ಬಾಬಾಸಾಹೇಬರು ಆರಾಧಕರ ಸ್ವತ್ತಲ್ಲ, ಅಧ್ಯಯನಶೀಲ,ಕ್ರಿಯಾತ್ಮಕ ಅನುಯಾಯಿಗಳ ಸ್ವತ್ತು-ಪ್ರೊ. ಕರಿಗೂಳಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Babasaheb is not the property of worshippers, but of studious, active followers - Prof. Kariguli

ಬಾಬಾಸಾಹೇಬರು ಆರಾಧಕರ ಸ್ವತ್ತಲ್ಲ, ಅಧ್ಯಯನಶೀಲ,ಕ್ರಿಯಾತ್ಮಕ ಅನುಯಾಯಿಗಳ ಸ್ವತ್ತು-ಪ್ರೊ. ಕರಿಗೂಳಿ

ಜಾಹೀರಾತು


ಗಂಗಾವತಿ: ತಾಲೂಕಿನ ಶ್ರೀರಾಮನಗರದ
ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶಂಕ್ರಪ್ಪ ಎಂ ಮಾತನಾಡಿ . ಡಾ. ಅಂಬೇಡ್ಕರ್ ಅವರು ಬಹುಮುಖ ಪ್ರತಿಭೆಯ ಮಹಾನ್ ವ್ಯಕ್ತಿಯಾಗಿದ್ದು, ಶ್ರೇಷ್ಠ ಆರ್ಥಿಕ ತಜ್ಞ, ರಾಜಕೀಯ ಚಿಂತಕ, ತತ್ವಜ್ಞಾನಿ ಹಾಗೂ ಸಮಾನತೆಯ ಹರಿಕಾರರಾಗಿದ್ದರು ಎಂದು ವಿವರಿಸಿದರು. ಬಾಬಾಸಾಹೇಬರು ಪುಸ್ತಕಪ್ರೇಮಿಯಾಗಿದ್ದು, ಅವರ ಜ್ಞಾನ ಸಂಪತ್ತು ಹಾಗೂ ಚಿಂತನೆಗಳು ಇಂದಿಗೂ ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು. “ಮುಂದೊಂದು ದಿನ ಇಂಥ ಮಹಾನ್ ವ್ಯಕ್ತಿ ಜೀವಂತವಾಗಿದ್ದರೆoಬುದನ್ನು ಜನಾಂಗ ನಂಬದೇ ಹೋಗಬಹುದು” ಎoದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಕರಿಗೂಳಿ ಅವರು ಮಾತನಾಡಿ, ಈ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮಾಡುವುದಕ್ಕೂ ಕೂಡ ಪಟ್ಟಭದ್ರ ಹಿತಾಸಕ್ತಿಗಳು ಬಿಡುತ್ತಿರಲಿಲ್ಲ ಆದರೆ ಇoದು ಸಪ್ತಸಾಗರಾದಾಚೆ ಅವರ ಜಯಂತಿಯನ್ನು ಆಚರಿಸುತ್ತಿರುವುದು ಅವರ ವಿದ್ವತ್ತಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ಅವರ ವಿಚಾರಗಳ ಪ್ರಸ್ತುತತೆಗೆ ಸಾಕ್ಷಿ ಎಂದರು. ಅವರು ಕೇವಲ ಆರಾಧಿಸುವವರ ಸ್ವತಲ್ಲ ಬದಲಾಗಿ ಅಧ್ಯಯನಶೀಲ, ಚಿಂತಾನಶೀಲ ರಚನಾತ್ಮಕ ಕಾರ್ಯಗಳನ್ನು ಮಾಡುವ ಅನುಯಾಯಿಗಳ ಸ್ವತ್ತು, ಬಾಬಾಸಾಹೇಬರ ಮೇರು ಕೃತಿಗಳಲ್ಲೊoದಾದ ‘ಜಾತಿ ವಿನಾಶ’ (Annihilation of Caste) ಎಂಬ ಪುಸ್ತಕವು,ಪ್ರಪಂಚದ ಪ್ರಾಚೀನ ಭಾಷೆಗಳಲ್ಲೊಂದಾದ ಹಿಬ್ರೂ ಭಾಷೆಗೆ ಅನುವಾದಗೊಂಡು, ಆ ಸಮಾಜದಲ್ಲಿ ಉಂಟಾದ ಕ್ಷಿಪ್ರ ಸಾಮಾಜಿಕ ಬದಲಾವಣೆಗಳ ಮೇಲೇಯೂ ಬೆಳಕು ಚೆಲ್ಲುತ್ತಿದೆ, ಜಗತ್ತಿನ ಇತರೆ ಭಾಗದ ನಾಗರಿಕರ ಅವಶ್ಯಕತೆಗಳಿಗೂ ಸ್ಪಂಧಿಸುವ ವಿಚಾರಧಾರೆ ಬಾಬಾಸಾಹೇಬರ ಕೃತಿಗಳಿಗಿದೆ ಅಂತೆಯೇ ಬಾಬಾಸಾಹೇಬರನ್ನು ಜಾಗತಿಕ ಸಮಾನತೆಯ ತತ್ವಜ್ಞಾನಿ ಎಂದು ಕರೆಯುವುದು.
ಕಾರ್ಯಕ್ರಮದಲ್ಲಿ ಅಧ್ಯಾಪಕರಾದ
ಡಾ.ಸರ್ಫರಾಜ್ ಅಹ್ಮದ್, ಐಕ್ಯೂಎಸಿ ಸಂಚಾಲಕರಾದ ರವಿಕುಮಾರ, ಶಶಿಕುಮಾರ್,ಕಚೇರಿ ಸಿಬ್ಬಂದಿಯಾದ ಜಬೀನ, ವಿನಾಯಕ,ಉಪನ್ಯಾಸಕರಾದ ಈಶಪ್ಪ, ಅಯ್ಯಪ್ಪ, ಪೆನಾಜ ಹಾಗೂ ಸಹಾಯಕ ಸಿಬ್ಬಂದಿ ಉಪಸ್ಥಿತರಿದ್ದರು.

Total Views: 0
Share This Article