
Child Enrollment Movement for the Survival of Government Schools - Unique Program by Gundamma Camp Residents

ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಕ್ಕಳ ದಾಖಲಾತಿ ಆಂದೋಲನ….


( ಗುಂಡಮ್ಮ ಕ್ಯಾಂಪ್ ನಿವಾಸಿಗಳಿಂದ ವಿಶಿಷ್ಟ ಕಾರ್ಯಕ್ರಮ)
ಗಂಗಾವತಿ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಇಲ್ಲಿನ ನಗರಸಭೆ ವ್ಯಾಪ್ತಿಯ ಗುಂಡಮ್ಮ ಕ್ಯಾಂಪ್ ಸರ್ಕಾರಿ ಶಾಲೆಯ ಶಿಕ್ಷಕರು ಸೇರಿದಂತೆ ಅಲ್ಲಿನ ನಿವಾಸಿಗಳು ಮಕ್ಕಳ ದಾಖಲಾತಿ ಆಂದೋಲನವನ್ನು ನಡೆಸುವುದರ ಮೂಲಕ
ಕನ್ನಡ ಶಾಲೆಯ ರಕ್ಷಣೆಗಾಗಿ ಮುಂದಾಗಿರುವುದು ಸಾರ್ವಜನಿಕ ವಲಯದಿಂದ ಮುಕ್ತ ಕಂಠ ಪ್ರಶಂಸೆಗೆ ಪಾತ್ರವಾಗಿದೆ. ಶೈಕ್ಷಣಿಕ ವರ್ಷ 2026 ಹಾಗೂ 27ನೆಯ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ದಾಖಲಾತಿ ಆಂದೋಲನವು ಸಾರ್ವಜನಿಕ ಆಂದೋಲನವಾಗಿ ಮಾರ್ಪಟ್ಟಿದೆ.

ಈ ಸಂದರ್ಭದಲ್ಲಿ ಎಂ ಕೆ ಉಲ್ಲಾಸ್, ಸಿದ್ದು ಗೌಳಿ,ಹೆಚ್. ಮಲ್ಲಿಕಾರ್ಜುನ, ದೇವರಾಜ್ ಸೇರಿದಂತೆ ಅಲ್ಲಿನ ವಾರ್ಡಿನ ನಿವಾಸಿಗಳ ತುಂಬು ಹೃದಯದ ಸಹಕಾರದಿಂದ ಪ್ರತಿಯೊಂದು ಮನೆ ಮನೆಗೆ ತೆರಳಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ವಿಶೇಷವಾಗಿ ಹಲವು ದಶಕಗಳಿಂದ ಕಾರ್ಯನಿರ್ವ ಸುತ್ತಿರುವ ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದ್ದನ್ನು ಗಮನಿಸಿದರೆ ಆ ವಾರ್ಡಿನ ನಿವಾಸಿಗಳಲ್ಲಿರುವ ಕನ್ನಡದ ಬಗ್ಗೆ ಪ್ರೇಮ ಹಾಗೂ ಶಾಲೆಗಳ ಉಳಿವುಗಾಗಿ

ನಡೆಸುತ್ತಿರುವ ಆಂದೋಲನ ನಿಜಕ್ಕೂ ಮೆಚ್ಚುವಂತದ್ದು. ವಿಶೇಷವಾಗಿ ಶಾಲೆಯಲ್ಲಿ ಸರ್ಕಾರದ ಸೌಲಭ್ಯಗಳ ಕುರಿತು ಗುಣಮಟ್ಟದ ಶಿಕ್ಷಣ ಉತ್ತಮ ಶಿಕ್ಷಕರಿಂದ ಪಾಠ ಪ್ರವಚನ ಚಟುವಟಿಕೆ ಆಧಾರಿತ ಬೋಧನೆ ಸೇರಿದಂತೆ ಸರಕಾರದಿಂದ ದೊರೆಯಬಹುದಾದ ಪಠ್ಯಪುಸ್ತಕ ಬಿಸಿ ಊಟ ಯೋಜನೆ ,
ಕ್ಷೀರ ಭಾಗ್ಯ ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಮಹತ್ವ ಯೋಜನೆಗಳ ಕುರಿತು ಪಾಲಕರಿಗೆ ಮನವರಿಕೆ ಮಾಡಿ ಕನ್ನಡ ಶಾಲೆಗಳನ್ನು ಉಳಿಸುವ ಬೆಳೆಸುವ ಕಾರ್ಯಕ್ಕೆ ಸರ್ವ ಪಾಲಕರು ಮುಂದಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆ ಸನ್ನಿಕ್. ಖಾಜಾ ಸಾಬ್ ಮಾಧ್ಯಮದೊಂದಿಗೆ ಮಾತನಾಡಿ ಇದು ಒಂದು ದಿನದ ದಾಖಲಾತಿ ಆಂದೋಲನ ಅಲ್ಲ ಸರ್ ಇಂದು ಆರಂಭಗೊಂಡ ಈ ಆಂದೋಲನವನ್ನು ಜೂನ್ ತಿಂಗಳಲ್ಲಿ ಆರಂಭವಾಗುವ ಶೈಕ್ಷಣಿಕ ನೂತನ ವರ್ಷದ ವರೆಗೆ ಮಕ್ಕಳ ದಾಖಲಾತಿ ಆಂದೋಲನ ನಡೆಸಿ ಶಾಲೆಗೆ ಹೆಚ್ಚು ಮಕ್ಕಳನ್ನು ಸೇರಿಸುವುದರ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಸಂಕಲ್ಪವನ್ನು ವಾರ್ಡಿನ ಮಹಾಜನತೆ ಹೊಂದಿದ್ದಾರೆ ಎಂದು ತಿಳಿಸಿದರು.

ಒಟ್ಟಾರೆ ಇದೆಲ್ಲವನ್ನು ಗಮನಿಸಿ ನೋಡಿದಾಗ ಈ ಮಕ್ಕಳ ದಾಖಲಾತಿ ಆದರೂ ಇತರ ದಾಖಲಾತಿ ಕಡಿಮೆ ಇರುವ ಶಾಲೆಗಳಿಗೆ ಮಾದರಿ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಹೇಳಬಹುದು.

ಇವರೊಂದಿಗೆ ಶಾಲೆಯ ಮುಖ್ಯ ಗುರುಗಳಾದ ಶ್ರೀನಿವಾಸ್ ಶಿಕ್ಷಕರುಗಳಾದ ಪ್ರಕಾಶ್ ಸೇರಿದಂತೆ ಅಂಗನವಾಡಿಯ ಕಾರ್ಯಕರ್ತರು ಶಾಲಾ ಅಭಿವೃದ್ಧಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯ ವಾರ್ಡಿನ ಯುವಕರು ಭಾಗವಹಿಸಿದ್ದರು
