ಮತದಾರರ ಪಟ್ಟಿಯ ಪರಿಷ್ಕರಣಗೆ SiR ಗೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿಪರಶುರಾಮ್ ಕೆರೆಹಳ್ಳಿ.

H.Mallikarjun
H.Mallikarjun - Kalyanasiri
1 Min Read

Parashuram Kerehalli, the public cooperated with the SiR program for the revision of the voter list.

ಮತದಾರರ ಪಟ್ಟಿಯ ಪರಿಷ್ಕರಣಗೆ SiR ಗೆ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಹಕರಿಸಿ ಪರಶುರಾಮ್ ಕೆರೆಹಳ್ಳಿ.

ಕೊಪ್ಪಳ :– ನಗರದ 3ನೇ ವಾರ್ಡಿನ ಕುವೆಂಪು ನಗರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಗೆ SiR ಗೆ ಮನೆ ಮನೆಗೆ ಕಾರ್ಯಕ್ರಮಕ ಚಾಲನೆಗೊಂಡಿತ್ತು. ಪ್ರತಿಯೊಬ್ಬ ಅರ್ಹನಾಗರಿಕರು ಸಕ್ರಿಯವಾಗಿ ಭಾಗವಹಿಸಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಪರಿಷ್ಕಕರಣೆ ಮಾಡಿಸಿಕೊಳ್ಳಬೇಕು, ಎಂದು ನಗರಸಭೆ ನಾಮ ನಿರ್ದೇಶನ ಸದಸ್ಯರು (ಆಶ್ರಯ ಕಮಿಟಿ) ಹಾಗೂ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರು ಎಸ್ ಸಿ ಘಟಕ ಪರಶುರಾಮ ಕೆರೆಹಳ್ಳಿ ರವರು ಪತ್ರಿಕೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಪ್ರತಿಯೊಬ್ಬ ನಾಗರಿಕನು SiR ಗೆ ಬಗ್ಗೆ ತಿಳಿದುಕೊಂಡು, ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ, ಎಚ್ಚರವಹಿಸಿ ಮತದಾರರ ಪರಿಷ್ಕರಣಗೆ SiR ಗೆ ಕಾರ್ಯಕ್ಕೆ ಸಹಕಾರ ನೀಡಿ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸ್ಥಳಾಂತರ ಅರ್ಜಿಗಳನ್ನು ಸಲ್ಲಿಸಬೇಕು, ಚುನಾವಣಾ ಅಧಿಕಾರಿಗಳಿಗೆ, BLO ಗಳಿಗೆ, ಹಾಗೂ BLA ಗಳಿಗೆ ಸಂಪೂರ್ಣ ಸಹಕಾರ ನೀಡಿ, ತಮ್ಮ ಹೆಸರು ವಿವಾರಗಳೊಂದಿಗೆ ನೋಂದಾಯಿಸಿಕೊಳ್ಳಬೇಕು ಎಂದು ಪತ್ರಿಕ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ..
ಈ ಸಂದರ್ಭದಲ್ಲಿ BLO ಗಳಾದ ಮಂಜುಳಾ ಬಳಗೇರಿ, ನಗರಸಭೆ ಸಿಬ್ಬಂದಿಗಳಾದ ಶಿವಪ್ಪ ಗಿಣಿಗೇರಿ, ಸಲೀಂ ಸಾಬ್ ಕೊಪ್ಪಳ, BLA ಗಳಾದ ಸಕ್ರಪ್ಪ ಕೋಟೆ, ಮಲ್ಲಿಕಾರ್ಜುನ್ ಪೂಜಾರ್, ಹನುಮೇಶ ಹೂಗಾರ್, ಆಸಿಫ್ ಖಾನ್ ಹಾಣಗಿ, ಧನರಾಜ್ ದೊಡ್ಡಮನಿ, ಆಶಾ ಕಾರ್ಯಕರ್ತೆ ಪೂರ್ಣಿಮಾ. ನಗರಸಭೆ ನಾಮ ನಿರ್ದೇಶನ ಸದಸ್ಯರು (ಆಶ್ರಯ ಕಮಿಟಿ) ಪರಶುರಾಮ ಕೆರೆಹಳ್ಳಿ ಉಪಸ್ಥಿತರಿದ್ದರು.

Total Views: 0
Share This Article