FID is mandatory to avail fertilizer and departmental schemesರಸಗೊಬ್ಬರ ಹಾಗೂ ಇಲಾಖೆಯ ಯೋಜನೆಗಳ ಲಾಭ ಪಡೆಯಲು ಎಫ್‌ಐಡಿ ಕಡ್ಡಾಯ

ಕೊಪ್ಪಳ ಏಪ್ರಿಲ್ 02, (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿನಿಂದ ಕೆ-ಕಿಸಾನ ತಂತ್ರಾಂಶದ ಮೂಲಕವೇ ರೈತರಿಗೆ ರಸಗೊಬ್ಬರ ವಿತರಣೆ ಮಾಡಲು ತಿಳಿಸಿದನ್ವಯ ಹಾಗೂ ಕೃಷಿ ಇಲಾಖೆಯ ಪ್ರಮುಖ ಯೋಜನೆಗಳ ಲಾಭ ಪಡೆಯಲು ರೈತರು ಕಡ್ಡಾಯವಾಗಿ ಎಫ್‌ಐಡಿ ಯನ್ನು ಹೊಂದಿರಬೇಕು.
ರೈತರ ಎಲ್ಲಾ ಸರ್ವೇ ನಂಬರ್ ಆ ಎಫ್‌ಐಡಿ ಗೆ ಲಿಂಕ್ ಆಗಿರಬೇಕು. ಆದ ಕಾರಣ ರೈತರು ಈಗಾಗಲೇ ಎಫ್‌ಐಡಿ ಯನ್ನು ಹೊಂದಿದ್ದಲ್ಲಿ ಅಥವಾ ಹೊಂದಿರದೆ ಇದ್ದಲ್ಲಿ ತಮ್ಮ ಎಲ್ಲಾ ಪಹಣಿಯನ್ನು ಹಾಗೂ ಆಧಾರಕಾರ್ಡಗಳನ್ನು ತೆಗೆದುಕೊಂಡು ಸಮೀಪದ ರೈತ ಸಂಪರ್ಕ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಗ್ರಾಮ್ ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕು.
ಎಫ್‌ಐಡಿ ಯನ್ನು ಹೊಂದಿದ್ದಲ್ಲಿ ನಿಮ್ಮ ಎಲ್ಲಾ ಸರ್ವೇ ನಂಬರ್‌ಗಳನ್ನು ಆ ಎಫ್‌ಐಡಿ ಗೆ ಲಿಂಕ್ ಮಾಡಿಸಿಕೊಳ್ಳಲು ಹಾಗೂ ಎಫ್‌ಐಡಿ ಯನ್ನು ಹೊಂದಿರದೆ ಇದ್ದಲ್ಲಿ ಹೊಸದಾಗಿ ಎಫ್‌ಐಡಿ ಯನ್ನು ಸೃಜಿಸಿಕೊಳ್ಳಬೇಕು (ಸೃಜಿಸಿಕೊಳ್ಳಲು ಅಗತ್ಯ ದಾಖಲಾತಿಗಳೊಂದಿಗೆ ಕೇಂದ್ರಗಳನ್ನು ಸಂಪರ್ಕಿಸಬೇಕು) ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

