುವ ಹೇಳಿಕೆಗಳನ್ನು ಕೊಡುವ ಮೂಲಕ ಕರ್ನಾಟಕದ ಶಾಂತಿ ನೆಮ್ಮದಿಗೆ ಕಂಟಕವಾಗಿದ್ದಾರೆ.
ಸಕಲ ಮಾನವ ಜನಾಂಗಕ್ಕೆ ಒಳಿತನ್ನು ಬಯಿಸಿದ ಬಸವಾದಿ ಶರಣರ ನಿಂದನೆಯನ್ನು ಬಸವಭಕ್ತರು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಕನ್ನೇರಿ ಸ್ವಾಮಿಯನ್ನು ಬಸವ ಕಲ್ಯಾಣದಲ್ಲಿ ಜೂನ್ನ 28 ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸುವದನ್ನು ನಿರ್ಬಂಧಿಸಿ ಮುಂದೆ ಆಗುವ ಸಂಘರ್ಷ ಮತ್ತು ಅನಾಹುತಗಳನ್ನು ತಡೆಯಬೇಕೆಂದು ಪತ್ರಿಕೆ ಮಾಧ್ಯಮದ ಮೂಲಕ ಕೋರಲಾಗಿದೆ.
ಬಸವರಾಜ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ
