
3rd Koppal District Conference of Agricultural Laborers to be held in Gangavathi tomorrow

ನಾಳೆ ಗಂಗಾವತಿಯಲ್ಲಿ ಕೃಷಿ ಕೂಲಿಕಾರರ 3ನೇ ಕೊಪ್ಪಳ ಜಿಲ್ಲಾ ಸಮ್ಮೇಳನ

ಗಂಗಾವತಿ:ವಿಕಸಿತ ಭಾರತ ಜ.ರಾಮ್‌ಜಿ, ಉದ್ಯೋಗ ಭರವಸೆ, ಅಜೀವಿಕ ಅಭಿಯಾನ (ಗ್ರಾಮೀಣ) ಮಸೂದೆ- 2025 ನ್ನು ರದ್ದು ಪಡಿಸಲು, ಸರಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾ ಕೊಡಲು ಒತ್ತಾಯಿಸಿ, ನಿವೇಶನ ರಹಿತರಿಗೆ ಮನೆ, ನಿವೇಶನ ಕೊಡಲು ಒತ್ತಾಯಿಸಿ ಕೃಷಿ ಕೂಲಿಕಾರರ 3ನೇ ಕೊಪ್ಪಳ ಜಿಲ್ಲಾ ಸಮ್ಮೇಳನವನ್ನು ಶ್ರೀ ಚನ್ನಬಸವ ಸ್ವಾಮಿ ಕಲಾ ಮಂದಿರ, ಶಿವೆ ಟಾಕೀಸ್ ಹಿಂದುಗಡೆ, ಗಂಗಾವತಿ ಯಲ್ಲಿ ದಿನಾಂಕ 09-10 ಏಪ್ರಿಲ್ ರಂದು 2 ದಿನಗಳ ಕಾಲ ನಡೆಯಲಿದೆ.
ಈ ಸಮ್ಮೇಳನಕ್ಕೆ ಕೇಂದ್ರ ಪ್ರಧಾನ ಕಾರ್ಯದರ್ಶಿ ಯಾದ ಕಾಮ್ರೇಡ್ ಬಿ. ವೆಂಕಟ್ ರವರು, ರಾಜ್ಯ ಉಪಾಧ್ಯಕ್ಷ ಜಿ. ಎನ್ ನಾಗರಾಜು ಮತ್ತು ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೆರ ಆಗಮಿಸುತಿದ್ದು ಈ ಸಮ್ಮೇಳನದ್ಲಲಿ ಜಿಲ್ಲೆಯ ಕೃಷಿ ಕೂಲಿಕಾರರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ನಿರ್ಣಯ ಕೈ ಗೊಳ್ಳುತ್ತಿದ್ದೂ ಜಿಲ್ಲೆಯ ದುಡಿಯುವ ವರ್ಗ ಕೃಷಿ ಕೂಲಿಕಾರರು ಈ ಸಮ್ಮೇಳನದಲ್ಲಿ ಭಾಗಿಯಾಗಿ ಸಮ್ಮೇಳನವನ್ನು ಯಶಸ್ವಿ ಮಾಡಲು ಕೋರಿದೆ
ಆಧುನೀಕರಣದ ಹೆಸರಿನಲ್ಲಿ ಅತಿಯಾದ ಯಂತ್ರಗಳ ಬಳಕೆಯಿಂದ ಕೃಷಿಯಲ್ಲಿ ಉದ್ಯೋಗದ ದಿವಸಗಳು ಕಡಿಮೆಯಾಗುತ್ತಲೇ ನಡೆದಿದೆ. ಒಂದೆಡೆ ಕೃಷಿಕರು ಕಳಪೆ ಗೊಬ್ಬರ, ಬೀಜ, ಕ್ರಿಮಿನಾರಕ, ರಸ್ತೆ ವಿದ್ಯುತ್, ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಹೀಗೆ ಹಲವಾರು ಸಂಕಷ್ಟಗಳ ಜೊತೆಗೆ ರೈತರು ಹವಾಮಾನ ವೈಪರಿತ್ಯ ಹೀಗೆ ನೂರಾರು ಸಮಸ್ಯೆಗಳ ಮಧ್ಯದಲ್ಲಿ ರೈತರು ಕೃಷಿಯಿಂದ ಹಿಂದೆ ಸರೆಯುತ್ತಿದ್ದಾರೆ. ಕೂಲಿಕಾರರ ಮಹತ್ವಾಕಾಂಕ್ಷಿ ಕಾಯಿದೆಯಾದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯಿದೆ 2005ನ್ನು ರದ್ದುಪಡಿಸಲಾಗಿದೆ, ಈ ಕಾಯಿದೆಯನ್ವಯ ಕೂಲಿಕಾರರ ಬದುಕಿಗೆ ಸ್ವಲ್ಪು ಸಹಾಯವಾಗಿತ್ತು. ಅದಕ್ಕಾಗಿ 100 ದಿವಸದ ಬದಲಿಗೆ 200 ದಿವಸ ಕೆಲಸ 600/- ರೂ. ಕೇಳಲಾಗಿತ್ತು. ಆದರೆ ಈಗ ಕೇಂದ್ರ ಸರಕಾರ ಈ ಕಾಯಿದೆಯನ್ನು ರದ್ದುಮಾಡಿ ಜಿ.ರಾಮ್ ಜಿ ಕಾಯಿದೆಯನ್ನು ಜಾರಿಗೆ ತಂದಿದ್ದಾರೆ. ಈ ಕಾಯಿದೆಯಲ್ಲಿ ಕೂಲಿಕಾರರಿಗೆ ಕೆಲಸದ ಭರವಸೆಯೇ ಇಲ್ಲ. ಮತ್ತು ಕೂಲಿ ಸಿಗುತ್ತದೆ ಎಂಬ ಭರವಸೆಯೂ ಇಲ್ಲ. ಹೀಗಾಗಿ ಈ ಕಾಯಿದೆ ರದ್ದುಪಡಿಸಲು ಸಂಘಟದಯು ಜಿಲ್ಲೆಯಾದ್ಯಂತ ಮತ್ತು ಎಲ್ಲಾ ರಾಜ್ಯಾದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಲಾಗುತ್ತದೆ. ಕೇಂದ್ರ ಸರಕಾರವನ್ನು ಈ ಕಾಯಿದೆ ರದ್ದುಪಡಿಸಲು ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಯುವಜನ ಸಂಘಟನೆಗಳು ಮತ್ತು ಸಮಾನ ಮನಸ್ಯ ಎಲ್ಲಾ ಸಂಘಟನೆಗಳನ್ನು ಕೂಡಿಸಿಕೊಂಡು ಇಡೀ ದೇಶದ ಮೂಲೆಮೂಲೆಯಲ್ಲಿ ತೀವ್ರತರವಾದ ಹೋರಾಟ ನಡೆಸಲು ತೀರ್ಮಾನಿಸಿದೆ.
ಅದೇ ರೀತಿ ಸುಮಾರು 30-40 ವರ್ಷದಿಂದ ಸರಕಾರಿ ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ಕೊಡಬೇಕು ಮತ್ತು ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ನಿವೇಶನ ರಹಿತರಿಗೆ ಮನೆ ನಿವೇಶನ ಕೊಡಬೇಕೆಂದು ಜೊತೆಗೆ ಕೊಪ್ಪಳದ ವಾಯು ಮಾಲಿನ್ಯದ ಬಗ್ಗೆ ಮತ್ತು ಕೃಷಿಗೆ ಪೂರಕವಾದ ಸಣ್ಣ ನೀರಾವರಿಯಾದ ಕೆರೆ ನೀರಿನಿಂದ ನೀರಾವರಿ ಮತ್ತು ಜಿಲ್ಲೆಯ ಪ್ರಮುಖ ಏತ ನೀರಾವರಿಗಳ ಬಗ್ಗೆ ಸಿಂಗಟಾಲೂರ ಮತ್ತು ಸವಲ ಸಮಾನಾಂತರ ಜಲಾಶಯದ ಬಗ್ಗೆಯೂ ಈ ಸಮ್ಮೇಳನದಲ್ಲಿ ಚರ್ಚೆ ನಡೆಸಿ ಮುಂದೆ ಹೋರಾಟ ನಡೆಸಲು ತೀರ್ಮಾನಿಸಲಾಗುತ್ತದೆ. ಅದಕ್ಕಾಗಿ ಸಾರ್ವದನಿಕರೆಲ್ಲರೂ ಪಕ್ಷಬೇಧ ಮರೆತು ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
