ಲೈವ್ ವೈರ್ ಕಟ್ ಆಗಿದ್ದರೂ ನಿರ್ಲಕ್ಷ್ಯ, ಕಣ್ಣು ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳು

H.Mallikarjun
H.Mallikarjun - Kalyanasiri
2 Min Read

Negligence despite a live wire snapping; HESCOM officials turned a blind eye.

ಲೈವ್ ವೈರ್ ಕಟ್ ಆಗಿದ್ದರೂ ನಿರ್ಲಕ್ಷ್ಯ, ಕಣ್ಣು ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳು

ಜಾಹೀರಾತು

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಶಿವಯೋಗಿ ನಗರದಲ್ಲಿ ಕಣ್ಣು ಮುಚ್ಚಿ ಕುಳಿತ ಹೆಸ್ಕಾಂ ಅಧಿಕಾರಿಗಳು: ಲೈವ್ ವೈರ್ ಕಟ್ ಆಗಿದ್ದರೂ ನಿರ್ಲಕ್ಷ್ಯ, ಭಾರಿ ಅನಾಹುತಕ್ಕೆ ಸಂಭವಿಸಿಲ್ಲ ಇನ್ನಾದರೂ ಎಚ್ಚರಿಸಿಕೊಳ್ಳುತ್ತಾರೆ ಸಂಬಂಧಪಟ್ಟ ಅಧಿಕಾರಿಗಳು?


ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವಯೋಗಿ ನಗರದ ತಹಶೀಲ್ದಾರ್ ಕಚೇರಿಯ ಹಿಂಭಾಗದಲ್ಲಿ ಭಾರಿ ಅಪಾಯವೊಂದು ಹೊಂಚುಹಾಕಿ ಕುಳಿತಿದೆ. ಇಲ್ಲಿನ ವಿದ್ಯುತ್ ಕಂಬದ ಮೇನ್‌ಲೈನ್ ವೈರ್ ಕಟ್ ಆಗಿ ಬಿದ್ದಿದ್ದರೂ, ಹೆಸ್ಕಾಂ (HESCOM) ಅಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಸ್ಥಳೀಯರ ಆತಂಕ: ಜೀವ ಹೋದರೆ ಹೊಣೆ ಯಾರು?
ಅದೃಷ್ಟವಶಾತ್ ಇದುವರೆಗೆ ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಅನಾಹುತ ಸಂಭವಿಸಿಲ್ಲ. ಆದರೆ, ಸದಾ ಜನಸಂದಣಿಯಿಂದ ಇರಬಹುದಾದ

ಇದು ಅಷ್ಟೊಂದು ಸಮಸ್ಯೆ ಬಗೆಹರಿಯದ ರೀತಿಯಲ್ಲಿ ಇದಿಯಾ?

ತಹಶೀಲ್ದಾರ್ ಕಚೇರಿ ಹಿಂಭಾಗದಲ್ಲೇ ಈ ರೀತಿ ಲೈವ್ ವೈರ್ ಕಟ್ ಆಗಿ ಬಿದ್ದಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. “ಒಂದು ವೇಳೆ ಸಾರ್ವಜನಿಕರಿಗಾಗಲಿ, ಮೂಕ ಪ್ರಾಣಿಗಳಿಗಾಗಲಿ ಏನಾದರೂ ಹೆಚ್ಚು ಕಮ್ಮಿಯಾಗಿ ಜೀವಕ್ಕೆ ಆಪತ್ತು ಬಂದರೆ ಅದಕ್ಕೆ ಯಾರು ಹೊಣೆ?” ಎಂದು ಸ್ಥಳೀಯರು ನೇರವಾಗಿ ಪ್ರಶ್ನಿಸುತ್ತಿದ್ದಾರೆ.?

ಮನವಿ ಮಾಡಿದರು ಪ್ರಯೋಜನವಾಗಿಲ್ಲ!
ಶಿವಯೋಗಿ ನಗರದ ಗ್ರಾಮಸ್ಥರು ನೀಡಿರುವ ಮಾಹಿತಿ ಪ್ರಕಾರ, ಈ ಭಾಗದಲ್ಲಿ ಮೇನ್‌ಲೈನ್ ವೈರ್ ಕಟ್ ಆಗುತ್ತಿರುವುದು ಇದೇ ಮೊದಲೇನಲ್ಲ.
ಈ ಹಿಂದೆಯೂ ಸಾಕಷ್ಟು ಬಾರಿ ವೈರ್ ಕಟ್ ಆಗಿದ್ದು, ಈ ಬಗ್ಗೆ ಅಥಣಿ ತಾಲೂಕು ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಘಟಪ್ರಭಾ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಆದರೂ ಸಹ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಯಂ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಡಳಿತ ಮಂಡಳಿಗಳ ಗಮನಕ್ಕೆ ಗ್ರಾಮಸ್ಥರ ಆಗ್ರಹ
ಇನ್ನಾದರೂ ಸಂಬಂಧಪಟ್ಟ ಹೆಸ್ಕಾಂ ಅಧಿಕಾರಿಗಳು, ತಾಲೂಕು ಆಡಳಿತ, ಜಿಲ್ಲಾ ಆಡಳಿತ ಹಾಗೂ ತಾಲೂಕು ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕಿದೆ.
ಸ್ಥಳೀಯ ಶಾಸಕರು, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ಸಚಿವರು ಮತ್ತು ರಾಷ್ಟ್ರಪತಿಗಳವರೆಗೂ ಈ ಗಂಭೀರ ಸಮಸ್ಯೆಯ ಧ್ವನಿ ತಲುಪಬೇಕಿದೆ. ಇನ್ನಾದರೂ ಈ ಅಪಾಯಕಾರಿ ಮೇನ್‌ಲೈನ್ ಕಟ್ ಆಗಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆಯೇ ಅಥವಾ ಅಧಿಕಾರಿಗಳು ಎಂದಿನಂತೆ ನಿರ್ಲಕ್ಷ್ಯ ಮುಂದುವರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.


ವರದಿ: ಮಹೇಶ್ ಶರ್ಮಾ

Total Views: 0
Share This Article