ಅಕ್ರಮ ವೈನ್‌ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Officials are reluctant to crack down on illegal wine shops.

ಅಕ್ರಮ ವೈನ್‌ಶಾಪ್ ಗಳ ಮೇಲೆ ಬ್ರೇಕ್ ಹಾಕಲು ಅಧಿಕಾರಿಗಳ ಹಿಂದೇಟು.

ಜಾಹೀರಾತು

ವರದಿ ಪ್ರಕಟವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು.

ಗಂಗಾವತಿ: ನಗರದ ಹೃದಯ ಭಾಗದ ನಗರಸಭೆ ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ “ದಿ ನ್ಯೂ ಸಿ.ಎಲ್-2 ವೈನ್ ಶಾಫ್” ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವೈನ್‌ಶಾಪ್‌ ಮುಂದೆ ಮದ್ಯಪಾನ ಮಾಡಲು ಅವಕಾಶ ನೀಡಲಾಗುತ್ತಿದ್ದು, ಇದು ಸಾರ್ವಜನಿಕರಿಗೆ ಗಂಭೀರ ತೊಂದರೆ ಉಂಟುಮಾಡುತ್ತಿದೆ ಎಂದು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯ್ಯದ್ ಅಸ್ಲಂ ಆರೋಪಿಸಿದ್ದಾರೆ.

ಅಬಕಾರಿ ಕಾಯ್ದೆಯ ಪ್ರಕಾರ ಸಿ.ಎಲ್-2 ಪರವಾನಿಗೆ ಹೊಂದಿರುವ ವೈನ್‌ಶಾಪ್‌ಗಳಿಗೆ ಕೇವಲ ಮದ್ಯವನ್ನು ಪಾರ್ಸೆಲ್ ರೂಪದಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶವಿದ್ದು, ಸ್ಥಳದಲ್ಲೇ ಕುಡಿಯಲು ಅವಕಾಶ ನೀಡುವುದು ಕಾನೂನು ಉಲ್ಲಂಘನೆಯಾಗಿದೆ. ಆದರೆ ಗಂಗಾವತಿಯ ಈ ವೈನ್‌ಶಾಪ್‌ನಲ್ಲಿ ಮಾಲೀಕರು ತಮ್ಮ ಲಾಭಕ್ಕಾಗಿ ಗ್ರಾಹಕರಿಗೆ ಶಾಪ್ ಮುಂಭಾಗದಲ್ಲೇ ನಿಂತು ಮತ್ತು ಕುಳಿತು ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಈ ಪ್ರದೇಶವು ಅತ್ಯಂತ ಜನಸಂದಣಿ ಇರುವ ಪ್ರದೇಶವಾಗಿದ್ದು, ಸಮೀಪದಲ್ಲೇ ತಾಲೂಕು ಬಸ್ ನಿಲ್ದಾಣ, ಐಸ್‌ಕ್ರೀಮ್ ಪಾರ್ಲರ್, ಬೇಕರಿ ಸೇರಿದಂತೆ ಹಲವಾರು ವ್ಯಾಪಾರಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಅಂಜನಾದ್ರಿ ದೇವಸ್ಥಾನಕ್ಕೆ ಹೋಗುವ ಮುಖ್ಯ ಮಾರ್ಗವಾಗಿರುವುದರಿಂದ ಪ್ರತಿದಿನ ಪ್ರವಾಸಿಗರು ಹಾಗೂ ಭಕ್ತರು ವೈನ್ ಶಾಪ್ ಇರುವ ರಸ್ತೆ ಮಾರ್ಗವಾಗಿ ಸಂಚರಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿನಿಯರು ಸಂಚರಿಸಲು ಅಸೌಕರ್ಯ ಎದುರಿಸುತ್ತಿದ್ದಾರೆ.

ಮದ್ಯಪಾನ ಮಾಡುವ ಕೆಲವರು ಸಾರ್ವಜನಿಕರಿಗೆ ಅಸಭ್ಯ ವರ್ತನೆ ತೋರಿಸುತ್ತಿರುವುದು ಮಾತ್ರವಲ್ಲದೆ, ಪ್ರಶ್ನೆ ಮಾಡಿದರೆ ಹಲ್ಲೆಗೆ ಮುಂದಾಗುತ್ತಿರುವ ಘಟನೆಗಳೂ ವರದಿಯಾಗಿವೆ. ಇದರಿಂದ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.

ಈ ಸಂಬಂಧ ಈಗಾಗಲೇ ಏಪ್ರಿಲ್ 10, 2026 ರಂದು ಗಂಗಾವತಿ ಅಬಕಾರಿ ನಿರೀಕ್ಷಕರಿಗೆ ದೂರು ಸಲ್ಲಿಸಿ, ವರದಿಯು ಪ್ರಕಟ ಮಾಡಲಾಗಿತ್ತು, ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದು, ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಕನ್ನಡ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಂ ಪಾಶ ಆರೋಪಿಸಿದ್ದಾರೆ.

ಹೀಗಾಗಿ, ಕರ್ನಾಟಕ ಅಬಕಾರಿ ಕಾಯ್ದೆ, 1965ರ ಸೆಕ್ಷನ್ 29 ಮತ್ತು 30ರ ಅಡಿಯಲ್ಲಿ ಸಂಬಂಧಿತ ವೈನ್‌ಶಾಪ್ ನ ಲೈಸೆನ್ಸ್ ರದ್ದುಪಡಿಸಿ, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಜೊತೆಗೆ ಕರ್ತವ್ಯ ಲೋಪ ತೋರಿದ ಅಬಕಾರಿ ಅಧಿಕಾರಿಗಳ ಮೇಲೂ ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ.

ಸಾರ್ವಜನಿಕರ ಸುರಕ್ಷತೆ ಹಾಗೂ ಸೌಕರ್ಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Total Views: 0
Share This Article