
Basava Jayanti celebration at the library

ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ

ಕೊಪ್ಪಳ ಏಪ್ರಿಲ್ 21 (ಕರ್ನಾಟಕ ವಾರ್ತೆ): ನಗರದ ಗಣೇಶ ನಗರದ ಮುಖ್ಯ ಶಾಖೆಯಲ್ಲಿ ಹಾಗೂ ಎನ್.ಜಿ.ಓ ಕಾಲೋನಿಯ ಮುಖ್ಯ ಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಸೋಮವಾರ ಬಸವ ಜಯಂತಿ ಆಚರಿಸಲಾಯಿತು.
ಗಣೇಶ ನಗರದ ಶಾಖೆಯಲ್ಲಿ ಓದುಗರೊಂದಿಗೆ ಆಚರಿಸಿದರೆ, ಜಿಲ್ಲಾ ಕೇಂದ್ರ ಗ್ರಂಥಾಲಯದ ಕಛೇರಿಯಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡಿ ಬಸವಣ್ಣ ಕರ್ನಾಟಕ ಅಷ್ಟೇ ಅಲ್ಲ ಇಡೀ ಮನುಕುಲಕ್ಕೆ ಸಕಾರಾತ್ಮಕ ಹಾದಿಯಲ್ಲಿ ಬದುಕಲು ನೆರವಾಗುವಂತ ವಚನಗಳನ್ನು ಕೊಟ್ಟಿದ್ದಾರೆ. ಎಲ್ಲರೂ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುವುದೆ ನಾವು ಮಹನೀಯರಿಗೆ ಸಲ್ಲಿಸುವ ಗೌರವ ಎಂದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ವಿಜಯಲಕ್ಷ್ಮೀ ವಡ್ಡಟ್ಟಿ, ವಿರೇಶ ಮಜ್ಗಿ, ಉಮಾ ಹಳ್ಯಾಳ, ಇದ್ದರು ನಾಗರಾಜನಾಯಕ ಡಿ.ಡೊಳ್ಳಿನ ನಿರೂಪಿಸಿದರು ಬಿ.ಕೊಟ್ರಪ್ಪ ವಂದಿಸಿದರು
