
The Likhai organization has submitted a memorandum urging the simplification of private apps, including the 'Super Sale Saathi' app used to provide information to LIC customers.

ಎಲ್ಐಸಿ ಗ್ರಾಹಕರ ಮಾಹಿತಿ ತಿಳಿಸುವ ಸೂಪರ್ ಸೇಲ್ ಸಾಥಿ ಯಾಪ್ ಸೇರಿ ಖಾಸಗಿ ಯಾಪ್ ಸರಳೀಕರಣಕ್ಕೆ ಆಗ್ರಹಿಸಿ ಲಿಖೈ ಸಂಘಟನೆಯಿಂದ ಮನವಿ ಸಲ್ಲಿಕೆ.

ಕಂತು ಪಾವತಿ,ಲೋನ್,ಮ್ಯಾಚುರಿಟಿ ಸಂಪೂರ್ಣ ಮಾಹಿತಿ ನೀಡುವ ಯಾಪ್ ಗಳ ಸರಳೀಕೃತ ಅಗತ್ಯ.
ಗಂಗಾವತಿ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿಗಳಿಗೆ ಗ್ರಾಹಕರ ಮಾಹಿತಿಯನ್ನು ಬೆರಳಿನ ತುದಿಯಲ್ಲಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಎಲ್ಐಸಿ ಸಂಸ್ಥೆ ಸೂಪರ್ ಸೆಲ್ ಸಾಟಿ ಎನ್ನುವ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಗ್ರಾಹಕರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಂತರ ಇದರಂತೆ ಖಾಸಗಿ ಕಂಪನಿಗಳು ಸಹ ಎಲ್ಐಸಿ ಗ್ರಾಹಕರ ಸಂಪೂರ್ಣ ಮಾಹಿತಿಯನ್ನು ಪ್ರತಿನಿಧಿವಾರು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ್ದು, ಕಳೆದ ಎರಡು ತಿಂಗಳಿನಿಂದ ಎಲ್ಐಸಿ ಯಾಪ್ ಗಳನ್ನು ಬಂದ್ ಮಾಡಲಾಗಿದ್ದು ಇದರಿಂದ ಎಲ್ಐಸಿ ಪ್ರತಿನಿಧಿಗಳು ಗ್ರಾಹಕರ ಮಾಹಿತಿಗಳ ಪಾವತಿ ರಿವೈವಲ್ ಸೇರಿದಂತೆ ಅಗತ್ಯ ಸೇವೆ ಒದಗಿಸಲು ಎಲ್ಐಸಿ ಕಚೇರಿಗೆ ಗ್ರಾಹಕರನ್ನು ಕರೆದುಕೊಂಡು ಬರುವಂತಾಗಿದ್ದು, ಎಲ್ಐಸಿ ಕೇಂದ್ರ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ಕೂಡಲೇ ಸೂಪರ್ ಸೇಲ್ ಸಾಥಿ ಯಾಪ್ ಸೇರಿದಂತೆ ಖಾಸಗಿ ಯಾಪ್ ಗಳನ್ನು ಪುನಃ ಸರಳೀಕರಣಗೊಳಿಸಿ ಆನ್ಲೈನ್ ಮೂಲಕ ದೊರಕುವಂತೆ ಮಾಡಬೇಕು ಎಂದು ಆಗ್ರಹಿಸಿ ಎಲ್ಐಸಿ ಪ್ರತಿನಿಧಿಗಳ ಸಂಘ(ಲಿಖೈ) ಪ್ರತಿನಿಧಿಗಳು ದೇಶ ವ್ಯಾಪಿಯಾಗಿ ಬುಧವಾರ ಎಲ್ಐಸಿ ಕಚೇರಿಗಳ ಮುಂದೆ ಕೇಂದ್ರ ಸರ್ಕಾರ ಮತ್ತು ಎಲ್ಐಸಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಮನವಿ ಪತ್ರವನ್ನು ಸಲ್ಲಿಸಿದರು.
ಗಂಗಾವತಿಯ ಎಲ್ಐಸಿ ಶಾಖಾ ಕಚೇರಿ ಎದುರು ಸ್ಥಳೀಯ ಲಿಖೈ ಸಂಘಟನೆಯ ಪದಾಧಿಕಾರಿಗಳು ಸಹ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಿಖೈ ಸಂಘಟನೆಯ ವಿಭಾಗೀಯ ಖಜಾಂಚಿ ವಲಿಮೋಹಿಯುದ್ದಿನ್,
ಅಧ್ಯಕ್ಷ ಕೆ.ಎಂ.ಮಂಜುನಾಥ,ಕಾರ್ಯದರ್ಶಿ ಹುಸೇನಬಾಷಾ ಜಾಲಹಳ್ಳಿ,ಕೆ.ನಿಂಗಜ್ಜ, ಎಂ.ನಿರುಪಾದಿ ಬೆಣಕಲ್,ಹುಸೇನಬಾಷಾ ಎಸ್.ಕೆ.ಎಚ್.ಈಶ್ವರ,ಶಂಕ್ರಪ್ಪ ಗೆದ್ದಿಕೇರಿ,ರಾಘವೇಂದ್ರ ದೇಸಾಯಿ, ಆಂಜಿನಪ್ಪ ಕರಿಗೌಡ,ಪಂಪಣ್ಣ ಪಟ್ಟಣಶೆಟ್ಟಿ, ವೀರನಗೌಡ,ಬಸವರಾಜ ಸಜ್ಜನ್,ಭಾರತಿ ಆಗಲೂರು,ಕೆ.ವರಲಕ್ಷ್ನಿ,
ಖಾಜವಲಿ, ಶ್ರೀನಿವಾಸ ಕುಲಕರ್ಣಿ,ದುರ್ಗಾಪ್ರಸಾದ,ಸಿದ್ದಾಪೂರ ರಾಘವೇಂದ್ರ ಸೇರಿದಂತೆ ಅನೇಕ ಪ್ರತಿನಿಧಿಗಳಿದ್ದರು.
