
Youths in Marur village celebrated Basavanna's birth anniversary simply.

ಮರೂರು ಗ್ರಾಮದಲ್ಲಿ ಬಸವಣ್ಣನವರ ಜಯಂತಿಯನ್ನು ಸರಳವಾಗಿ ಆಚರಿಸಿದ ಯುವಕರು.

ವರದಿ: ಬಂಗಾರಪ್ಪ .ಸಿ.
ಹನೂರು:ಶತಮಾನಗಳಿಂದ ಬಂದಿರುವ ಜಾತಿ ತಾರತಮ್ಯದ ವಿರುದ್ದ ಹೋರಾಡಿದ ಶ್ರೀ ಜಗಜ್ಯೋತಿ ವಿಶ್ವಗುರು ಬಸವಣ್ಣನವರು 12 ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ, ಸಹೋದರತೆ, ಸಹಬಾಳ್ವೆ, ಕಾಯಕ ನಿಷ್ಠೆಯ ಆದರ್ಶಗಳನ್ನು ಜಗಕ್ಕೆ ಸಾರಿದ್ದಾರೆ. ಇಂತಹ ದಾರ್ಶನಿಕ ಮಹನೀಯರ ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಗ್ರಾಮದ ಮುಖಂಡರು ತಿಳಿಸಿದರು .
ಮರೂರು ಗ್ರಾಮದಲ್ಲಿ ಯುವಕರು ಅಯೋಜಿಸಿದ ಜಯಂತಿಯಲ್ಲಿ ಮಾತನಾಡಿದ ಯುವಕರು ಅವರ ಆದರ್ಶಗಳ ಬಗ್ಗೆ ಮಾತನಾಡುವ ನಾವುಗಳು ನಂತರ ಮರೆಯುತ್ತೇವೆ. ಸ್ವಾರ್ಥ ಮತ್ತು ನಾನು ಮೇಲು ಎಂಬ ನಾನತ್ವಗಳನ್ನು ಮೈಗೂಡಿಸಿಕೊಂಡರೆ. ಬಸವಣ್ಣ ರವರ ಸಮಾಜ ಸುಧಾರಣೆ ಆಗುವ ನಿಟ್ಟಿನಲ್ಲಿ ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ನೀವು ನಡೆಯಿರಿ ಅದನ್ನು ನೋಡಿ ನಮ್ಮ ಮುಂದಿನ ಪೀಳಿಗೆ ಕಲಿಯುತ್ತದೆ. ಇಂದು ನಾವು ನಮ್ಮ ಮಕ್ಕಳ ಮುಂದೆ ಎನು ಮಾಡುತ್ತೇವೆ ಅದನ್ನಗ ಅವರು ಸಹ ಅನುಸರಿಸುತ್ತಾರೆ ಎಂದರು.
ಇದೇ ಸಮಯದಲ್ಲಿ ಪೊನ್ನಾಚಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶಿವಬಸಪ್ಪ, ಸೇರಿದಂತೆ ಮರೂರು ಗ್ರಾಮಸ್ಥರು ಹಾಜರಿದ್ದರು.
