ಬೀದಿವ್ಯಾಪಾರಿಗಳ ಸಂಘದ  ತಾಲೂಕ ಅಧ್ಯಕ್ಷ ಸೈಯ್ಯದ್ ಬುರ್ಹಾನುದ್ದೀನ್ಎ.ಐ.ಸಿ.ಸಿ.ಟಿ.ಯು ಸಂಘಟನೆಗೆ ರಾಜೀನಾಮೆ.ಐ.ಎಫ್.ಟಿ.ಯು ಸಂಘಟನೆಗೆ ಸೇರ್ಪಡೆ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Syed Burhanuddin, Taluk President of the Street Vendors' Association, resigns from the AICCTU organization.
Joins the IFTU organization.

ಬೀದಿವ್ಯಾಪಾರಿಗಳ ಸಂಘದ  ತಾಲೂಕ ಅಧ್ಯಕ್ಷ ಸೈಯ್ಯದ್ ಬುರ್ಹಾನುದ್ದೀನ್
ಎ.ಐ.ಸಿ.ಸಿ.ಟಿ.ಯು ಸಂಘಟನೆಗೆ ರಾಜೀನಾಮೆ.
ಐ.ಎಫ್.ಟಿ.ಯು ಸಂಘಟನೆಗೆ ಸೇರ್ಪಡೆ

ಜಾಹೀರಾತು

ಗಂಗಾವತಿ: ನಗರದಲ್ಲಿನ ಬೀದಿ ವ್ಯಾಪಾರಿಗಳಿಗೆ ಆಗುತ್ತಿರುವ ಕಿರುಕುಳಕ್ಕೆ ಎ.ಐ.ಸಿ.ಸಿ.ಟಿ.ಯು ಸಂಘಟನೆ ಯಾವುದೇ ರೀತಿ ಬೀದಿ ವ್ಯಾಪಾರಿಗಳ ಪರ ನಿಂತು ಹೋರಾಟ ಮಾಡದೇ, ಬೀದಿ ವ್ಯಾಪಾರಿಗಳಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಕ್ಕೆ ಇಂಡಿಯನ್ ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ (IFTU) ಸಂಘದ ಅಡಿಯಲ್ಲಿನ ಬೀದಿ ವ್ಯಾಪಾರಿಗಳ ಸಂಘದ ಗಂಗಾವತಿ ತಾಲೂಕ ಅಧ್ಯಕ್ಷ ಸೈಯ್ಯದ್ ಬುರ್ಹಾನುದ್ದೀನ್ ಬೇಸರಗೊಂಡ ಎ.ಐ.ಸಿ.ಸಿ.ಟಿ.ಯು ಸಂಘಟನೆಗೆ ಜೂನ್-23 ಮಂಗಳವಾರ ರಾಜೀನಾಮೆ ಸಲ್ಲಿಸಿರುತ್ತಾರೆ.
ಸೈಯ್ಯದ್ ಬುರ್ಹಾನುದ್ದೀನ್ ಅವರು ಮುಂದಿನ ಹೋರಾಟಗಳನ್ನು ರೂಪಿಸಲು ಹಿರಿಯ ಕಾರ್ಮಿಕ ಹೋರಾಟಗಾರ ಜೆ. ಭಾರಧ್ವಾಜ್ ನೇತೃತ್ವದಲ್ಲಿ IFTU ಸಂಘಟನೆಯನ್ನು ಸೇರ್ಪಡೆಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಜೆ. ಭಾರಧ್ವಾಜ್ ಅವರು ಮಾತನಾಡಿ, ಗಂಗಾವತಿ ನಗರಸಭೆ ಅಧಿಕಾರಿಗಳು ಸುಮಾರು 3000 ಬೀದಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದ್ದಾರೆ. ನಗರಸಭೆ ಅಧಿಕಾರಿಗಳು ಈ ಕೂಡಲೇ ಕರ್ನಾಟಕ ಬೀದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ 2014 ರಂತೆ ಯಾವುದೇ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸದೇ ಅವರು ವ್ಯಾಪಾರ ಮಾಡುವ ಸ್ಥಳದಲ್ಲಿಯೇ ವ್ಯಾಪಾರಕ್ಕಾಗಿ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ನಮ್ಮ IFTU ಸಂಘಟನೆ ಉಗ್ರ ಹೋರಾಟಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

Total Views: 0
Share This Article