
Dr Siddarama Sharan Beldala and Dr Bhimrao Patil to be conferred with Basava Bhushan Award

ಡಾ ಸಿದ್ದರಾಮ ಶರಣರು ಬೆಲ್ದಾಳ ಮತ್ತು ಡಾ ಭೀಮರಾವ ಪಾಟೀಲ ಇವರಿಗೆ ಬಸವ ಭೂಷಣ ಪ್ರಶಸ್ತಿ

ಪುಣೆ ; ಬಸವತತ್ವ ಪ್ರಸಾರವು 12ನೇ ಶತಮಾನದ ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ಮತ್ತು ಶ್ರೇಣಿರಹಿತ ಸಮಾಜದ ಕಲ್ಪನೆಗಳನ್ನು ಸಾರುವ ಚಳುವಳಿಯಾಗಿದೆ. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಬಸವಣ್ಣನವರ ವಚನ ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಲ್ಲಿ ಬಿತ್ತರಿಸಿ ಸಾರ್ವಕಾಲಿಕ ಸಮಾನತೆ ಶಾಂತಿ ಪ್ರೀತಿ ಸಮರಸವನ್ನು ತಂಡ ಅಪೂರ್ವ ಕ್ರಾಂತಿ ಗೈದರು.
ಬಸವತತ್ವ ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಇಬ್ಬರು ಅನುಭಾವಿಗಳು ಸಾಹಿತಿಗಳು ಚಿಂತಕರು ವಾಗ್ಮಿಗಳನ್ನು ಗುರುತಿಸಿ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ ಫೇರ್ ಟ್ರಸ್ಟ್ ಪುಣೆ ಇವರು ಸಂಯುಕ್ತವಾಗಿ ಈ ವರ್ಷದ ಬಸವ ಭೂಷಣ ಪ್ರಶಸ್ತಿಯನ್ನು
ಡಾ ಸಿದ್ದರಾಮ ಶರಣರು ಬೆಲ್ದಾಳ ಮತ್ತು ಡಾ ಭೀಮರಾವ ಪಾಟೀಲ ಇವರಿಗೆ ನೀಡಲಾಗಿದೆ. ಇದೆ ದಿನಾಂಕ 18 ರಂದು ಪುಣೆಯ ಅಕ್ರುಡಿಯ ಗ ಡಿ ಮಾದ್ಗುಲ್ಕರ ಸಭಾಭವನದಲ್ಲಿ ಬೆಳಿಗ್ಗೆ 10 ಘಂಟೆಗೆ ಪ್ರಶಸ್ತಿಗಳನ್ನು ಬಸವ ಜಯಂತಿಯ ಆಚರಣೆಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಬಸವ ಜಯಂತಿ ಪ್ರತಿಭಾವಂತ ಮಕ್ಕಳ, ಸಮಾಜ ಕಾರ್ಯಕರ್ತರ ಸಾಧಕರ ಸತ್ಕಾರ ಮತ್ತು ವಧು ವಾರ ಸಮಾವೇಶದ ಈ ಬ್ರಹತ್ ಕಾರ್ಯಕ್ರಮವನ್ನು ಪುಣೆಯ ಖ್ಯಾತ ಉದ್ದಮಿ ಶ್ರೀ ಬಸವರಾಜ ಕುಲ್ಲೊಳ್ಳಿ ಉದ್ಘಾಟಿಸಲಿದ್ದಾರೆ, ಸಭೆಯ ಅಧ್ಯಕ್ಷತೆಯನ್ನು ಶ್ರೀ ಚಂದ್ರಶೇಖರ ಗಾಣಿಗೇರ ವಹಿಸಿಕೊಳ್ಳುವರು, ಕೆನಡಾದ ಖ್ಯಾತ ಅಂತಾರಾಷ್ಟ್ರೀಯ ವೈದ್ಯರಾದ ಮತ್ತು ಆರೋಬ ದ್ವೀಪದ ಆರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸ್ಕೂಲ್ ಆಫ ಮೆಡಿಸಿನ್ ಇದರ ಮುಖ್ಯ ಕಾರ್ಯ ನಿರ್ವಾಹಕರು ಮತ್ತು ಡೀನ್ ಡಾ ಅಜಿತ ರಾಮಪುರೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಶ್ರೀ ಶ್ರೀಕಾಂತ ಸ್ವಾಮೀ ಮತ್ತು ಶ್ರೀಮತಿ ರಾಜಶ್ರೀ ಸ್ವಾಮೀ
ಶ್ರೀ ಶಿವಾನಂದ ನಂದೆಪ್ಪಗೌಡರ ಇವರು ಅತಿಥಿಗಳಾಗಿ ಭಾಗವಹಿಸುತ್ತಾರೆ.
ಶೈಕ್ಷಣಿಕ ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾದ ಸಾಧನೆ ಮಾಡಿದ ಸಾಧಕರಿಗೆ ಗೌರವ ಸತ್ಕಾರ ಮಾಡಲಾಗುವುದು. ಅನೇಕ ಸಂಗೀತ ನೃತ್ಯ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ಜರುಗುವವು. ಪುಣೆ ಮುಂಬೈ ಸಾತಾರಾ ಬೀದರ ಬಸವಕಲ್ಯಾಣ ಬೆಳಗಾವಿ ನಾಂದೇಡ ಲಾತೂರ ಮುಂತಾದ ಪ್ರದೇಶಗಳಿಂದ ಬಸವಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಕಾರ್ಯಕ್ರಮದ ನಂತರ ಮಹಾಪ್ರಸಾದವನ್ನು ಏರ್ಪಡಿಸಲಾಗಿದೆ.
